ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ತುಮಕೂರಿನ ಜಿಕೆಬಿಎಂಎಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಸ್ಥಳಕ್ಕೆ ಬಂದ ಯುವಕರ ಗುಂಪು ಯುದ್ಧ ಪೀಡಿತ ಪ್ಯಾಲೆಸ್ತೀನ್ ಬಾವುಟ ಪ್ರದರ್ಶನಕ್ಕೆ ಯತ್ನ ನಡೆಸಿದ ಹಿನ್ನೆಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಪಟ್ಟಣದ ಷರೀಫ್ ಮೊಹಲ್ಲಾ ನಿವಾಸಿಗಳಾದ ಜಾವೀದ್ ಪಾಷಾ ಅಲಿಯಾಸ್ ಚೋಟು (23), ನ್ಯಾಮತ್ ಉಲ್ಲಾ (28) ಮತ್ತು ಫುರ್ಕಾನ್ (18) ಬಂಧಿತರು. ಫುರ್ಕಾನ್ ವಿದ್ಯಾರ್ಥಿಯಾಗಿದ್ದು, ಜಾವೀದ್ ಪೈಂಟಿಂಗ್ ಕೆಲಸ ಮಾಡುತ್ತಿದ್ದ. ಇದಲ್ಲದೆ ಇಬ್ಬರು ಬಾಲಕರನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಇವರ ಆರೋಗ್ಯ ತಪಾಸಣೆ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.







