ಇಂಡಿಯಾ ಸಬ್ ಜೂನಿಯರ್ ಹಾಕಿ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಮಂಡೆಪಂಡ ಕಾಳಪ್ಪ ಆಯ್ಕೆ
ಸಬ್ ಜೂನಿಯರ್ ಇಂಡಿಯಾ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಅಮ್ಮತಿ ಹೋಬಳಿ ಕಾವಾಡಿ ಗ್ರಾಮದ ಮಂಡಪಂಡ ಕಾಳಪ್ಪ ಕರ್ನಾಟಕ ತಂಡದಲ್ಲಿ ಆಡಲು ಆಯ್ಕೆಯಾಗಿದ್ದಾರೆ. 15ನೇ ಸಬ್ ಜೂನಿಯರ್ ವಿಭಾಗದ ರಾಷ್ಟ್ರೀಯ ಚಾಂಪಿಯನ್ ಶಿಪ್ 2025 ಪಂದ್ಯಾಟವು ಆಗಸ್ಟ್ 1ರಿಂದ 12ರ ವರೆಗೆ ತಮಿಳುನಾಡಿನ ಚೆನೈಯಲ್ಲಿ ನಡೆಯಲಿದೆ.
ಅಮ್ಮತಿ ಹೋಬಳಿಯ ಕಾವಾಡಿ ಗ್ರಾಮದ ಮಂಡೆಪಂಡ ಲವ ಹಾಗೂ ಶಬೀತ ( ತಾಮನೆ ಮಾಣಿಪಂಡ) ದಂಪತಿಯಾ ಪುತ್ರರಾಗಿರುವ ಮಂಡಪಂಡ ಕಾಳಪ್ಪ, ಪ್ರಸ್ತುತ ಬೆಂಗಳೂರು ಸಾಯಿ ಸ್ಪೋರ್ಟ್ಸ್ ಹಾಸ್ಟೆಲ್ ನಲ್ಲಿ ತರಬೇತಿ ಪಡೆಯುತಿದ್ದಾರೆ.








