ಜನವಾಹಿನಿ ನ್ಯೂಸ್ ಕಕ್ಕಬೆ : ಕಕ್ಕಬೆ ಕೇಂದ್ರ ವಿದ್ಯಾಸಂಸ್ಥೆಯ ಶಾಲಾ ರಸ್ತೆಯ ಅಭಿವೃದ್ಧಿ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಸಂಸ್ಥೆಯ ಪದಾಧಿಕಾರಿಗಳು ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಭೇಟಿ ಮಾಡಿ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಉಪಾಧ್ಯಕ್ಷ ಸುರೇಶ್ ಬೆಳ್ಳಿಯಪ್ಪ, ಕರೆಸ್ಪಾಂಡೆಂಟ್ ರೇಖಾ ಉಲ್ಲಾಸ್, ಕಾರ್ಯದರ್ಶಿ ಬಬಿತ ದೇವಯ್ಯ, ದಾನಿಗಳಾದ ಕಿಶನ್ ಪೂಣಚ್ಚ, ನಿರ್ದೇಶಕರಾದ ಸಚಿನ್ ಅಯ್ಯಪ್ಪ, ಎ. ಉತ್ತಪ್ಪ, ಅಬ್ದುಲ್ ರೆಹಮಾನ್, ಡಿ. ದೇವಯ್ಯ, ಗೌತಮ್ ಚೆಂಗಪ್ಪ, ಕಿರಣ್ ಮಾದಪ್ಪ, ದೇವಯ್ಯ, ಮುಖ್ಯೋಪಾಧ್ಯಾಯ ಪ್ರವೀಣ್ ಕಾರ್ಯಪ್ಪ ಉಪಸ್ಥಿತರಿದ್ದರು.
Total Views: 7







