Breaking News :

ಕೂರ್ಗ್ ಸಿನೆಪ್ಲಕ್ಸ್ ಗೋಣಿಕೊಪ್ಪಲು -ಶೀಘ್ರವೇ ಚಿತ್ರಮಂದಿರ ಆರಂಭ

ಕೂರ್ಗ್ ಸಿನೆಪ್ಲಕ್ಸ್ ಗೋಣಿಕೊಪ್ಪಲು -ಶೀಘ್ರವೇ ಚಿತ್ರಮಂದಿರ ಆರಂಭ ಗೋಣಿಕೊಪ್ಪ : ಸಿನಿಮಾ ಮನರಂಜನೆಯ ಕ್ಷಾಮ ಎದುರಿಸುತ್ತಿದ್ದ ಗೋಣಿಕೊಪ್ಪಲಿನಲ್ಲಿ ಶೀಘ್ರದಲ್ಲಿಯೇ ನೂತನ ಚಿತ್ರಮಂದಿರ ಪ್ರದರ್ಶನ ಆರಂಭಗೊಳ್ಳಲಿದೆ. ಗೋಣಿಕೊಪ್ಪಲು ಗ್ರಾಮಾಂತರ ಸಹಕಾರ ಬ್ಯಾಂಕ್ ನ ನೂತನ ವಾಣಿಜ್ಯ ಸಂಕೀರ್ಣದಲ್ಲಿ 182 ಸೀಟ್ ವ್ಯವಸ್ಥೆ ಇರುವ ಕೂರ್ಗ್ ಸಿನೆಪ್ಲಕ್ಸ್ ನಲ್ಲಿ ಇಂದು ಸರಳವಾಗಿ ಪೂಜಾ ಕಾರ್ಯಕ್ರಮ ನಡೆಯಿತು. ಗೋಣಿಕೊಪ್ಪಲು ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಅರ್ಚಕ ಶಂಕರ ನಾರಾಯಣ ಅವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಆಗಸ್ಟ್ 15 ರಂದು ಪ್ರದರ್ಶನ […]

ರಾಷ್ಟ್ರ ಪ್ರಶಸ್ತಿ ವಿಜೇತ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಸನ್ಮಾನಿಸಿದ ಯದುವೀರ್ ಒಡೆಯರ್

ರಾಷ್ಟ್ರ ಪ್ರಶಸ್ತಿ ವಿಜೇತ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಸನ್ಮಾನಿಸಿದ ಯದುವೀರ್ ಒಡೆಯರ್ ಮಡಿಕೇರಿ : ಕಂದೀಲು ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಮಡಿಕೇರಿಯ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರನ್ನು ಕೊಡಗು ಪತ್ರಕತ೯ರ ಸಂಘದ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ಸಂಸದ ಯದುವೀರ್ ಒಡೆಯರ್ ಸನ್ಮಾನಿಸಿ ಗೌರವಿಸಿದರು. ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತ ಕೊಡಗು ಪತ್ರಕತ೯ರ ಸಂಘದ ವಿಷನ್ ಕೊಡಗು ಕಾಯ೯ಕ್ರಮದಲ್ಲಿ, ಕಂದೀಲು ಕನ್ನಡ ಚಿತ್ರಕ್ಕಾಗಿ ಅತ್ಯುತ್ತಮ ಪ್ರಾದೇಶಿಕ ಕನ್ನಡ ಚಿತ್ರ ಎಂಬ ರಾಷ್ಟ್ರಪ್ರಶಸ್ತಿ […]

ಮೊದಲ ದಿನವೇ ಪ್ರೇಕ್ಷಕರ ಮನಗೆದ್ದ ಎಲ್ಟು ಮುತ್ತಾ : ಪುಟ್ಟ ಬಾಲಕಿಯ ನಟನೆಗೆ ಪ್ರೇಕ್ಷರು ಫಿದಾ

ಮೊದಲ ದಿನವೇ ಪ್ರೇಕ್ಷಕರ ಮನಗೆದ್ದ ಎಲ್ಟು ಮುತ್ತಾ : ಬಾಲಕಿಯ ನಟನೆಗೆ ಪ್ರೇಕ್ಷರು ಫಿದಾ ಮಡಿಕೇರಿ : ಕೊಡಗಿನಲ್ಲಿ ಚಿತ್ರೀಕರಣಗೊಂಡು ಇಂದು ಬೆಳ್ಳಿ ತೆರೆ ಕಂಡಿರುವ ಕನ್ನಡದ ಎಲ್ಟು ಮುತ್ತಾ ಸಿನಿಮಾ ಮೊದಲ ದಿನವೇ ಪ್ರೇಕ್ಷಕರ ಮನಗೆದಿದ್ದು, ಉತ್ತಮ ಸ್ಪಂದನೆ ದೊರೆತಿದೆ. ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಕೊಡಗಿನ ಎಲ್ಟು ಮುತ್ತಾ ಸಿನಿಮಾ ಕೊಡಗಿನ ಕಲಾವಿದರ ಪಾಲಿಗೆ ಹೊಸ ಅಧ್ಯಾಯವನ್ನೇ ಸೃಷ್ಟಿಸಿದೆ. ಪ್ರೇಕ್ಷಕರು ಕೂಡ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಕೊಡಗಿನ ಸಂಸ್ಕೃತಿ ಹಾಗೂ ಇಲ್ಲಿನ […]

ಆ.೧ಕ್ಕೆ ಕನ್ನಡದ ಎಲ್ಟು ಮುತ್ತಾ ಚಿತ್ರ ಬಿಡುಗಡೆ

ಆ.೧ಕ್ಕೆ ಕನ್ನಡದ ಎಲ್ಟು ಮುತ್ತಾ ಚಿತ್ರ ಬಿಡುಗಡೆ ಮಡಿಕೇರಿ : ಹೈ೫ ಸ್ಟುಡಿಯೋಸ್ ಹಾಗೂ ಎಸಿಇ ೨೨ ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಕನ್ನಡದ ಎಲ್ಟು ಮುತ್ತಾ ಚಿತ್ರ ಆ.೧ಕ್ಕೆ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಸತ್ಯ ಶ್ರೀನಿವಾಸನ್ ತಿಳಿಸಿದ್ದಾರೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಕೊಡಗಿನವರಾದ ರಾ.ಸೂರ್ಯ ನಿರ್ದೇಶನದ ಚಿತ್ರ ಪೂರ್ಣ ಪ್ರಮಾಣದಲ್ಲಿ ಕೊಡಗಿನ ಸೊಗಡನ್ನೇ ಇಟ್ಟುಕೊಂಡು ನಿರ್ಮಾಣವಾಗಿದೆ. ಕನ್ನಡದ ಮಟ್ಟಿಗೆ ಮೊದಲ ಪ್ರಯತ್ನ ಇದಾಗಿದ್ದು, ಸದ್ಯಕ್ಕೆ ಕನ್ನಡ ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಕ್ಕೆ ಪ್ರಸನ್ನ […]

ಸರೋಜಾದೇವಿ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಿಸಲು ಸರಕಾರಕ್ಕೆ ಮನವಿ 

ಸರೋಜಾದೇವಿ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಿಸಲು ಸರಕಾರಕ್ಕೆ ಮನವಿ ಬೆಂಗಳೂರು: ಇತ್ತೀಚೆಗೆ ವಿಧಿವಶರಾದ ಹಿರಿಯ ಕಲಾವಿದೆ ಅಭಿನಯ ಸರಸ್ವತಿ ಬಿ.ಸರೋಜಾದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡುವಂತೆ ನಟಿ ತಾರಾ ಅನುರಾಧ ಮನವಿ ಮಾಡಿದ್ದಾರೆ. ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾದ ನಟಿ ತಾರಾ ಸಿಎಂಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ತುಳುರಂಗಭೂಮಿ‌ ಕಲಾವಿದ ಮೌನೇಶ ಆಚಾರ್ಯ ಹೃದಯಾಘಾತದಿಂದ ಸಾವು

ಬಂಟ್ವಾಳ : ಪ್ರತಿಭಾನ್ವಿತ ಯುವಕ, ತುಳುರಂಗಭೂಮಿ‌ ಕಲಾವಿದ, ಕಾಪಿಕಾಡು‌ ನಿವಾಸಿ ಮೌನೇಶ ಆಚಾರ್ಯ ಮಾಣಿ(44) ಇವರು ಮಂಗಳವಾರ ಮುಂಜಾನೆ ತಮ್ಮ‌ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಚಿನ್ನದ ಕೆಲಸ‌ಮಾಡುತ್ತಿದ್ದ ಇವರು ಜೊತೆಗೆ ಮನೆಸಮೀಪವೇ ಚಿಕ್ಕ‌ ದಿನಸಿ‌ಅಂಗಡಿ ನಡೆಸುತ್ತಿದ್ದರು. ಹಾಸ್ಯಪ್ರಜ್ಞೆ ಉಳ್ಳವರಾಗಿದ್ದ ಇವರು ಜಯಂ ಕಲಾನಿಕೇತನ ಮಾಣಿ ನೃತ್ಯತಂಡದಲ್ಲಿ ಕಲಾವಿದರಾಗಿದ್ದ ಇವರು ಕಲಾಮಾತೆ ನಾಗನವಳಚ್ಚಿಲ್ ತಂಡದ ಕಲಾವಿದರಾಗಿದ್ದು, ಶಾಂತರಾಮ್ ಕಲ್ಲಡ್ಕ ನಿರ್ದೇಶನದ ತುಳು ಅಪ್ಪೆಜೋಕ್ಲು ಕಲಾ ಬಳಗದ ನಾಟಕಗಳಲ್ಲಿಯೂ ಅಭಿನಯಿಸಿದ್ದರು.‌ಪ್ರಸ್ತುತ ನಮ್ಮ‌ಕಲಾವಿದರು ನೆಲ್ಯಾಡಿ ತುಳುನಾಟಕ ತಂಡದ ಕಲಾವಿದರಾಗಿದ್ದ ಇವರು, ಯುವ ಕಲಾವಿದ […]

ಖ್ಯಾತ ಬಹುಭಾಷಾ ನಟಿ ಸರೋಜಾ ದೇವಿ ಇನ್ನಿಲ್ಲ 

ಬೆಂಗಳೂರು : ಖ್ಯಾತ ಬಹುಭಾಷಾ ನಟಿ ಬಿ.ಸರೋಜಾದೇವಿ ಅವರು ನಿಧನರಾಗಿದ್ದಾರೆ. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ, ಸರೋಜಾದೇವಿ (87) ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಿ.ಸರೋಜಾದೇವಿ ಅವರು ಕನ್ನಡ ಚಿತ್ರರಂಗದ ಪ್ರಮುಖ ನಟಿ. ಅವರನ್ನು ‘ಅಭಿನಯ ಸರಸ್ವತಿ’ ಎಂದು ಕರೆಯಲಾಗುತ್ತಿತ್ತು. ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಹೆಸರುವಾಸಿಯಾಗಿದ್ದರು. ಅವರು 1955 ರಿಂದ 1984 ರವರೆಗೆ ಸತತವಾಗಿ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ಸರೋಜಾದೇವಿ ಅವರು 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು 1992ರಲ್ಲಿ ಪದ್ಮಭೂಷಣ […]

ಮಸಣಿಕ್ಕಮ್ಮನಿಗೆ ಆಷಾಢ ವಿಶೇಷ ಪೂಜೆ : ನವರಸ ನಾಯಕ ಜಗ್ಗೇಶ್ ಭಾಗಿ

ಮೈಸೂರು : ಪಿರಿಯಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯಕ್ಕೆ ಭೇಟಿ ನೀಡಿದ ನವರಸ ನಾಯಕ ಜಗ್ಗೇಶ್ ಆಷಾಢ ತಿಂಗಳ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ಅಮ್ಮನ ದರ್ಶನ ಪಡೆದುಕೊಂಡರು. ಈ ಕುರಿತು ತಮ್ಮ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಗ್ಗೇಶ್ “ನನ್ನ ಮನೆ ದೇವರು ಪಿರಿಯಾಪಟ್ಟಣದ ಶ್ರೀ ಮಸಣೀಕಮ್ಮ ಮಾತೆ. ನನ್ನ ತಾತ ಮಾಯಸಂದ್ರದಿಂದ ನಡೆದು ಬಂದು ಸೇವೆಮಾಡಿ ಹೋಗುತ್ತಿದ್ದರು. ನಮ್ಮ ತಾತ, ನೀನು ಈ […]

ಮಲಯಾಳಂ ಚಿತ್ರರಂಗದಲ್ಲಿ ತನಗಾದ ಅನುಭವ ತೆರೆದಿಟ್ಟ ನಟಿ ಶಕೀಲಾ

ಮಲಯಾಳಂ ಚಿತ್ರರಂಗದಲ್ಲಿ ಮಿಂಚಿದ ನಟಿ ಶಕೀಲಾ ಸದ್ಯ ಬಣ್ಣದ ಪ್ರಪಂಚದಿಂದ ದೂರ ಉಳಿದುಬಿಟ್ಟಿದ್ದಾರೆ. ತನಗಾದ ಕಷ್ಟಗಳನ್ನು ಆಗಾಗ ಸಂದರ್ಶನಗಳಲ್ಲಿ ಶಕೀಲಾ ಹಂಚಿಕೊಳ್ಳುತ್ತಾರೆ. ಮಲಯಾಳಂ ಚಿತ್ರರಂಗದಲ್ಲಿ ನಡೆಯುತ್ತಿರುವ ಮೀ ಟೂ ಆರೋಪ ಮತ್ತು ಹೇಮಾ ಮಹಿಳಾ ಸಮಿತಿ ಸಲ್ಲಿಸಿರುವ ವರದಿ ಬಗ್ಗೆ ಶಕೀಲಾ ಪ್ರತಿಕ್ರಿಯೆ ನೀಡಿದ್ದಾರೆ. ರೂಪಾಶ್ರೀ ಎಂದ ನಟಿ ಚಿತ್ರವೊಂದರಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದೆ, ಆ ಸಮಯದಲ್ಲಿ ನಾಲ್ಕು ಜನರು ಮಧ್ಯಪಾನ ಸೇವಿಸಿ ರೂಪಾಶ್ರೀ ಕೋಣೆಗೆ ಬಲವಂತವಾಗಿ ಹೋಗಲು ಪ್ರಯತ್ನ ಪಟ್ಟಿದ್ದಾರೆ ಆ ವಿಚಾರ ನನ್ನ ಕಿವಿಗೆ […]

ಮಲಯಾಳಂ ಚಿತ್ರರಂಗದ ಹಿರಿಯ ನಟ, ಶಾಸಕ ಮುಕೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಹೇಮಾ‌ ಸಮಿತಿ ವರದಿಯ ಬೆನ್ನಲ್ಲೇ ಕೇರಳ ಚಲನಚಿತ್ರ ರಂಗದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಇದೀಗ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಕೇರಳದ ಆಡಳಿತಾರೂಡ ಸಿಪಿಐ(ಎಂ) ಶಾಸಕ, ಮಲಯಾಳಂ ಚಿತ್ರರಂಗದ ಖ್ಯಾತ ನಟ ಮುಕೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ನಟ ಮುಕೇಶ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ನಟಿಯೊಬ್ಬರ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬುಧವಾರ ರಾತ್ರಿ ಕೊಚ್ಚಿ ನಗರದ ಮಾರಾಡು ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ […]