Breaking News :

ಶಾಲಾ ಬಸ್ ಹರಿದು ಅಂಗನವಾಡಿಗೆ ತೆರಳುತ್ತಿದ್ದ 5 ವರ್ಷದ ಬಾಲಕ ಮೃತ್ಯು

ಶಾಲಾ ಬಸ್ ಹರಿದು 5 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ‌.

ಬಸವರಾಜ್(5) ಮೃತ ಬಾಲಕ. ವಿಜಯಪುರ ಜಿಲ್ಲೆಯ ನೀಡಗುಂಡಿ ತಾಲೂಕಿನ ಅರಳದಿನ್ನಿ ಗ್ರಾಮದಲ್ಲಿ ಘಟನೆ ನಡೆದಿದೆ‌. ಬಾಲಕ ಮನೆಯಿಂದ ಅಂಗನವಾಡಿಗೆ ಹೋಗುತ್ತಿದ್ದ ವೇಳೆ ಶಾಲಾ ಬಸ್ ಹರಿದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಪಘಾತದ ಬಳಿಕ ಶಾಲಾ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Share this article

ಟಾಪ್ ನ್ಯೂಸ್

More News