ಉಳ್ಳಾಲ: ಸಯ್ಯದ್ ಆಲವಿ ತಂಙಳ್ ಅವರು ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳರಿಂಗೆಯಲ್ಲಿ ನಡೆದಿದೆ.
ಕಿನ್ಯ ಸುನ್ನೀ ಸೆಂಟರ್ ಎಸ್ ವೈ ಎಸ್ ಕಚೇರಿಯಲ್ಲಿ ನಡೆದ ಕೂರ ತಂಙಳ್ ಅನುಸ್ಮರಣೆ ಕಾರ್ಯಕ್ರಮದಲ್ಲಿ ಸಯ್ಯದ್ ಆಲವಿ ತಂಙಳ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಈ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ತಂಙಳ್ ಅವರು ಹೊಸನಗರ, ಬಾಳೆಹೊನ್ನೂರು, ಚಿಕ್ಕಮಗಳೂರು ಸಹಿತ ವಿವಿಧೆಡೆ ಖತೀಬ್ ರಾಗಿ ಸೇವೆ ಸಲ್ಲಿಸಿದ್ದರು.







