Breaking News :

ಮದುವೆ ಮನೆಯಲ್ಲಿ ಮಟನ್ ಕರಿಗಾಗಿ ಹೊಡೆದಾಟ: 10 ಮಂದಿಗೆ ಗಾಯ

ಮದುವೆ ಮನೆಯಲ್ಲಿ ಮಟನ್‌ ಕರಿ ವಿಚಾರವಾಗಿ ನಡೆದ ಗಲಾಟೆಯಲ್ಲಿ 10 ಮಂದಿ ಗಾಯಗೊಂಡ ವಿಲಕ್ಷಣ ಘಟನೆ ತೆಲಂಗಾಣದ ನಿಜಾಮಾಬಾದ್‌ನ ನವಿಪೇಟ್‌ನಲ್ಲಿ ನಡೆದಿದೆ. ನವಿಪೇಟೆಯ ವಧುವಿಗೂ ನಂದಿಪೇಟ್ ಮಂಡಲದ ಬಡಗುಣ ಗ್ರಾಮದ ವರನಿಗೂ ಮದುವೆ ನಡೆಯುತ್ತಿತ್ತು. ಊಟದಲ್ಲಿ ಮಟನ್ ಕರಿ ವಿಚಾರವಾಗಿ ವಧು ಹಾಗೂ ವರನ ಸಂಬಂಧಿಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪ್ಲೇಟ್‌ಗಳು, ಗ್ಲಾಸ್‌ಗಳು, ಕುರ್ಚಿಗಳು ಮತ್ತು ಇತರ ವಸ್ತುಗಳ ಮೂಲಕ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ವರನ ಕಡೆಯ ಕೆಲವು ಯುವಕರು, ಕಡಿಮೆ ಮಟನ್ ಬಡಿಸಿದ್ದಾರೆ ಎಂದು ಅತೃಪ್ತಿಗೊಂಡು […]

ಮುಸ್ಲಿಂ ಶಾಸಕರಿಗಿದ್ದ ನಮಾಝ್ ವಿರಾಮವನ್ನು ರದ್ದುಗೊಳಿಸಿದ ಅಸ್ಸಾಂ ವಿಧಾನಸಭೆ

ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಶಾಸಕರಿಗೆ ಇದ್ದ 2 ಗಂಟೆಗಳ ವಿರಾಮವನ್ನು ಅಸ್ಸಾಂ ವಿಧಾನಸಭೆ ಶುಕ್ರವಾರ ರದ್ದು ಮಾಡಿದೆ. ಹೊಸ ನಿರ್ಧಾರದಿಂದಾಗಿ ಸದನದ ಉತ್ಪಾದಕತೆ ಹೆಚ್ಚಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಹೇಳಿದ್ದಾರೆ. 2 ಗಂಟೆ ನಮಝ್ ವಿರಾಮವನ್ನು ರದ್ದು ಮಾಡುವ ಮೂಲಕ, ಅಸ್ಸಾಂ ವಿಧಾನಸಭೆಯು ಉತ್ಪಾದಕತೆಗೆ ‍ಪ್ರಾತಿನಿಧ್ಯ ನೀಡಿದೆ. ಅಲ್ಲದೆ ವಸಾಹತು ಕಾಲದ ಆಚರಣೆಯನ್ನು ತಳ್ಳಿ ಹಾಕಿದೆ. ಈ ಪದ್ಧತಿಯನ್ನು 1937ರಲ್ಲಿ ಮುಸ್ಲಿಂ ಲೀಗ್‌ನ ಸೈಯದ್ ಸಾದುಲ್ಲಾ ಅವರು ಪ್ರಾರಂಭಿಸಿದ್ದರು. ಈ ನಿರ್ಧಾರ […]

ಷೇರುಪೇಟೆ ಸಂವೇದಿ ಸೂಚ್ಯಂಕ ಜಿಗಿತ; ನಿಫ್ಟಿ ಸಾರ್ವಕಾಲಿಕ ದಾಖಲೆ ಏರಿಕೆ

ಬಾಂಬೆ ಷೇರುಪೇಟೆ ವಹಿವಾಟು ಸತತ ಐದು ದಿನಗಳಿಂದ ಏರುಗತಿಯಲ್ಲಿ ನಡೆಯುತ್ತಿದ್ದು, ಶುಕ್ರವಾರ ಷೇರುಪೇಟೆ ಸಂವೇದಿ ಸೂಚ್ಯಂಕ 300.87 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ಮುಂದುವರಿದಿದೆ. ಷೇರುಪೇಟೆ ಸಂವೇದಿ ಸೂಚ್ಯಂಕ ಮಧ್ಯಾಹ್ನ 326.23 ಅಂಕಗಳಷ್ಟು ಏರಿಕೆಯೊಂದಿಗೆ 82,470.82 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆದಿದೆ. ಅದೇ ರೀತಿ ನಿಫ್ಟಿ 85.80 ಅಂಕ ಜಿಗಿತದೊಂದಿಗೆ 25.237.80 ಅಂಕಗಳ ಗಡಿಯಲ್ಲಿದೆ. ಬಿಎಸ್‌ ಇ, ನಿಫ್ಟಿ ಏರಿಕೆಯಿಂದ ಪವರ್‌ ಗ್ರಿಡ್‌ ಕಾರ್ಪ್‌, ಭಾರ್ತಿ ಏರ್‌ ಟೆಲ್‌, ಮಹೀಂದ್ರ & ಮಹೀಂದ್ರ, ಬಜಾಜ್‌ ಫೈನಾನ್ಸ್‌, ಸನ್‌ ಫಾರ್ಮಾ […]

ಸೌಜನ್ಯ ಪ್ರಕರಣ: ಎಲ್ಲಾ ಮೂರು ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

ಸೌಜನ್ಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ಕೋರಿಕೆ ಸೇರಿದಂತೆ ಸಲ್ಲಿಸಿದ್ದ ಎಲ್ಲಾ ಮೂರು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾ ಗೊಳಿಸಿದೆ. ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಕೂಡ ವಜಾ ಮಾಡಲಾಗಿದೆ. ಪ್ರಕರಣದಲ್ಲಿ ಸಂತೋಷ್ ರಾವ್ ಪಾತ್ರವಿಲ್ಲ ಎಂದು ಸೆಷನ್ಸ್ ಕೋರ್ಟ್ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ಈಗ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಮರು ತನಿಖೆ ಕೋರಿ ಸೌಜನ್ಯ ಪೋಷಕರು ತಾಯಿ ಕುಸುಮಾವತಿ, […]

ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ಹಿಡೆನ್ ಕ್ಯಾಮೆರಾ ಪತ್ತೆ; ಇಬ್ಬರು ವಿದ್ಯಾರ್ಥಿಗಳ ಬಂಧನ

ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ಹಾಸ್ಟೆಲ್ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ಪ್ರತಿಭಟನೆಗಳು ಭುಗಿಲೆದ್ದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರು ವಿದ್ಯಾರ್ಥಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದು ಬಂದಿದೆ. ಕೃಷ್ಣಾ ಜಿಲ್ಲೆಯ ಗುಡ್ಲವಲ್ಲೇರು ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ಹಾಸ್ಟೆಲ್ ಶೌಚಾಲಯದಲ್ಲಿ ವಿದ್ಯಾರ್ಥಿಯೊಬ್ಬರ ಕಣ್ಣಿಗೆ ಕ್ಯಾಮೆರಾ ಬಿದ್ದಿದೆ. ಇದರ ಬೆನ್ನಲ್ಲೇ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಖಾಸಗಿತನದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕ್ಯಾಮರಾದಲ್ಲಿ ದಾಖಲಾಗಿರುವ ಕೆಲ ವಿಡಿಯೋಗಳು […]

ವಿವಿಧ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ; ಸರಕಾರದಿಂದ ಜನಸಾಮಾನ್ಯರಿಗೆ ಗುಡ್ ನ್ಯೂಸ್

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ನಿಗಮಗಳಾದ ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಸವಿತಾ-ಸಮಾಜ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ (ನಿ)., ಕರ್ನಾಟಕ ಅಲೆಮಾರಿ-ಅರೆಮಾರಿ ಅಭಿವೃದ್ಧಿ […]

ಮಲಯಾಳಂ ನಿರ್ದೇಶಕ‌ ರಂಜಿತ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಯುವಕ

ಹೇಮಾ ಸಮಿತಿ ವರದಿ ಬೆನ್ನಲ್ಲಿ ಕೇರಳ ಚಿತ್ರ ರಂಗದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಖ್ಯಾತ ನಿರ್ದೇಶಕ ರಂಜಿತ್ ವಿರುದ್ಧ ಅಸ್ವಾಭಾವಿಕ ಲೈಂಗಿಕ ಕಿರುಕುಳದ ಆರೋಪದಲ್ಲಿ ಯುವಕನೋರ್ವ ದೂರು ದಾಖಲಿಸಿದ್ದಾರೆ. ಪ್ರಕರಣವು 2012ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು ಎನ್ನಲಾಗಿದ್ದು, ಚಿತ್ರರಂಗದೊಳಗಿನ ದುರ್ನಡತೆಯ ಕುರಿತು ತನಿಖೆ ನಡೆಸುತ್ತಿರುವ SIT ಪೊಲೀಸ್ ತಂಡಕ್ಕೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಕೋಯಿಕ್ಕೋಡ್‌ನ ಪಂಚತಾರಾ ಹೊಟೇಲ್ ಉದ್ಯೋಗದಲ್ಲಿರುವ ಸಂತ್ರಸ್ತ ಯುವಕ, 2012 ರಲ್ಲಿ ಕೋಝಿಕ್ಕೋಡ್‌ನಲ್ಲಿ ʼಬವುತ್ತಿಯುಡೆ ನಾಮತಿಲ್ʼ ಚಿತ್ರದ ಶೂಟಿಂಗ್‌ನಲ್ಲಿ ರಂಜಿತ್ ಅವರನ್ನು ಮೊದಲು […]

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಶುಭ ಸುದ್ದಿ: ಯೂನಿಯನ್ ಬ್ಯಾಂಕ್ ನಲ್ಲಿದೆ ಉದ್ಯೋಗಾವಕಾಶ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ತನ್ನ ಹಲವು ಶಾಖೆಗಳಲ್ಲಿ 500 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಗಸ್ಟ್​ 28ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್​ 17ರೊಳಗೆ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ 40 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆ. ಅಭ್ಯರ್ಥಿಗಳು ತಮ್ಮ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೂ ಮುನ್ನ ಅರ್ಹತಾ ಮಾನದಂಡಗಳನ್ನು ಸಂಪೂರ್ಣ ಪರಿಶೀಲಿಸಲು ಯುಬಿಐ ಬ್ಯಾಂಕ್ ಅಭ್ಯರ್ಥಿಗಳಿಗೆ ಸಲಹೆ ನೀಡಿದೆ. ಅರ್ಜಿ […]

ಅಡ್ಕತ್ತಬೈಲು ಮುಹಮ್ಮದ್ ಹಾಜಿ ಕೊಲೆ ಪ್ರಕರಣ, ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ

ಕಾಸರಗೋಡಿನಲ್ಲಿ 2008ರಲ್ಲಿ ಗಲಭೆ ಸಂದರ್ಭ ಅಡ್ಕತ್ತಬೈಲ್ ಸಮೀಪದ ಸಿ.ಎ.ಮುಹಮ್ಮದ್ ಹಾಜಿ (56) ಎಂಬವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳಿಗೆ ಕಠಿಣ ಜೀವಾವಧಿ ಸಜೆ ಮತ್ತು ತಲಾ ಒಂದು ಲಕ್ಷ ರೂ. ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಸಂತೋಷ್ ನಾಯ್ಕ್ (36), ಕೆ. ಶಿವ ಪ್ರಸಾದ್ (40) , ಕೆ. ಅಜಿತ್ ಕುಮಾರ್ (39), ಕಿಶೋರ್ ಕುಮಾರ್ (39) ಶಿಕ್ಷೆಗೊಳಗಾದ ಆರೋಪಿಗಳು. 2008ರ ಎ.18ರಂದು ಮಸೀದಿಯಿಮದ ಮನೆಗೆ ತೆರಳುವಾಗ ಮುಹಮ್ಮದ್ ಹಾಜಿ […]

ಭಾರೀ ಮಳೆಯ ಮಧ್ಯೆ ಎಲ್ಲಿ ನೋಡಿದ್ರಲ್ಲಿ ಮೊಸಳೆ; ಆತಂಕಿತರಾದ ಜನ

ಗುಜರಾತ್‌ನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಸೃಷ್ಟಿಯಾಗಿದೆ. ಈ ಮಧ್ಯೆ ನದಿಯಲ್ಲಿದ್ದ ಮೊಸಳೆಗಳು ನಗರ ಪ್ರದೇಶಕ್ಕೆ ಬರುತ್ತಿದ್ದು, ಜನರು ಆತಂಕಿತರಾಗಿದ್ದಾರೆ. ವಡೋದರಾದಲ್ಲಿ ನಗರ ಪ್ರದೇಶದಲ್ಲಿ 15 ಅಡಿಯ ದೈತ್ಯ ಮೊಸಳೆ ಕಂಡು ಬಂದಿದೆ. ರಕ್ಷಣಾ ತಂಡವು ಬೃಹತ್ ಗಾತ್ರದ ಮೊಸಳೆಯನ್ನು ಸೆರೆಹಿಡಿದಿದೆ. ಅದೇ ರೀತಿ ವಡೋದರಾದ ಫತೇಗುಂಜ್ ಪ್ರದೇಶದ ಕಾಮನಾಥ್ ನಗರದ ನಿವಾಸಿಗಳು ಮೊಸಳೆಯೊಂದು ಪ್ರವಾಹದ ನೀರಿನಲ್ಲಿ ಬಂದು ಕಾಲೋನಿಯ ಮನೆಗೆ ತಲುಪಿದ್ದನ್ನು ನೋಡಿ ಆತಂಕಕ್ಕೀಡಾಗಿದ್ದಾರೆ. ನಂತರ ಮೊಸಳೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಕಮಲನಾಥ್ ನಗರದ ಮನೆಯೊಂದಕ್ಕೆ […]