Breaking News :

ವಯನಾಡು ಭೂಕುಸಿತಕ್ಕೆ ಪ್ರಚೋದಕ ಅಂಶವೇನು? ಭೂವೈಜ್ಞಾನಿಕ ಸಮೀಕ್ಷೆ ಹೇಳುತ್ತಿರುವುದೇನು ಗೊತ್ತಾ?

ದೇಶವನ್ನೇ ಬೆಚ್ಚಿಬೀಳಿಸಿದ್ದ ವಯನಾಡು ಭೂಕುಸಿತ ದುರಂತದ ಬಗ್ಗೆ  ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯು ಮಹತ್ವದ ಮಾಹಿತಿಯನ್ನು ನೀಡಿದ್ದು,  ಅತಿಯಾದ ಮಳೆ ದುರಂತಕ್ಕೆ ಪ್ರಚೋದಕ ಅಂಶವೆಂದು ಉಲ್ಲೇಖಿಸಿದೆ.

ನಿರಂತರ ಮಳೆಯಿಂದಾಗಿ ಒಳಗೆ ಹೆಚ್ಚುವರಿ ರಂಧ್ರ ಒತ್ತಡ ಹೆಚ್ಚಾಗಲು ಕಾರಣವಾಗುವ ಅತಿಯಾದ ಹೊರೆಯ ವಸ್ತುಗಳ ಸಡಿಲ ಮತ್ತು ಅಸಂಘಟಿತ ಸ್ವಭಾವವು ಈ ಎಲ್ಲಾ ಘಟನೆಗಳಿಗೆ ಪ್ರಚೋದಕ ಅಂಶವಾಗಿದೆ ಎಂದು ಜುಲೈ 30ರ ಭೂಕುಸಿತದ ಬಗ್ಗೆ ಜಿಎಸ್‌ಐನ ಪ್ರಥಮ ಮಾಹಿತಿ ವರದಿ ತಿಳಿಸಿದೆ.

2015-16ರಲ್ಲಿ ನಡೆಸಿದ ರಾಷ್ಟ್ರೀಯ ಭೂಕುಸಿತ ಸಸೆಪ್ಟೆಬಿಲಿಟಿ ಮ್ಯಾಪಿಂಗ್ ಪ್ರಕಾರ, ಚೂರಲ್ಮಾಲಾ, ಮುಂಡಕ್ಕೈ, ವೆಲ್ಲಾರಮಾಲಾ ಮತ್ತು ಅತ್ತಮಾಲಾದಲ್ಲಿ ಸಂಭವಿಸಿದ ಭೂಕುಸಿತವು ಮಧ್ಯಮ ಸಂಭಾವ್ಯ ವಲಯದ ಅಡಿಯಲ್ಲಿ ಬರುತ್ತದೆ ಎಂದು ಜಿಎಸ್‌ಐ ವರದಿಯು ಗಮನಸೆಳೆದಿದೆ.

ಎನ್‌ಎಲ್‌ಎಸ್‌ಎಂ ನಕ್ಷೆಯ ಪ್ರಕಾರ, ಪೀಡಿತ ಪ್ರದೇಶದ ಸುತ್ತಲಿನ ಗುಡ್ಡಗಾಡು ಪ್ರದೇಶಗಳು ಸಹ ಹೆಚ್ಚು ಭೂಕುಸಿತಕ್ಕೆ ಒಳಗಾಗುತ್ತವೆ ಎಂದು ತಿಳಿಸಿದೆ.

Share this article

ಟಾಪ್ ನ್ಯೂಸ್

More News