Breaking News :

ಹೆಲಿಕಾಪ್ಟರ್ ದುರಂತ – ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಳುಂಕೆ ದುರ್ಮರಣ, ಅರಟಾಳ ಗ್ರಾಮದಲ್ಲಿ ಶೋಕ

 


ಜನವಾಹಿನಿ ನ್ಯೂಸ್ ಅಥಣಿ : ಉತ್ತರಾಖಂಡದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಐವರಲ್ಲಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅರಟಾಳ ಗ್ರಾಮದ ನಿವಾಸಿ, ಬೆಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಳುಂಕೆ ಕೂಡ ಸೇರಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಅರಟಾಳ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

2007ರ ಬ್ಯಾಚ್‌ನ ಅಧಿಕಾರಿಯಾಗಿರುವ ಅರುಣ್ ಸಾಳುಂಕೆ ಆರಂಭದಲ್ಲಿ ದೆಹಲಿಯಲ್ಲಿ ಇಂಟೆಲಿಜೆನ್ಸ್ ಇನ್ಸ್‌ಪೆಕ್ಟರ್ ಆಗಿ ವೃತ್ತಿ ಆರಂಭಿಸಿ, ನಂತರ ನೆಲಮಂಗಲ, ಕುಣಿಗಲ್, ಬಾಣಸವಾಡಿ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಬೆಂಗಳೂರು ಸಿಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದರು. ತಂದೆ ಮತ್ತು ಸಹೋದರ ಅರಟಾಳದಲ್ಲಿದ್ದಾರೆ.

 

Share this article

ಟಾಪ್ ನ್ಯೂಸ್

More News