Breaking News :

ರಾಹುಲ್ ಗಾಂಧಿಯ ರಾಜಕೀಯ ಶೈಲಿಯಲ್ಲಿ ಬದಲಾವಣೆಯಾಗಿದೆ; ರಾಹುಲ್ ಗಾಂಧಿಯನ್ನು ಹೊಗಳಿ ಸ್ಮೃತಿ ಇರಾನಿ ಏನೆಲ್ಲಾ ಹೇಳಿದ್ರು? ಡಿಟೇಲ್ಸ್…

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಯಶಸ್ಸಿನ ಹೊಸ ಹೊಸ ರಾಜಕೀಯ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದು, ಈ ಕುರಿತ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದೆ. ‘ಟಾಪ್‌ ಆಯಂಗಲ್’ ಪಾಡ್‌ಕಾಸ್ಟ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸ್ಮೃತಿ ಇರಾನಿ, ‘ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುವುದು, ಪ್ರಚೋದಕಾರಿ ಹೇಳಿಕೆಗಳನ್ನು ನೀಡುವುದು ರಾಹುಲ್ ಗಾಂಧಿ ಅವರ ಹೊಸ ತಂತ್ರಗಾರಿಕೆಯ ಭಾಗವಾಗಿದೆ. ಅವರು ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದು, ನಿರ್ದಿಷ್ಟ ಸಮುದಾಯಗಳನ್ನು ಸೆಳೆಯುವಲ್ಲಿ ಯಶಸ್ಸಿಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರ ಕೆಲಸಗಳನ್ನು […]

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ವಿಚಾರ; ಮತ್ತೆ ವಿಚಾರಣೆ ಮುಂದೂಡಿದ ಹೈಕೋರ್ಟ್, ಕೋರ್ಟ್ ನಲ್ಲಿ ಮಹತ್ವದ ವಿಚಾರ ಉಲ್ಲೇಖಿಸಿ ವಾದಿಸಿದ ಅಭಿಷೇಕ್‌ ಮನು ಸಿಂಘ್ವಿ

ಬೆಂಗಳೂರು:ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವ ಆದೇಶದ ಕುರಿತ ವಿಚಾರಣೆಯನ್ನು ಮತ್ತೆ ಕರ್ನಾಟಕ ಹೈಕೋರ್ಟ್ ಮುಂದೂಡಿದೆ. ಈ ಬಗ್ಗೆ ಹೈಕೋರ್ಟ್ ನಲ್ಲಿ ಇಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರ ಏಕಪೀಠ ವಿಚಾರಣೆ ನಡೆಸಿತು. ವಾದ ಆಲಿಸಿದ ಪೀಠವು ವಿಚಾರಣೆನ್ನು ಆಗಸ್ಟ್ 31ಕ್ಕೆ ಮುಂದೂಡಿದೆ. ಸಿಎಂ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿರುದ್ಧ ಕೇಳಿಬಂದ ಆರೋಪಗಳಿಗೆ ಯಾವುದೇ ಶೋಕಾಸ್‌ ನೋಟಿಸ್‌ […]

ಮಲಯಾಳಂ ಚಿತ್ರರಂಗದಲ್ಲಿ ತನಗಾದ ಅನುಭವ ತೆರೆದಿಟ್ಟ ನಟಿ ಶಕೀಲಾ

ಮಲಯಾಳಂ ಚಿತ್ರರಂಗದಲ್ಲಿ ಮಿಂಚಿದ ನಟಿ ಶಕೀಲಾ ಸದ್ಯ ಬಣ್ಣದ ಪ್ರಪಂಚದಿಂದ ದೂರ ಉಳಿದುಬಿಟ್ಟಿದ್ದಾರೆ. ತನಗಾದ ಕಷ್ಟಗಳನ್ನು ಆಗಾಗ ಸಂದರ್ಶನಗಳಲ್ಲಿ ಶಕೀಲಾ ಹಂಚಿಕೊಳ್ಳುತ್ತಾರೆ. ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮೀ ಟೂ ಆರೋಪ ಮತ್ತು ಹೇಮಾ ಮಹಿಳಾ ಸಮಿತಿ ಸಲ್ಲಿಸಿರುವ ವರದಿ ಬಗ್ಗೆ ಶಕೀಲಾ ಪ್ರತಿಕ್ರಿಯೆ ನೀಡಿದ್ದಾರೆ. ರೂಪಾಶ್ರೀ ಎಂದ ನಟಿ ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದೆ, ಆ ಸಮಯದಲ್ಲಿ ನಾಲ್ಕು ಜನರು ಮಧ್ಯಪಾನ ಸೇವಿಸಿ ರೂಪಾಶ್ರೀ ಕೋಣೆಗೆ ಬಲವಂತವಾಗಿ ಹೋಗಲು ಪ್ರಯತ್ನ ಪಟ್ಟಿದ್ದಾರೆ ಆ ವಿಚಾರ ನನ್ನ ಕಿವಿಗೆ […]

ಸ್ವಯಂ ಉದ್ಯೋಗಕ್ಕೆ 5 ಲಕ್ಷ ಬಡ್ಡಿರಹಿತ ಸಾಲ: ಅರ್ಜಿ ಸಲ್ಲಿಕೆ ಹೇಗೆ ಗೊತ್ತಾ?

ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ‘ಲಖ್‌ಪತಿ ದೀದಿ ಯೋಜನೆ’ ಜಾರಿಗೆ ತಂದಿದೆ. ಸ್ವಯಂ ಉದ್ಯೋಗ ಕಲ್ಪಿಸಿ ಬಡತನ ನಿರ್ಮೂಲನೆ ಮೂಲಕ ಮಹಿಳೆಯರು ಆರ್ಥಿಕ ಸಬಲರಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ 5 ಲಕ್ಷ ರೂಪಾಯಿವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ಮಹಿಳೆಯರಿಗೆ ತಮ್ಮ ಸ್ವಂತ ಉದ್ಯಮವನ್ನು ಆರಂಭಿಸಿ ತಮ್ಮದೇ ಕಾಲುಗಳ ಮೇಲೆ ನಿಂತು ಬದುಕು ಕಟ್ಟಿಕೊಳ್ಳಲು ಈ ಸಾಲ ಸೌಲಭ್ಯ ನೆರವಾಗುತ್ತದೆ. ಈ ಯೋಜನೆಯ ಭಾಗವಾಗಿ, […]

ಮಲಯಾಳಂ ಚಿತ್ರರಂಗದ ಹಿರಿಯ ನಟ, ಶಾಸಕ ಮುಕೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಹೇಮಾ‌ ಸಮಿತಿ ವರದಿಯ ಬೆನ್ನಲ್ಲೇ ಕೇರಳ ಚಲನಚಿತ್ರ ರಂಗದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಇದೀಗ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಕೇರಳದ ಆಡಳಿತಾರೂಡ ಸಿಪಿಐ(ಎಂ) ಶಾಸಕ, ಮಲಯಾಳಂ ಚಿತ್ರರಂಗದ ಖ್ಯಾತ ನಟ ಮುಕೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ನಟ ಮುಕೇಶ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ನಟಿಯೊಬ್ಬರ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬುಧವಾರ ರಾತ್ರಿ ಕೊಚ್ಚಿ ನಗರದ ಮಾರಾಡು ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ […]

ವಿವಿ ಸಿಂಡಿಕೇಟ್ ಗೆ ಯುಟಿ ಫರ್ಝಾ‌ನ ನಾಮ ನಿರ್ದೇಶನ: ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧ

ಯು.ಟಿ.ಫರ್ಝಾನಾ ಅಶ್ರಫ್‌ ಅವರನ್ನು ಬೆಂಗಳೂರು ಸೆಂಟ್ರಲ್‌ ಯೂನಿವರ್ಸಿಟಿ ಸಿಂಡಿಕೇಟ್‌ ಸದಸ್ಯೆಯಾಗಿ ನಾಮ ನಿರ್ದೇಶನ ಮಾಡಿರುವುದು ಹಲವು ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಕಾಂಗ್ರೆಸ್‌ ಮುಖಂಡೆಯರಾದ ಕವಿತಾ ರೆಡ್ಡಿ ಹಾಗೂ ರೇಖಾ ಶ್ರೀನಿವಾಸ್‌ ಬಹಿರಂಗವಾಗಿಯೇ ಅಸಮಧಾನ ತೋಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕವಿತಾ ರೆಡ್ಡಿ, ಪ್ರತಿದಿನ ಬಿಜೆಪಿಯ ದಾಳಿಯನ್ನು ಸಹಿಸಿಕೊಳ್ಳುತ್ತಾ ಪಕ್ಷಕ್ಕಾಗಿ ದುಡಿಯುತ್ತಿರುವ ಮಹಿಳೆ ರೇಖಾ ಶ್ರೀನಿವಾಸ್‌ ಅವರಿಗೆ ಇದರಿಂದ ಭಾರೀ ಅನ್ಯಾಯವಾಗಿದೆ ಎಂದಿದ್ದರೆ, ರೇಖಾ ಶ್ರೀನಿವಾಸ್‌ ಅವರು ಪ್ರತಿಕ್ರಿಯಿಸಿ, ಪಕ್ಷ ಕಟ್ಟಿದ ಸಾವಿರಾರು ಹೆಣ್ಣು […]

ಪತಿಗೆ ತಾನೇ ಮುಂದೆ ನಿಂತು 2ನೇ ವಿವಾಹ ಮಾಡಿಸಿದ ಪತ್ನಿ; ಅಪರೂಪದ ಘಟನೆ

ಪತ್ನಿಯೋರ್ವಳು ಪತಿಗೆ ತಾನೇ ಮುಂದೆ ನಿಂತು 2ನೇ ವಿವಾಹ ಮಾಡಿರುವ ಅಪರೂಪದ ಘಟನೆ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಸುರೇಶ್ ಹಾಗೂ ಸರಿತಾ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಗಂಡು ಮಗುವಿದೆ. ಅದೇ ಸಮಯದಲ್ಲಿ ಸುರೇಶ್ಗೆ ಸಂಧ್ಯಾ ಎಂಬ ಯುವತಿ ಮೇಲೆ ಲವ್ ಆಗಿದೆ. ಸಂಧ್ಯಾ, ಮಾನಸಿಕ ಅಸ್ವಸ್ಥೆಯಾಗಿದ್ದಾಳೆ. ಸಂಧ್ಯಾ ಅವರ ತಂದೆ ತಾಯಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈಕೆ ಎರಡನೇ ಮಗಳು. ಮೊದಲ ಮಗಳಿಗೆ ಈಗಾಗಲೇ ಮದುವೆಯಾಗಿದೆ. ಈ ಸಂಧ್ಯಾ, ಸುರೇಶ್ ಅವರ ಸಂಬಂಧಿಕರ ಮಗಳು. […]

ಹೆಣ್ಣುಮಕ್ಕಳ ವಿವಾಹ ಪ್ರಾಯ 18 ರಿಂದ 21ಕ್ಕೆ ಏರಿಕೆ ಮಾಡಿದ ರಾಜ್ಯ: ಈ ಕುರಿತ ಬಿಲ್ ವಿಧಾನ ಸಭೆಯಲ್ಲಿ ಅಂಗೀಕಾರ

ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೇ ಏರಿಕೆ ಮಾಡುವ ಮಸೂದೆಯನ್ನು ಹಿಮಾಚಲ ಪ್ರದೇಶದ ಮುಂಗಾರು ಅಧಿವೇಶನದಲ್ಲಿ ವಿಧಾನಸಭೆ ಅಂಗೀಕರಿಸಿದೆ. ಇದೀಗ ಅಂತಿಮ ಅನುಮೋಧನೆಗಾಗಿ ಮಸೂದೆಯನ್ನು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಲಾಗಿದೆ. ಬಾಲ್ಯ ವಿವಾಹ ನಿಷೇಧ ಮಸೂದೆ-2024ನ್ನು ಮಂಗಳವಾರ ವಿಧಾನಸಭೆಯಲ್ಲಿ ಸವಾರ್ನುಮತದಿಂದ ಅಂಗೀಕರಿಸಲಾಗಿದೆ. ಈ ಮೂಲಕ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 3 ವರ್ಷ ಏರಿಕೆ ಮಾಡಲಾಗಿದೆ. ಗಂಡು ಮತ್ತು ಹೆಣ್ಣು ನಡುವಿನ ಲಿಂಗ ಸಮಾನತೆ ನೀಡಲು ಇಬ್ಬರ ವಿವಾಹದ ವಯಸ್ಸನ್ನು 21 ವರ್ಷಕ್ಕೆ ಇಡುವುದು ಸರಿಯಾಗಿದೆ ಎಂದು ಸಚಿವ ಧನಿರಾಮ್‌ […]

ಪ್ಯಾರಸಿಟಮಲ್ ಮಾತ್ರೆ ಅತಿಯಾಗಿ ತೆಗೆದುಕೊಂಡರೆ ಏನೆಲ್ಲಾ ತೊಂದರೆಯಿದೆ? ಡಿಟೇಲ್ಸ್…

ಜನರು ತಲೆನೋವು, ಜ್ವರ‍‌‍ ಬಂದರೆ ಕ್ಯಾಲ್ಪೋಲ್, ಕ್ರೋಸಿನ್, ಡೋಲೋ ಮುಂತಾದ ಪ್ಯಾರಸಿಟಮಾಲ್ ಸೇವಿಸುತ್ತಾರೆ.ವೈದ್ಯರ ಸಲಹೆ ಇಲ್ಲದೆ ಮನೆಯಲ್ಲಿಯೇ ಪ್ಯಾರಸಿಟಮಾಲ್ ತೆಗೆದುಕೊಳ್ಳುತ್ತಾರೆ. ಪ್ಯಾರಾಸಿಟಮಾಲ್ ಸ್ಟೀರಾಯ್ಡ್ ಗಳನ್ನು ಹೊಂದಿದ್ದು, ಅದರ ಅನುಚಿತ ಡೋಸೇಜ್ ನಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಪ್ಯಾರಾಸಿಟಮಾಲ್ ಅನ್ನು ಸಾಮಾನ್ಯವಾಗಿ ಜ್ವರ, ಮೈಗ್ರೇನ್, ಅವಧಿ ನೋವು, ತಲೆನೋವು, ಮೈಕೈ ನೋವು ಮುಂತಾದ ಪರಿಸ್ಥಿತಿಗಳಲ್ಲಿ ಬಳಸಲಾಗುತ್ತದೆ. ಇದು ಕ್ಯಾಲ್ಪೋಲ್, ಕ್ರೋಸಿನ್, ಡೋಲೋ, ಸುಮೋ ಎಲ್, ಕಬಿಮೋಲ್, ಪ್ಯಾಸಿಮೋಲ್ ಮುಂತಾದ ಹೆಸರುಗಳಲ್ಲಿ ಸಾಮಾನ್ಯ ಔಷಧಿ ಅಂಗಡಿಗಳಲ್ಲೂ ಲಭ್ಯವಿದೆ. ಮಾರ್ಗಸೂಚಿಯ ಪ್ರಕಾರ […]

ಮಕ್ಕಳು ಮೊಬೈಲ್ ಹೆಚ್ಚು ಬಳಸಿದರೆ ಏನಾಗುತ್ತೆ? ಮಕ್ಕಳು ಅಳ್ತಾರೆಂದು ಮೊಬೈಲ್ ಕೊಡುವವರಿಗೆ ಈ ವಿಚಾರ ತಿಳಿದಿರಲಿ..

ಮಕ್ಕಳು ಊಟ, ತಿಂಡಿ, ಕಾಫಿಯಿಂದ ಹಿಡಿದು ಮಲಗುವ ವರೆಗೂ ಮೊಬೈಲ್ ನಲ್ಲಿ ಆಟವಾಡುತ್ತಿರುತ್ತಾರೆ. ಮೊಬೈಲ್ ಕೊಟ್ಟಿಲ್ಲ ಎಂದರೆ ಮಕ್ಕಳು ಹಠ ಹಿಡಿದು ಅಳುತ್ತಿರುತ್ತದೆ‌. ಹೆಚ್ಚು ಸಮಯ ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂಬುದು ನಮಗೆ ತಿಳಿದೇ ಇದೆ. ದೃಷ್ಟಿ ದೋಷ, ಶ್ರವಣ ದೋಷ ಸೇರಿ ಹತ್ತು ಹಲವು ಸಮಸ್ಯೆಗೆ ನಾವು ಒಳಗಾಗುತ್ತೇವೆ. ಆದರೆ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾದರೆ ಮಕ್ಕಳಿಗೆ ಯಾವ ಸಮಸ್ಯೆ ಉಂಟಾಗುತ್ತಿದೆ ಎಂಬುದನ್ನು ನಾವು ತಿಳಿದುಕೊಳ್ಳೋಣ… ಮಕ್ಕಳ ಮಾನಸಿಕ ಆರೋಗ್ಯದ ಮೇಲೆ […]