Breaking News :

ಪ್ರವಾಸೋದ್ಯಮ/ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

  ಜನವಾಹಿನಿ NEWS ಮಡಿಕೇರಿ : ಪ್ರವಾಸೋದ್ಯಮ ಇಲಾಖೆಯಿಂದ 2024-25 ಹಾಗೂ 2025-26 ನೇ ಸಾಲಿನಲ್ಲಿ ಪ್ರವಾಸೋದ್ಯಮ/ ಅತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಪ್ಟ್ ಇನ್ಸ್‍ಟ್ಯೂಟ್(ಎಫ್‍ಸಿಐ), ಮೈಸೂರು ಇನ್ಸ್‍ಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‍ಮೆಂಟ್ (ಐಎಚ್‍ಎಂ) ಬೆಂಗಳೂರು ರವರ ಮೂಲಕ ವಸತಿ ಸಹಿತ ಕಾರ್ಯಕ್ರಮ ಜಾರಿಗೊಳಿಸಲು ಉದ್ದೇಶಿಸಲಾಗಿದೆ.  ಕಾರ್ಯಕ್ರಮಗಳ ವಿವರ –ಆಹಾರ ಮತ್ತು ಪಾನೀಯ ಸೇವೆಯ ಉಸ್ತುವಾರಿ, ಕನಿಷ್ಟ […]

ಭರತನಾಟ್ಯ ಜೂನಿಯರ್ ಪರೀಕ್ಷೆ : ಭಾರತೀಯ ನೃತ್ಯ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಶೇ.೧೦೦ ರಷ್ಟು ಫಲಿತಾಂಶ

  ಜನವಾಹಿನಿ NEWS ಸಿದ್ದಾಪುರ  : ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯವು ೨೦೨೪-೨೫ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಭಾರತೀಯ ನೃತ್ಯ ಕಲಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಶೇ ೧೦೦ ರಷ್ಟು ಫಲಿತಾಂಶವನ್ನು ನೀಡಿದ್ದಾರೆ. ನೃತ್ಯ ಕಲಾ ಶಾಲೆಯ ಸಿದ್ದಾಪುರದ ವಿದ್ಯಾರ್ಥಿಗಳಾದ ಹೆಚ್.ಆರ್. ರ‍್ಷಿತ, ಕೆ.ಆರ್. ಅದಿತ್ರಿ, ವಿ.ಜೆ. ಸಿಂಚನ, ಹೆಚ್.ಎಲ್. ಧೃತಿಕ ಮತ್ತು ಕೆ.ಎಸ್. ಜೀಶ್ನ ಇವರುಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಭಾರತೀಯ ನೃತ್ಯ ಕಲಾ ಶಾಲೆಯ ನೃತ್ಯ ಗುರು […]

ಭರತನಾಟ್ಯ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತೀರ್ಥಪ್ರಿಯ 

  ಜನವಾಹಿನಿ NEWS ಸಿದ್ದಾಪುರ : 2024-25ನೇ ಸಾಲಿನ ಡಾಕ್ಟರ್ ಗಂಗೂಬಾಯಿ ಹಾನಗಲ್ ಸಂಗೀತ ಕಲಾ ವಿಶ್ವವಿದ್ಯಾಲಯ ಮೈಸೂರಿನಲ್ಲಿ ನಡೆದ ಜೂನಿಯರ್ ಭರತನಾಟ್ಯ ಪರೀಕ್ಷೆಯಲ್ಲಿ ಪಿ.ಎಂ.ಶ್ರೀ ನವೋದಯ ವಿದ್ಯಾಲಯದ 9 ನೇ ತರಗತಿಯ ವಿದ್ಯಾರ್ಥಿನಿ ತೀರ್ಥಪ್ರಿಯ. ಎಂ ಬಿ, 94.5% ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ತೀಥಪ್ರಿಯಾ ಅವರು ಕಳೆದ ಆರು ವರ್ಷಗಳಿಂದ ಜಗನ್ಮೋಹನ ನಾಟ್ಯಾಲಯ, ಶಿಕ್ಷಕ ರಾಜೇಶ್ ಆಚಾರ್ಯರವರ ಮಾರ್ಗದರ್ಶನದಲ್ಲಿ ನೃತ್ಯ ಕಲಿಯುತ್ತಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ಕಲೆ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿರುವುದು ಅವರ ವೈಶಿಷ್ಟ್ಯ. […]

ಸುಳ್ಯದ ಪಿಜಿಯಲ್ಲಿ ಕೊಡಗಿನ ವಿದ್ಯಾರ್ಥಿ ಆತ್ಮಹತ್ಯೆ

  ಸುಳ್ಯದ ಪಿಜಿಯಲ್ಲಿ ಕೊಡಗಿನ ವಿದ್ಯಾರ್ಥಿ ಆತ್ಮಹತ್ಯ ಮಡಿಕೇರಿ : ವಿದ್ಯಾರ್ಥಿಯೋರ್ವ ತಾನು ತಂಗಿದ್ದ ಪಿಜಿಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಲ್ಲುಬಾಣೆ ನಿವಾಸಿ ವಿಜು ಹಾಗೂ ಸುಮತಿ ದಂಪತಿಗಳ ಪುತ್ರ ಅಭಿ (20) ಯುವಕನೇ  ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಪುತ್ರ ಸುಳ್ಯದಲ್ಲಿ ಶಿಕ್ಷಣ ಪಡೆಯುತ್ತಿದ್ದ ಈತ ತಂಗಿದ್ದ PG ಯಲ್ಲಿ ಇಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಇನ್ನೂ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸರ ತನಿಖೆಯ […]

ಕೊಡಗಿನಲ್ಲಿ ಕಾನೂನು ಪದವಿ ಕಾಲೇಜು ಪ್ರಾರಂಭ

ಮಡಿಕೇರಿ : ಗೋಣಿಕೊಪ್ಪಲು ಕಾವೇರಿ ಎಜುಕೇಷನ್‌ಸೊಸೈಟಿ ಆಧೀನದಲ್ಲಿರುವ ವೀರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಕಾನೂನು ಪದವಿ ಕಾಲೇಜನ್ನು ಆರಂಭಿಸಲು ಅನುಮತಿ ದೊರೆತ್ತಿದ್ದು, ಆ.೨೮ರೊಳಗೆ ವಿದ್ಯಾರ್ಥಿಗಳು ನೋಂದಣಿ ಮಾಡಕೊಳ್ಳಬೇಕು ಎಂದು ಗೋಣಿಕೊಪ್ಪ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸುಗುಣ ಮುತ್ತಣ್ಣ ತಿಳಿಸಿದ್ದಾರೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕಾನೂನು ಕಾಲೇಜು ಪ್ರಾರಂಭಿಸಬೇಕು ಮತ್ತು ಇಲ್ಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಾನೂನು ಪದವಿ ಶಿಕ್ಷಣವನ್ನು ಕೊಡಿಸುವ ಪ್ರಯತ್ನದಲ್ಲಿ ಸಫಲರಾಗಿದ್ದೇವೆ. ಈ ನಿಟ್ಟಿನಲ್ಲಿ ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ವೀರಾಜಪೇಟೆಯ ಕಾವೇರಿ […]

ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹಾಕತೂರು ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ : ನಾವು ಉತ್ತಮ ನಾಗರಿಕರಾಗಬೇಕೆನ್ನುವ ಗುರಿ ಪ್ರತಿಯೊಬ್ಬರಿಗೆ ಇರಬೇಕು : ಕವನ್ ಭೀಷ್ಮ 

    ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹಾಕತೂರು ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ : ನಾವು ಉತ್ತಮ ನಾಗರಿಕರಾಗಬೇಕೆನ್ನುವ ಗುರಿ ಪ್ರತಿಯೊಬ್ಬರಿಗಿರಬೇಕು : ಕವನ್ ಭೀಷ್ಮ  ಮಡಿಕೇರಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಎಪ್ಪತ್ತೊಂಭತ್ತನೇ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಹಾಕತ್ತೂರು ಪ್ರೌಢಶಾಲೆಯಲ್ಲಿ ಕಳೆದ ಸಾಲಿನ ವಾರ್ಷಿಕ ಪರೀಕ್ಷಾ ಫಲಿತಾಂಶ ಶೇ.ನೂರು ಬರಲು ಕಾರಣಕರ್ತರಾದ ಶಾಲಾ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸ್ಥಳಿಯ ದಾನಿಗಳಾದ ಕವನ್ ಭೀಷ್ಮ ಮಾತನಾಡಿ, ನಾವು ಉತ್ತಮ ನಾಗರಿಕರಾಗಬೇಕೆನ್ನುವ ಗುರಿ […]

ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ  ಸ್ವಾತಂತ್ರ್ಯ ದಿನಾಚರಣೆ

  ಕುಶಾಲನಗರ : ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ  ಶಾಲೆಯ ಎನ್.ಎಸ್.ಎಸ್, ಸ್ಕೌಟ್ಸ್, ಗೈಡ್ಸ್ ಸಂಸ್ಥೆ, ವಿದ್ಯಾರ್ಥಿ ಸಂಘ ಹಾಗೂ ಎಸ್ ಡಿ ಎಂ ಸಿ ಸಹಯೋಗದಲ್ಲಿ 79 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ- ಸಡಗರದಿಂದ ಆಚರಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ : ಮಹಿಳಾ ಸಂಘದಿಂದ ಸರಕಾರಿ ಶಾಲೆಗೆ ಸಿಸಿ ಕ್ಯಾಮೆರಾ ಕೊಡುಗೆ

  ಸ್ವಾತಂತ್ರ್ಯ ದಿನಾಚರಣೆ : ಮಹಿಳಾ ಸಂಘದಿಂದ ಸರಕಾರಿ ಶಾಲೆಗೆ ಸಿಸಿ ಕ್ಯಾಮೆರಾ ಕೊಡುಗೆ ಮಡಿಕೇರಿ : ಸೋಮವಾರಪೇಟೆ ತಾಲೂಕಿನ ತಣ್ಣೀರುಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ 79ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್ ಮೈಕ್ರೋ ಫೈನಾನ್ಸ್ ಹಾಗೂ ಗ್ರಾಮೀಣ ಕೂಟ ಸಂಘದ ಮಹಿಳಾ ಸದಸ್ಯರು ಶಾಲೆಗೆ ಸೋಲಾರ್ ಸಿಸಿ ಕ್ಯಾಮರಾ ವನ್ನು ಮುಖ್ಯ ಶಿಕ್ಷಕಿ ಶಾಂತಮ್ಮ ಅವರಿಗೆ ಹಸ್ತಾಂತರಿಸುವ ಮೂಲಕ […]

ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದಂತಹ ಮಹನೀಯರನ್ನು ಯುವ ಪೀಳಿಗೆ ಎಂದಿಗೂ ಸ್ಮರಿಸಬೇಕು : ಮಂಜುಳ

  ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದಂತಹ ಮಹನೀಯರನ್ನು ಯುವ ಪೀಳಿಗೆ ಎಂದಿಗೂ ಸ್ಮರಿಸಬೇಕು : ಮಂಜುಳ ಸಿದ್ದಾಪುರ : ಗುಹ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79 ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಮಂಜುಳ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯಂದು ಮಾತ್ರವಲ್ಲ ಸ್ವಾತಂತ್ಯಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದಂತಹ ಮಹನೀಯರನ್ನು ಯುವ ಪೀಳಿಗೆ ಎಂದಿಗೂ ಸ್ಮರಿಸಬೇಕು ಎಂದರು. ಬಳಿಕ ಮುಖ್ಯ ಶಿಕ್ಷಕಿಯ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ […]

ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ

ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ ಮಡಿಕೇರಿ : ಕೊಡಗು ಜಿಲ್ಲಾಡಳಿತ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯು ನಗರದ ಕೋಟೆ ಆವರಣದಲ್ಲಿ ಮಳೆಯ ನಡುವೆ ಶುಕ್ರವಾರ ಅರ್ಥಪೂರ್ಣ ನಡೆಯಿತು. ‌ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಧ್ವಜಾರೋಹಣ ನೆರವೇರಿಸಿದರು. ಶಾಸಕರಾದ ಡಾ.ಮಂತರ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ […]