Breaking News :

ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್ – ಮೀಡಿಯಾ ಚಾಲೆಂಜರ್ಸ್ ಚಾಂಪಿಯನ್ಸ್ 

  ಜನವಾಹಿನಿ News ಮಡಿಕೇರಿ : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಭಾನುವಾರ ಪತ್ರಕರ್ತರಿಗೆ ಆಯೋಜಿಸಿದ್ದ ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್-೪ ನಲ್ಲಿ ಮೀಡಿಯಾ ಚಾಲೆಂಜರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಫೈನಲ್ ಪಂದ್ಯಾಟದಲ್ಲಿ ಟಾಸ್ ಸೋತ ಮೀಡಿಯಾ ಚಾಲೆಂಜರ್ಸ್ ತಂಡ ನಿಗದಿತ ೬ ಓವರ್‌ನಲ್ಲಿ ೨ ವಿಕೆಟ್ ನಷ್ಟಕ್ಕೆ ೮೧ ರನ್ ಕಲೆಹಾಕಿತು. ತಂಡದ ಪರ ವಿನೋದ್ ೩೯, ಹೇಮಂತ್ ೩೧ ರನ್ ಕಲೆ ಹಾಕಿದರು. […]

ಐಕ್ಯತೆ ಮೂಡಿಸುವ ಶಕ್ತಿ ಕ್ರೀಡೆಗಿದೆ ಪ್ರೊ. ಮೇ. ಬಿ. ರಾಘವ : ಕೊಡಗು ಪ್ರೆಸ್ ಕ್ಲಬ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಗೆ ಚಾಲನೆ

  ಜನವಾಹಿನಿ News ಮಡಿಕೇರಿ : ದೇಶದ ಪ್ರಗತಿ ಹಾಗೂ ಐಕ್ಯತೆ ಮೂಡಿಸುವ ಶಕ್ತಿ ಕ್ರೀಡೆಗಿದೆ ಎಂದು ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಪ್ರೊ. ಮೇ. ಬಿ. ರಾಘವ ಅಭಿಮತ ವ್ಯಕ್ತಪಡಿಸಿದರು. ನಗರದ ಫೀ.ಮಾ. ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ನಾಲ್ಕನೇ ವರ್ಷದ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಮೋಜು-ಮಸ್ತಿಗಾಗಿ ಆರಂಭವಾದ ಕ್ರಿಕೆಟ್ ಕ್ರಮೇಣ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡು ಇಂದು ಎಲ್ಲಾ ವಯೋಮಾನದವರನ್ನು ಸೆಳೆಯುತ್ತಿದೆ. ಶಿಸ್ತುಬದ್ಧ […]

ಟಿ20 ವಿಶ್ವಕಪ್ : ಭಾರತಕ್ಕೆ ಐತಿಹಾಸಿಕ ಗೆಲುವು ; ಮೂರನೇ ಬಾರಿ ಚಾಂಪಿಯನ್ಸ್ ಆದ ಟೀಂ ಇಂಡಿಯಾ

    ಜನವಾಹಿನಿ News ಅಹಮದಾಬಾದ್ :  2026ರ ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ ನ್ಯೂಜಿಲೆಂಡ್ ಅನ್ನು 96 ರನ್‌ಗಳಿಂದ ಸೋಲಿಸಿ, ಸತತ ಎರಡನೇ ಬಾರಿಗೆ ಮತ್ತು ದಾಖಲೆಯ ಮೂರನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ, ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡುವ ಮೂಲಕ ಟೀಂ ಇಂಡಿಯಾವನ್ನು ಬ್ಯಾಟಿಂಗಿಗೆ ಆಹ್ವಾನಿಸಿತು. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 255/5 […]

ಟಿ20 ವಿಶ್ವಕಪ್ ಸೆಮಿ ಫೈನಲ್ಸ್: ಇಂಗ್ಲೆಂಡ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ

    ಜನವಾಹಿನಿ News ಮುಂಬೈ : ಇಂಗ್ಲೆಂಡ್ ವಿರುದ್ಧ ನಡೆದಿದ್ದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ 7 ರನ್ಗಳಿಂದ ರೋಚಕ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 253 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡ 7 ವಿಕೆಟ್ ನಷ್ಟಕ್ಕೆ 246 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ವಾಂಖೆಡೆ ಕ್ರೀಡಾಂಗಣದಲ್ಲಿ ಬೃಹತ್ ಮೊತ್ತ ಸಿಡಿಸಿದರೂ ಭಾರತ ಪಂದ್ಯ ಕ್ಷಣ ಕ್ಷಣಕ್ಕೂ ರೋಚಕ […]

ಫೆ.೧೫ರಂದು ಗೌಡ ಜನಾಂಗಗಳ ಜಿಲ್ಲಾ ಮಟ್ಟದ ಕ್ಯಾರಂಬೋರ್ಡ್ ಕ್ರೀಡಾಕೂಟ : ಏಪ್ರಿಲ್ ನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್

ಜನವಾಹಿನಿ News ಮಡಿಕೇರಿ  : ಕಾರುಗುಂದದ ಚೇರಂಬಾಣೆ ಗೌಡ ಸಮಾಜ ಹಾಗೂ ಚೇರಂಬಾಣೆ ಗೌಡ ಯುವ ವೇದಿಕೆಯ ವತಿಯಿಂದ ಫೆ.೧೫ ರಂದು ಗೌಡ ಜನಾಂಗಗಳ ಜಿಲ್ಲಾ ಮಟ್ಟದ ಕ್ಯಾರಂಬೋರ್ಡ್ ಕ್ರೀಡಾಕೂಟ ನಡೆಯಲಿದೆ. ಇದೇ ಏಪ್ರಿಲ್ ತಿಂಗಳಿನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಕೂಡ ಆಯೋಜಿಸಲಾಗಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೇರಂಬಾಣೆ ಗೌಡ ಯುವ ವೇದಿಕೆಯ ಅಧ್ಯಕ್ಷ ಪಾರೆಮಜಲು ಪ್ರದೀಪ್ ಹಾಗೂ ಕಾರ್ಯದರ್ಶಿ ಯಶವಂತ್ ಕೇಟೋಳಿ ಕ್ಯಾರಂಬೋರ್ಡ್ ಕ್ರೀಡಾಕೂಟ ಗೌಡ ಜನಾಂಗಗಳಿಗೆ ಸೀಮಿತವಾಗಿದ್ದು, ಡಬಲ್ಸ್ ಮತ್ತು ಸಿಂಗಲ್ಸ್ ವಿಭಾಗದಲ್ಲಿ […]

ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ಶಿಪ್ ನಲ್ಲಿ ಇತಿಹಾಸ ಬರೆದ ಕೊಡಗಿನ ಗಗನ್

ಐತಿಹಾಸಿಕ ಸಾಧನೆ ಗೈದ “ಗಗನ್ – ಡೀನ್ ” ಜೋಡಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತ  ಜನವಾಹಿನಿ News ಮಡಿಕೇರಿ : ಹಾಕಿ, ಕ್ರಿಕೆಟ್, ಟೆನಿಸ್ ಹೀಗೆ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಕೊಡಗಿನವರ ಸಾಧನೆ ಅಪಾರ. ಇದೀಗ ಈ ಪಟ್ಟಿಯಲ್ಲಿ ಮೋಟಾರ್ ಸ್ಪೋರ್ಟ್ಸ್ ಭಾರತೀಯ ರಾಷ್ಟ್ರೀಯ ರ್‍ಯಾಲಿ ಚಾಂಪಿಯನ್‌ಶಿಪ್ (INRC) ನಲ್ಲಿ ಓವರ್ ಆಲ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಕೊಡಗಿನ ಯುವನೋರ್ವ ಪ್ರಥಮ ಬಾರಿಗೆ ಇತಿಹಾಸ ಸೃಷ್ಟಿಸಿದ್ದಾರೆ. ಅಮ್ಮತ್ತಿ-ಹೊಸೂರಿನ ಕೊಂಗಂಡ ಕುಟುಂಬಕ್ಕೆ ಸೇರಿದ ಗಗನ್ ಕರುಂಬಯ್ಯ ರವರೆ ಈ ಸಾಧನೆ […]

ಕೂಡುಗದ್ದೆ ಲೆಜೆಂಡ್ಸ್ ಕ್ರಿಕೆಟ್ ಲೀಗ್ : ಗುಹ್ಯ ಟೈಟನ್ಸ್ ಚಾಂಪಿಯನ್ – ಸ್ಟಾರ್ ಸ್ಟ್ರೈಕರ್ ರನ್ನರ್ಸ್  

ಜನವಾಹಿನಿ News ಸಿದ್ದಾಪುರ : ಅಲ್ ಅಮೀನ್ ಸಂಘದ ವತಿಯಿಂದ ಸಿದ್ದಾಪುರ ಗ್ರಾಮದ ಗುಹ್ಯ ಕೂಡುಗದ್ದೆಯ, ರಾಮಣ್ಣರವರ ಗೆದ್ದೆಯಲ್ಲಿ ಆಯೋಜಿಸಲಾಗಿದ್ದ ಪ್ರಥಮ ವರ್ಷದ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯ ಚಾಂಪಿಯನ್ಸ್ ಪಟ್ಟವನ್ನು ಗುಹ್ಯ ಟೈಟನ್ಸ್ ತಂಡ ತನ್ನದಾಗಿಸಿಕೊಂಡರೆ. ಸ್ಟಾರ್ ಸ್ಟ್ರೈಕರ್ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಎರಡು ದಿನಗಳ ಕಾಲ ನಡೆದ ಈ ಪಂದ್ಯಾವಳಿಯು ಬಿಡ್ಡಿಂಗ್ ಮಾದರಿಯಲ್ಲಿ ಆಯೋಜಿಸಲಾಗಿದ್ದು , ಸುಮಾರು ಆರು ತಂಡಗಳು ಭಾಗವಹಿಸಿದ್ದವು. ಆರು ತಂಡಗಳ ಪೈಕಿ ಗುಹ್ಯ ಟೈಟಾನ್ಸ್ ಹಾಗೂ ಸ್ಟಾರ್ ಸ್ಟ್ರೈಕರ್ […]

ಕಂಬಳದಲ್ಲಿ ಹೊಸ ದಾಖಲೆ ಸೃಷ್ಠಿಸಿದ ಪೃಥ್ವಿರಾಜ್

ಜನವಾಹಿನಿ News ಪುತ್ತೂರು : ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಡೆದ ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ಕೋಣ ಓಡಿಸುವ ವೇಗದಲ್ಲಿ ಹೊಸ ದಾಖಲೆ ನಿರ್ಮಾಣ ಗೊಂಡಿದೆ ಎಂದು ಕಂಬಳದ ಆಯೋಜಕರು ತಿಳಿಸಿದ್ದಾರೆ. ಶ್ರೀ ಪಂಚಲಿಂಗೇಶ್ವರ ಉರುವಾಲು ನಾರಾಳುಗುತ್ತು ಸದಾನಂದ ಗೌಡ ಅವರ ಕುಟ್ಟಿ – ಕಾಲೆ ಕೋಣಗಳ ಜೋಡಿ ನೇಗಿಲು ಕಿರಿಯ ವಿಭಾಗ ಸ್ಪರ್ಧೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಈ ಕೋಣಗಳನ್ನು ಪಡು ಸಾಂತೂರಿನ 22 ವರ್ಷ ಪ್ರಾಯದ ಪೃಥ್ವಿರಾಜ್ ಪೂಜಾರಿ ಎಂಬ ಯುವಕ […]

ಪಾಲಿಬೆಟ್ಟ: ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿ – ರೆಡ್ ಯುನೈಟೆಡ್ ಊಟಿ ತಂಡ ಚಾಂಪಿಯನ್

  ಜನವಾಹಿನಿ News ಪಾಲಿಬೆಟ್ಟ : ಯಂಗ್ ಇಂಡಿಯಾ ಯೂತ್ ಕ್ಲಬ್ ನ ಸುವರ್ಣ ಮಹೋತ್ಸವದ ಅಂಗವಾಗಿ ರಾಷ್ಟ ಮಟ್ಟದ ಸೂಪರ್ ಫೈ ಕಾಲ್ಚೆಂಡು ಕ್ರೀಡಾ ಹಬ್ಬಕ್ಕೆ ವರಣರಂಜಿತ ತೆರೆಕಂಡಿದೆ. ಪಾಲಿಬೆಟ್ಟ ಸಾರ್ವಜನಿಕ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಪಂದ್ಯಾವಳಿಯ ಅಂತಿಮ ಫೈನಲ್ ಪಂದ್ಯಾಟದಲ್ಲಿ ಕ್ಲಾಸಿಕ್ ಸ್ಪೋರ್ಟ್ ಕ್ಲಬ್ ಮತ್ತು ರೆಡ್ ಯುನೈಟೆಡ್ ಊಟಿ ತಂಡದ ನಡುವೆ ನಡೆದ ರೋಮಾಂಚನಕಾರಿ ಪಂದ್ಯಾವಳಿಯಲ್ಲಿ 3-0 ಗೋಲುಗಳಿಂದ ರೆಡ್ ಯುನೈಟೆಡ್ ಊಟಿ ತಂಡ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ […]

ಅಮ್ಮತ್ತಿ ಒಂಟಿಯಂಗಡಿ ಪ್ರೀಮಿಯರ್ ಲೀಗ್ : AFC ಅಮ್ಮತ್ತಿ ಚಾಂಪಿಯನ್ಸ್ 

      ಜನವಾಹಿನಿ News ಮಡಿಕೇರಿ : ಆರ್.ವಿ.ಎನ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಅಮ್ಮತ್ತಿ ಪ್ರಾಥಮಿಕ ಶಾಲಾ ಮೈದಾನದಲಿ ಆಯೋಜಿಸಲಾಗಿದ್ದ ಅಮ್ಮತ್ತಿ ಒಂಟಿಯಂಗಡಿ ಪ್ರೀಮಿಯರ್ ಲೀಗ್ 2026 ರ ಚಾಂಪಿಯನ್ ಪಟ್ಟವನ್ನು ಎ.ಎಫ್.ಸಿ ತಂಡ ತನ್ನದಾಗಿಸಿಕೊಂಡರೆ. ಸಾಕರ್ ಯುನೈಟೆಡ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಿಡ್ಡಿಂಗ್ ಮಾದರಿಯಲ್ಲಿ ಆಯೋಜಿಸಲಾಗಿದ್ದ ಈ ಪಂದ್ಯಾವಳಿಯು ಜ.3ರಿಂದ ಅಮ್ಮತ್ತಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಪಂದ್ಯಾಟದಲ್ಲಿ ಸಿವಿ ಯುನೈಟೆಡ್ ಒಂಟಿಯಂಗಡಿ, ಸಿ.ವೈ.ಸಿ ಒಂಟಿಯಂಗಡಿ, ಬಿ.ವೈ.ಸಿ ಇಂಜಲಗೆರೆ, ಎ.ಎಫ್.ಸಿ ಅಮ್ಮತ್ತಿ, 3 ಸ್ಟಾರ್ ಅಮ್ಮತ್ತಿ, […]