ಅಂತರಾಜ್ಯ ಅಪರಾಧಿಯ ಬಂಧನ
ಪುತ್ತೂರು: ಪುತ್ತೂರು ಉಪವಿಭಾಗದ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಕೌಶಿಕ್ ನೇತೃತ್ವದಲ್ಲಿ ರಚಿಸಿದ ವಿಶೇಷ ತಂಡವು ಕೇರಳ ಹಾಗೂ ಕರ್ನಾಟಕಕ್ಕೆ ಬೇಕಾಗಿದ್ದ ಅಂತರರಾಜ್ಯ ಅಪರಾಧಿ ಇಲಿಯಾಸ್ ಪಿ.ಎ. ಎಂಬಾತನನ್ನು ಬಂಧಿಸಿದ ಪೊಲೀಸ್ ತಂಡವು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತನನ್ನು ಕೇರಳ ರಾಜ್ಯದತ್ರಿಶೂರ್ ಜಿಲ್ಲೆಯ ವಿಯ್ಯುರು ಮೂಲದವನು ಎನ್ನಲಾಗಿದೆ.
ಇಲಿಯಾಸ್ ಪಿ.ಎ. ವಿರುದ್ಧ ಪುತ್ತೂರು ನಗರ ಠಾಣೆ, ಉಪ್ಪಿನಂಗಡಿ ಹಾಗೂ ಧರ್ಮಸ್ಥಳ ಠಾಣೆಗಳಲ್ಲಿ ಹಲವು ಪ್ರಕರಣಗಳಿದ್ದು, ಕೇರಳದ ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಪೊಲೀಸ್ ಸಿಬ್ಬಂದಿಗಳಾದ ಹೆಚ್.ಸಿ, ಪ್ರಶಾಂತ್ ರೈ, ಹೆಚ್.ಸಿ., ಗಣೇಶ್, ಸಿಪಿಸಿ, ಮ್ಯಾಥ್ಯ ವರ್ಗೀಸ್, ಸಿಪಿಸಿ ಶ್ರೀಶೈಲ ಎಂ.ಕೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.








