ಮುಂಬೈ: ಹಾಜಿ ಅಲಿ ದರ್ಗಾಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭೇಟಿ ನೀಡಿದ್ದು, ದರ್ಗಾದ ನವೀಕರಣಕ್ಕೆ 1.25 ಕೋಟಿ ರೂ.ದೇಣಿಗೆ ನೀಡಿದ್ದಾರೆ.
ದರ್ಗಾಕ್ಕೆ ಭೇಟಿಯ ವೀಡಿಯೋವನ್ನು ಅಕ್ಷಯ್ ಕುಮಾರ್ ಹಂಚಿಕೊಂಡಿದ್ದು, ದರ್ಗಾ ಟ್ರಸ್ಟ್ ನಟನಿಗೆ ಧನ್ಯವಾದ ಸಲ್ಲಿಸಿದೆ.
ಹಾಜಿ ಅಲಿ ಟ್ರಸ್ಟ್‌ನ ಅಧಿಕಾರಿ ಮೊಹಮ್ಮದ್ ಅಹ್ಮದ್ ತಾಹಿರ್ ಈ ಕುರಿತು ಮಾಹಿತಿ ನೀಡಿದ್ದು, ಅಕ್ಷಯ್ ಕುಮಾರ್ ಅವರು ದರ್ಗಾದ ಒಂದು ಭಾಗವನ್ನು ನವೀಕರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಅಕ್ಷಯ್ ಕುಮಾರ್ ದೇಣಿಗೆ ನೀಡುವುದು ಇದು ಮೊದಲಲ್ಲ, ಈ ಮೊದಲು ರಾಮಮಂದಿರ ನಿರ್ಮಾಣಕ್ಕೆ 3 ಕೋಟಿ ದೇಣಿಗೆ ನೀಡಿದ್ದರು.







