Breaking News :

ಜನರಿಂದ ವಸೂಲಿ ಮಾಡಿದ ಹಣವನ್ನು ಹಂಚಿಕೆ; ಟ್ರಾಫಿಕ್ ಪೊಲೀಸರ ಕಳ್ಳಾಟದ ವಿಡಿಯೋ ವೈರಲ್

ಪೊಲೀಸರ ಕಳ್ಳಾಟವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆಯಲ್ಲಿ ಸಾಗುವ ವಾಹನ ಸವಾರರ ಹಿಡಿದು ದಂಡ ಹಾಕಿ ತಮ್ಮ ಜೇಬು ತುಂಬಿಸಿಕೊಂಡಿದ್ದಾರೆ.

ವಾಹನ ಸವಾರರಿಂದ ಸ್ವೀಕರಿಸಿದ ಲಂಚದ ಹಣವನ್ನು ಮೂವರು ಪೊಲೀಸರು ಸಮನಾಗಿ ಹಂಚಿದ್ದಾರೆ. ಈ ದೃಶ್ಯ ಪಕ್ಕದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪರಿಣಾಮ ಈ ಮೂವರು ಟ್ರಾಫಿಕ್ ಪೊಲೀಸರು ಸೇವೆಯಿಂದ ಅಮಾನತ್ತಾದ ಘಟನೆ ದೆಹಲಿಯಲ್ಲಿ ನಡೆದಿದೆ.

ಘಾಝಿಪುರದ ಥ್ರಿಲ್ ಲೌರಿ ಸರ್ಕಲ್ ಪೊಲೀಸ್ ಚೌಕಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಈ ರಸ್ತೆಯಲ್ಲಿ ಸಾಗುವ ವಾಹನ ಸವಾರರನ್ನು ನಿಯಮ‌ ಉಲ್ಲಂಘನೆ ನೆಪದಲ್ಲಿ  ಹಣ ವಸೂಲಿ ಮಾಡಿ ಜೇಬು ತುಂಬಿಸಿಕೊಂಡಿದ್ದಾರೆ.

ಈ ಕುರಿತ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ವಾಹನ ಚಾಲಕನೊಬ್ಬ ಚೌಕಿಯ ಬಳಿ ಬಂದು ಪೊಲೀಸರ ಜೊತೆ ಮಾತನಾಡುವ ದೃಶ್ಯವಿದೆ. ಕೆಲ ಹೊತ್ತಿನ ಮಾತುಕತೆ ಬಳಿಕ ಟ್ರಾಫಿಕ್ ಪೊಲೀಸ್ ಆತನಿಂದ ಲಂಚವಾಗಿ ಹಣ ಪಡೆದಿದ್ದಾರೆ. ಆದರೆ ನೇರವಾಗಿ ಹಣ ಪಡೆಯದೇ, ಕುಳಿತಿಕೊಂಡು ಪಕ್ಕದಲ್ಲಿ ಇಡುವಂತೆ ಸೂಚಿದ್ದಾನೆ. ಲಂಚದ ರೂಪದಲ್ಲಿ ಹಣ ಇಟ್ಟು ವಾಹನ ಚಾಲಕ ತೆರಳಿದ್ದಾನೆ.

ಮತ್ತೊಂದು ವಿಡಿಯೋದಲ್ಲಿ ಈ ಮೂವರು ಪೊಲೀಸರು ಅದೇ ಸ್ಥಳಕ್ಕೆ ಬಂದು, ತಮ್ಮಲ್ಲಿರುವ ಹಣವನ್ನು ಸಮನಾಗಿ ಹಂಚಿಕೆ ಮಾಡಿದ್ದಾರೆ. ಅಂದಿನ ಲಂಚದ ಸಂಪಾದನೆಯನ್ನು ಸಮನಾಗಿ ಹಂಚಿ ನೆಮ್ಮದಿಯಿಂದ ತೆರಳಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನ್ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಮೂವರು ಟ್ರಾಫಿಕ್ ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

 

 

 

Share this article

ಟಾಪ್ ನ್ಯೂಸ್

More News