Breaking News :

ಮಾನಸಿಕ ಒತ್ತಡ : ನೇಣಿಗೆ ಕೊರಳೊಡ್ಡಿದ ಕಾರ್ಮಿಕ


ಜನವಾಹಿನಿ ನ್ಯೂಸ್ ಸಿದ್ದಾಪುರ : ಕಾರ್ಮಿಕನೋರ್ವ ತೋಟದ ಲೈನ್ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಹ್ಯ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗುಹ್ಯ ಗ್ರಾಮದ ಕಾಫಿ ತೋಟದ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಕಾಳ (65) ತನ್ನ ಲೈನ್ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರಿಗೆ ಇತ್ತೀಚೆಗೆ ಕಣ್ಣಿನ ಶಸ್ತ್ರಚಿಕಿತ್ಸೆ ನಡೆದಿದ್ದು, ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.

Share this article

ಟಾಪ್ ನ್ಯೂಸ್

More News