Breaking News :

ಮಲಯಾಳಂ ಚಿತ್ರರಂಗದ ಹಿರಿಯ ನಟ, ಶಾಸಕ ಮುಕೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಹೇಮಾ‌ ಸಮಿತಿ ವರದಿಯ ಬೆನ್ನಲ್ಲೇ ಕೇರಳ ಚಲನಚಿತ್ರ ರಂಗದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಇದೀಗ ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಕೇರಳದ ಆಡಳಿತಾರೂಡ ಸಿಪಿಐ(ಎಂ) ಶಾಸಕ, ಮಲಯಾಳಂ ಚಿತ್ರರಂಗದ ಖ್ಯಾತ ನಟ ಮುಕೇಶ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ನಟ ಮುಕೇಶ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ನಟಿಯೊಬ್ಬರ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬುಧವಾರ ರಾತ್ರಿ ಕೊಚ್ಚಿ ನಗರದ ಮಾರಾಡು ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ […]

ಮಲಯಾಳಂ ನಟ ಸಿದ್ದೀಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ತಿರುವನಂತಪುರಂ: ಮಲಯಾಳಂ ನಟ ಸಿದ್ದೀಕ್‌ ಅವರು 2016ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಟಿ ಆರೋಪಿಸಿದ ಹಿನ್ನೆಲೆಯಲ್ಲಿ, ಸಿದ್ದೀಕ್‌ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮ್ಯೂಸಿಯಂ ಪೊಲೀಸ್ ಠಾಣೆಯಲ್ಲಿ ಸಿದ್ದೀಕ್‌ ವಿರುದ್ಧ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಪರಾಧವು 2016ರಲ್ಲಿ ನಡೆದಿರುವ ಕಾರಣ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ದರ್ಶನ್ ವಿರುದ್ದ ಮತ್ತೆ ಮೂರು ಪ್ರಕರಣ ದಾಖಲು

ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಹಿನ್ನೆಲೆಯಲ್ಲಿ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ ಅವರು ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳ ರಚನೆ ಮಾಡಿದ್ದಾರೆ. ಬೇಗೂರು ಇನ್ಸ್‌ಪೆಕ್ಟರ್ ಕೃಷ್ಣ ಕುಮಾರ್, ರೌಡಿಶೀಟರ್‌ಗಳ ಜತೆ ದರ್ಶನ್ ಬೇರೆತಿದ್ದು ಹೇಗೆ? ಲಾನ್‌ನಲ್ಲಿ ಎಲ್ಲರು ಒಟ್ಟಿಗೆ ಕೂರಲು ಚೇರ್ ವ್ಯವಸ್ಥೆ ಮಾಡಿದವರು ಯಾರು? ಕಾಫಿ ಮಗ್ ಹೇಗೆ ಬಂತು, ಹಾಗೂ ಜೈಲಿನಲ್ಲಿ ಸಿಗರೇಟ್, ಮದ್ಯ, ಮಾದಕವಸ್ತು ನಿಷೇಧ ಇದ್ದರೂ ಸಿಗರೇಟ್ ಹೇಗೆ ಸಿಕ್ಕಿತು ಎಂದು ತನಿಖೆ ನಡೆಸಲಿದ್ದಾರೆ. ಇನ್ನೂ ಎರಡನೇ ಪ್ರಕರಣದ […]

ಏನಿದು ಮಲಯಾಳಂ ಚಿತ್ರರಂಗವನ್ನು ಅಲ್ಲೋಲ- ಕಲ್ಲೋಲಗೊಳಿಸಿದ ಹೇಮಾ ಸಮಿತಿ ವರದಿ?

ಮಲಯಾಳಂ ಚಿತ್ರರಂಗದ ಖ್ಯಾತ ನಟಿಯ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ರಾಷ್ಟ್ರವ್ಯಾಪಿ ಭಾರಿ ಸದ್ದು ಮಾಡಿತ್ತು. ಇಂದಿಗೂ ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇದೆ. ಈ ಪ್ರಕರಣದ ಬೆನ್ನಲ್ಲೇ ನ್ಯಾಯಾಮೂರ್ತಿ ಕೆ. ಹೇಮಾ (ನಿವೃತ್ತ) ಅವರ ನೇತೃತ್ವದಲ್ಲಿ ಮಾಜಿ ಅಧಿಕಾರಿ ಕೆಬಿ ವಲ್ಸಲಕುಮಾರಿ ಮತ್ತು ಹಿರಿಯ ನಟಿ ಶಾರದಾ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಕೇರಳ ಸರ್ಕಾರ ರಚನೆ ಮಾಡಿತ್ತು. ಈ ಸಮಿತಿ 2019ರ ಡಿಸೆಂಬರ್​ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಾಲ್ಕೂವರೆ ವರ್ಷಗಳ ಬಳಿಕ ವರದಿಯನ್ನು ಸಾರ್ವಜನಿಕವಾಗಿ […]

ಹೇಮಾ ಸಮಿತಿ ವರದಿಯ ಬೆನ್ನಲ್ಲೇ ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ: ನಾಲ್ವರು ನಟರ ವಿರುದ್ಧ ಕೇಳಿ ಬಂದ ಲೈಂಗಿಕ ದೌರ್ಜನ್ಯ ಆರೋಪ

ಹೇಮಾ ಸಮಿತಿ ವರದಿಯ ಬೆನ್ನಲ್ಲೇ ಮಾಲಯಾಳಂ ಚಿತ್ರರಂಗದಲ್ಲಿ ಮಹಿಳಾ ಕಲಾವಿದರ ಮೇಲೆ ನಡೆದಿದ್ದ ಒಂದೊಂದೇ ಕೃತ್ಯಗಳು ಬೆಳಕಿಗೆ ಬರುತ್ತಿದೆ. ಈ ಹಿಂದೆ ತಮ್ಮ ಮೇಲಾದ ಕಿರುಕುಳ ಹಾಗೂ ದೌರ್ಜನ್ಯದ ಬಗ್ಗೆ ನಟಿಯರು ಬಹಿರಂಗವಾಗಿ ಹೇಳಿಕೆಯನ್ನು ನೀಡಿ, ಆರೋಪವನ್ನು ಮಾಡುತ್ತಿದ್ದಾರೆ. ಮಲಯಾಳಂ ನಿರ್ದೇಶಕ ರಂಜಿತ್, ಹಿರಿಯ ನಟ ಸಿದ್ದೀಕ್, ನಟ ರಿಯಾಜ್ ಖಾನ್ ವಿರುದ್ಧ ಅಸಭ್ಯ ವರ್ತನೆ ಹಾಗೂ ಕಿರುಕುಳದ ಆರೋಪ ಮಾಡಲಾಗಿದೆ. ಮಲಯಾಳಂ ನಟಿ ಮಿನು ಮುನೀರ್ ತನ್ನ ಸಹ ನಟರು ಮತ್ತು ತಂತ್ರಜ್ಞರ ವಿರುದ್ಧ ಆರೋಪಗಳನ್ನು […]

ಮಂತ್ರಿ ಸುರೇಶ್ ಗೋಪಿ ಕೊಟ್ಟ ಪತ್ರ ಬಿಸಾಕಿದ ಅಮಿತ್ ಶಾ!: ಸಿನಿಮಕ್ಕಾಗಿ ಮಂತ್ರಿಗಿರಿ ಬಿಡಲು ಸಿದ್ಧ ಎಂದ ಸುರೇಶ್ ಗೋಪಿ

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ನಟನೆ ನನ್ನ ಜೀವ ಮತ್ತು ಸಿನಿಮಾ ಮಾಡುವುದನ್ನು ನಿಲ್ಲಿಸಿದರೆ ಬದುಕಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ. ನಟ-ರಾಜಕಾರಣಿಯಾಗಿರುವ ಇವರು ಕೇರಳದ ಮೊದಲ ಬಿಜೆಪಿ ಸಂಸದರಾಗಿದ್ದಾರೆ. ಅವರು ತ್ರಿಶೂರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಗೋಪಿ ಪ್ರವಾಸೋದ್ಯಮ ರಾಜ್ಯ ಸಚಿವರೂ ಆಗಿದ್ದಾರೆ. ತಿರುವನಂತಪುರಂನಲ್ಲಿರುವ ಕೇರಳ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೋಪಿ, “ಚಲನಚಿತ್ರ ನನ್ನ ಪ್ಯಾಶನ್. ಚಿತ್ರವಿಲ್ಲದಿದ್ದರೆ ನಾನು ಸಾಯುತ್ತೇನೆ. […]

ಹಿರಿಯ ನಟ ಮೋಹನ್ ಲಾಲ್ ಆಸ್ಪತ್ರೆಗೆ ದಾಖಲು

ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವು ಸೇರಿದಂತೆ ರೋಗಲಕ್ಷಣಗಳಿಂದಾಗಿ ಹಿರಿಯ ನಟ ಮೋಹನ್ ಲಾಲ್ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕೃತ ವೈದ್ಯಕೀಯ ಹೇಳಿಕೆಯ ಪ್ರಕಾರ, ನಟನಿಗೆ ವೈರಲ್ ಉಸಿರಾಟದ ಸೋಂಕು ಇದೆ ಎಂದು ಶಂಕಿಸಲಾಗಿದೆ ಮೋಹನ್ ಲಾಲ್ ಅವರಿಗೆ ಐದು ದಿನಗಳವರೆಗೆ ಸಾರ್ವಜನಿಕ ಸಂವಹನಗಳನ್ನು ತಪ್ಪಿಸಲು ಮತ್ತು ಸೂಚಿಸಿದ ಔಷಧಿ ನಿಯಮವನ್ನು ಅನುಸರಿಸಲು ಸೂಚಿಸಲಾಗಿದೆ. ಎಲ್ 2: ಎಂಪುರಾನ್’ ಚಿತ್ರೀಕರಣ ಮತ್ತು ತಮ್ಮ ಚೊಚ್ಚಲ ನಿರ್ದೇಶನದ ‘ಬರೋಜ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಮುಗಿಸಿದ […]

ಒರಿಯರ್ದೊರಿ ಅಸಲ್ ಖ್ಯಾತಿಯ ತುಳು ರಂಗಭೂಮಿ ಕಲಾವಿದ ಅಶೋಕ್ ಶೆಟ್ಟಿ ಇನ್ನಿಲ್ಲ

ಮಂಗಳೂರು; ಖ್ಯಾತ ತುಳು ರಂಗಭೂಮಿ ಕಲಾವಿದ, ಒರಿಯರ್ದೊರಿ ಅಸಲ್ ತುಳು ಸಿನಿಮಾದ ಖ್ಯಾತಿಯ ಅಶೋಕ್ ಶೆಟ್ಟಿ ಅಂಬ್ಲಮೊಗರು ಅವರು ಇಂದು ನಿಧನರಾಗಿದ್ದಾರೆ. ಅಂಬ್ಲಮೊಗರುವಿನ ಮನೆಯಲ್ಲಿ ಅಸ್ವಸ್ಥರಾಗಿದ್ದ  ಅಶೋಕ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತ ಪಟ್ಟಿದ್ದಾರೆ. ವೃತ್ತಿಪರ ಕಲಾವಿದರಾದ ಅಶೋಕ್ ಅವರು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮ ನಾಟಕ ತಂಡದಲ್ಲಿ ಕಲಾ ಸೇವೆ ಸಲ್ಲಿಸಿದ್ದರು. ಇವರ ಅಗಲಿಕೆಗೆ ತುಳು ಸಿನಿಮಾರಂಗದ ಗಣ್ಯರು ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ.  

ಸಾನಿಯಾ ಮಿರ್ಜಾ ಅವರನ್ನು ಕ್ರಿಕೆಟರ್ ಶಮಿ ನಿಜಕ್ಕೂ ವಿವಾಹವಾಗಿದ್ದಾರಾ? ಶಮಿ ಕೊಟ್ಟ ಸ್ಪಷ್ಟನೆ ಏನು?

ಮಾಜಿ ಟೆನಿಸ್​ ತಾರೆ ಸಾನಿಯಾ ಮಿರ್ಜಾ, ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನ ಪಡೆದ ಬಳಿಕ ಟೀಮ್​ ಇಂಡಿಯಾದ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ಮದುವೆಯಾಗುತ್ತಾರೆ ಎಂಬ ಊಹಾಪೋಹಾ ಹಬ್ಬಿತ್ತು. ಈ ಬಗ್ಗೆ ಕುದ್ದು ಶಮಿ ಸ್ಪಷ್ಟನೆಯನ್ನು‌ ನೀಡಿದ್ದಾರೆ. ಯೂಟ್ಯೂಬ್ ಸಂವಾದವೊಂದರಲ್ಲಿ ಮಾತನಾಡಿದ ಶಮಿ,  ಸಾನಿಯಾ ಜತೆಗಿನ ಮದುವೆಯ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಮತ್ತು ಸಾನಿಯಾ ಮದುವೆಯ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಇಂತಹ ಗಾಸಿಪ್ ಗಳಿಂದ ಕೆಲವರಿಗೆ ಮನರಂಜನೆ […]