Breaking News :

ಎದೆ ಹಾಲಿನ ಮಹತ್ವ ಮತ್ತು ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮ


ಎದೆ ಹಾಲಿನ ಮಹತ್ವ ಮತ್ತು ಯೋಜನೆಗಳ ಬಗ್ಗೆ ಅರಿವು ಕಾರ್ಯಕ್ರಮ


ಮಡಿಕೇರಿ : ಮಕ್ಕಂದೂರು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಎದೆ ಹಾಲಿನ ಮಹತ್ವ ಕುರಿತು ಅರಿವು ಕಾರ್ಯಕ್ರಮವು ಇಂದು ನಡೆಯಿತು.

ಮೇಲ್ವಿಚಾರಕರು ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮೇಪಾಡಂಡ ಸವಿತಾ ಕೀರ್ತನ್ ಅವರು ಎದೆ ಹಾಲಿನ ಮಹತ್ವದ ಬಗ್ಗೆ ವಿವರವಾಗಿ ಮಾಹಿತಿ ನೀಡಿ ಪೌಷ್ಟಿಕ ಆಹಾರ ಸೇವನೆ, ವಾಯು ವಿಹಾರ, ಹೆಚ್ಚು ನೀರು ಸೇವನೆ, ಸ್ಥಳೀಯವಾಗಿ ಸಿಗುವ ಹಣ್ಣುಗಳು ಮತ್ತು ಸೊಪ್ಪುಗಳನ್ನು ಪ್ರತಿನಿತ್ಯ ಬಳಸಲು ಪೆÇ್ರೀತ್ಸಾಹಿಸಿದರು.

ಭಾಗ್ಯಲಕ್ಷ್ಮಿ ಮಾತೃವಂದನ, ಎಫ್‍ಆರ್‍ಎಸ್, ಪೆÇೀಷಣ್ ಟ್ರ್ಯಾಕರ್, ಅಂಗನವಾಡಿಯಲ್ಲಿ ಸಿಗುವಂತಹ ಆಹಾರಗಳ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಹಿರಿಯ ಪ್ರಾಥಮಿಕ ಸುರಕ್ಷಾ ಅಧಿಕಾರಿ ದೇವಕಿ ಅವರು ಪ್ರಾತ್ಯಕ್ಷಿಕೆ ಮೂಲಕ ಎದೆ ಹಾಲು ನೀಡುವ ಬಗ್ಗೆ ಮಾಹಿತಿ ನೀಡಿದರು.

ಚುಚ್ಚುಮದ್ದು ಕಾರ್ಯಕ್ರಮಗಳ ಬಗ್ಗೆ ಇಲಾಖೆಯ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಸರೋಜಾ ಡಿಎಸ್, ಅಂಗನವಾಡಿ ಸಹಾಯಕಿ ಚಂದ್ರವತಿ, ಆಶಾ ಕಾರ್ಯಕರ್ತೆ ದಿವ್ಯ ಹಾಜರಿದ್ದರು.

Share this article

ಟಾಪ್ ನ್ಯೂಸ್

More News