Breaking News :

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ತಲಕಾವೇರಿ ತೀರ್ಥೋದ್ಭವ ಪ್ರಸಾದ ವಿತರಣೆ

 


ಜನವಾಹಿನಿ ನ್ಯೂಸ್ ಬೆಂಗಳೂರು: ಭಾಗಮಂಡಲ ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷ ಬಾಣಂದ ಪ್ರಥ್ವಿ ಮತ್ತು ಸದಸ್ಯರ ತಂಡ ಶನಿವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ *ಡಿ.ಕೆ.ಶಿವಕುಮಾರ್* ಅವರನ್ನು ಭೇಟಿ ಮಾಡಿ, ನಾಡಿನ ಜೀವನದಿ ತಾಯಿ ಕಾವೇರಿ ಮಾತೆಯ ಪವಿತ್ರ ತೀರ್ಥೋದ್ಭವದ ಪ್ರಸಾದವನ್ನು ವಿತರಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ *ಎ.ಎಸ್.ಪೊನ್ನಣ್ಣ* ಅವರ ಮಾರ್ಗದರ್ಶನದಂತೆ ಈ ಭೇಟಿ ನಡೆದಿದ್ದು, ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಮುಖರಾದ ಟಾಟು ಮೊಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News