Breaking News :

ಸಿದ್ದಾಪುರ : ಕೆರೆಯಲ್ಲಿ ಕೇರಳ ಮೂಲದ ವ್ಯಕ್ತಿಯ ಮೃತ ದೇಹ ಪತ್ತೆ 


ಜನವಾಹಿನಿ ನ್ಯೂಸ್ ಸಿದ್ದಾಪುರ : ಕೆರೆಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರ ಸಮೀಪದ ಚೌಡಿಕಾಡು ತೋಟದಲ್ಲಿ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿಯನ್ನು ಕೇರಳದ ಕಣ್ಣೂರು ಜಿಲ್ಲೆಯ ಶ್ರೀಜೇಶ್ (45) ಎಂದು ಗುರುತಿಸಲಾಗಿದೆ.

ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಶ್ರೀಜೇಶ್ ಇತ್ತೀಚೆಗೆ ಚೌಡಿಕಾಡು ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಮಾನಸಿಕ ಒತ್ತಡದ ಕಾರಣದಿಂದ ಘಟನೆ ನಡೆದಿರಬಹುದೆಂದು ಶಂಕಿಸಲಾಗಿದೆ.

ಸಿದ್ದಾಪುರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Share this article

ಟಾಪ್ ನ್ಯೂಸ್

More News