Breaking News :

ವಯನಾಡಿನಲ್ಲಿ ದಿಟ್ಟ ಸೇವೆ: ತಮಿಳುನಾಡು ನರ್ಸ್ ಎ.ಸಬೀನಾಗೆ ಕಲ್ಪನಾ ಚಾವ್ಲ ಪ್ರಶಸ್ತಿ

ಈ ಬಾರಿಯ ‘ಕಲ್ಪನಾ ಚಾವ್ಲ ಪ್ರಶಸ್ತಿ’ಯನ್ನು ತಮಿಳುನಾಡಿನ ನೀಲಗರಿ ಜಿಲ್ಲೆಯ ನರ್ಸ್ ಎ.ಸಬೀನಾ ಅವರಿಗೆ ನೀಡಲಾಗಿದೆ.

ಕೇರಳದ ವಯನಾಡ್ ನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಧೈರ್ಯ ಮತ್ತು ಸಾಹಸದಿಂದ ಹಲವು ಜೀವಗಳನ್ನು ರಕ್ಷಿಸಿದ್ದನ್ನು ಪರಿಗಣಿಸಿ ಈ ಪ್ರಶಸ್ತಿಗೆ ಸಬೀನಾ ಅವರನ್ನು ಆಯ್ಕೆ ಮಾಡಲಾಗಿದೆ.

ಭೂಕುಸಿತದಿಂದಾಗಿ ಮುಂಡಕೈ-ಸುರಲ್ಮಲೈ ನಡುವಿನ ಸಂಪರ್ಕ ಸೇತುವೆ ಹಾನಿಗೀಡಾಗಿ ಕ್ರಮೇಣ ಕುಸಿದಿತ್ತು. ಇದರಿಂದಾಗಿ ಜನ ಅತಂತ್ರರಾಗಿ, ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸಾಧ್ಯವಾಗಿರಲಿಲ್ಲ ಹಾಗೂ ಪರಿಹಾರ ಕಾರ್ಯಾಚರಣೆ ಕೂಡಾ ದುಸ್ತರವಾಗಿತ್ತು.ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ತಕ್ಷಣವೇ ಝಿಪ್ ಲೈನ್ ನಿರ್ಮಿಸಿ ಮತ್ತೊಂದು ಕಡೆಗೆ ಹೋಗಲು ನಿರ್ಧರಿಸಲಾಯಿತು. ಸಬೀನಾ ತಕ್ಷಣವೇ ಸ್ವಯಂಪ್ರೇರಿತರಾಗಿ ಮುಂದೆ ಬಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕಳೆದ ಮೂರು ವರ್ಷಗಳಿಂದ ನೀಲಗಿರಿಯಲ್ಲಿ ಎನ್ ಜಿಓದಲ್ಲಿ  ಸಬೀನಾ ಕೆಲಸ‌ ಮಾಡುತ್ತಿದ್ದಾರೆ. ಭೂ ಕುಸಿತದ ವೇಳೆ ಅವರು ಮಾಡಿರುವ ಕಾರ್ಯಕ್ಕೆ ವ್ಯಾಪಕವಾದ ಪ್ರಶಂಸೆ ವ್ಯಕ್ತವಾಗಿದೆ.

Share this article

ಟಾಪ್ ನ್ಯೂಸ್

More News