Breaking News :

ನರ್ಸಿಂಗ್ ವಿದ್ಯಾರ್ಥಿಗಳ ಪದವಿ ಹಬ್ಬ : “ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” :  ಶ್ರೀಕಾಂತ್ ಫುಲಾರಿ

  ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸರ್ಕಾರಿ ಶುಶ್ರೂಷಾ ಕಾಲೇಜು ಮಡಿಕೇರಿಯಲ್ಲಿ ಎರಡನೇ ಘಟಿಕೋತ್ಸವ ಸಮಾರಂಭ ಜನವಾಹಿನಿ News ಮಡಿಕೇರಿ : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಸರ್ಕಾರಿ ಶುಶ್ರೂಷಾ ಕಾಲೇಜಿನ ಎರಡನೇ ಘಟಿಕೋತ್ಸವ ಸಮಾರಂಭ ಅದ್ದೂರಿಯಾಗಿ ಸಂಭ್ರಮದಿಂದ ಜರುಗಿತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಾಯಕ ನಿರ್ದೇಶಕರು ನರ್ಸಿಂಗ್ ಶಿಕ್ಷಣ ವಿಭಾಗ, ವೈದ್ಯಕೀಯ ನಿರ್ದೇಶನಾಲಯ ಬೆಂಗಳೂರು ಶ್ರೀ ಶ್ರೀಕಾಂತ್ ಫುಲಾರಿ ರವರು ತಮ್ಮ ಭಾಷಣದಲ್ಲಿ 89 ವಿದ್ಯಾರ್ಥಿಗಳು ಪದವಿ ಸ್ವೀಕರಿಸುತ್ತಿರುವುದು ನನಗೆ ಹೆಮ್ಮೆಯಾಗುತ್ತಿದೆ. ವೈಧ್ಯಕೀಯ […]

ಫೀಲ್ಡ್ ಮಾಷ೯ಲ್ ಕಾಯ೯ಪ್ಪ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ – ಹೆಲ್ತಿ ಹ್ಯಾಬಿಟ್ ಹ್ಯಾಪಿ ಲೈಫ್ ಕಾಯಾ೯ಗಾರ  – ತಂತ್ರಜ್ಞಾನದ ಹೆಚ್ಚಿನ ಬಳಕೆ ಮನಸ್ಸಿನ ಕ್ರಿಯಾಶೀಲತೆಯ ನಾಶಕ್ಕೆ ಕಾರಣವಾಗಬಹುದು : ಡಾ.ಶುಭಾ ಕೆ.ಜಿ ಎಚ್ಚರಿಕೆ

  ಜನವಾಹಿನಿ News ಮಡಿಕೇರಿ : ಚಾಟ್ ಜಿಪಿಟಿಯಂಥ ತಾಂತ್ರಿಕ ಮಾಧ್ಯಮವನ್ನು ಹೆಚ್ಚು ಬಳಕೆ ಮಾಡುತ್ತಿದ್ದರೆ ನಮ್ಮ ಮನಸ್ಸಿನ ಕ್ರಿಯಾಶೀಲತೆಯನ್ನೇ ನಾಶ ಮಾಡುವ ಮೂಲಕ ಮೆದುಳಿನ ಮೇಲೆ ದುಫ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುವ ನಿಟ್ಟಿನಲ್ಲಿ ಅಗತ್ಯಕ್ಕೆ ತಕ್ಕಂತೆ ಎಐ, ಜಿಪಿಟಿಯಂಥ ಮಾಧ್ಯಮವನ್ನು ಬಳಸುವ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕರೆ ಗಮನ ನೀಡಿ ಎಂದು ಆಯುಷ್ ಇಲಾಖೆಯ ಹಿರಿಯ ವೈದ್ಯಾಧಿಕಾರಿ ಡಾ. ಶುಭಾ ಕೆ.ಜಿ. ವಿದ್ಯಾಥಿ೯ಗಳಿಗೆ ಕರೆ ನೀಡಿದ್ದಾರೆ. ಕೊಡಗು ವಿಶ್ವವಿದ್ಯಾಲಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕೆ. […]

ಮಾ.24 ರಂದು ಕಣ್ಣಿನ ತಪಾಸಣಾ ಶಿಬಿರ

  ಜನವಾಹಿನಿ News ಮಡಿಕೇರಿ : ಹಿರಿಯ ನಾಗರಿಕರ ವೇದಿಕೆ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ಮಾರ್ಚ್, 24 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30 ಗಂಟೆವರೆಗೆ ಮಡಿಕೇರಿಯ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಉಚಿತವಾಗಿ ಕಣ್ಣಿನ ತಪಾಸಣಾ ಶಿಬಿರ ನಡೆಯಲಿದೆ. ಖ್ಯಾತ ಕಣ್ಣಿನ ತಜ್ಞರಾದ ಡಾ.ಪ್ರಶಾಂತ್ ಅವರು ಕಣ್ಣಿನ ತಪಾಸಣೆ ನಡೆಸಲಿದ್ದಾರೆ. ಸಂಸ್ಥೆಯ ಸದಸ್ಯರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಕೆ.ಎ.ತಿಮ್ಮಯ್ಯ ಅವರು ತಿಳಿಸಿದ್ದಾರೆ.

ನೆಲ್ಯಹುದಿಕೇರಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ

ಜನವಾಹಿನಿ News ಸಿದ್ದಾಪುರ : ಐನ್ ಆಪ್ಟಿಕಲ್ಸ್ ಅಪ್ರೋಮೆಟ್ರಿ ಕ್ಲಿನಿಕ್, ಕುಶಾಲನಗರ ಇವರ ಆಶ್ರಯದಲ್ಲಿ  ಅಭ್ಯತ್ ಮಂಗಳ ಗ್ರಾಮೀಣಕೃಷಿಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರ, ಹಾಗೂ ಚಿಕಿತ್ಸೆ ಶಿಬಿರವನ್ನು ಕೊಡಗು ಜಿಲ್ಲಾ ಜೆಡಿಎಸ್ ಸಾಮಾಜಿಕ ಜಾಲತಾಣ ಉಪಾಧ್ಯಕ್ಷರು, ನೆಲ್ಯಹುದಿಕೇರಿ ಜೆಡಿಎಸ್ ಗ್ರಾಮ ಸಮಿತಿ ಅಧ್ಯಕ್ಷ ಶಿಯಾಬುದ್ದೀನ್ ವಿ.ಪಿ.ಎಸ್ ಉದ್ಘಾಟಿಸಿದರು. ಬಳಿಕಮಾತನಾಡಿದ ಅವರು ಸಂಸ್ಥೆಯು ನೀಡುತ್ತಿರುವ ಕಣ್ಣಿನ ತಪಾಸಣೆ ಹಾಗೂಉಚಿತ ಸೇವೆಯನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದರು. 50ಕ್ಕಿಂತಲೂ ಅಧಿಕ ಮಂದಿ ಉಚಿತ ತಪಾಸಣಾ ಶಿಬಿರದಲ್ಲಿ […]

ಮಡಿಕೇರಿಯಲ್ಲಿ ಆರೋಗ್ಯ ಹಕ್ಕಿನ ಜಾಥಾ..!

  ಜನವಾಹಿನಿ News ಮಡಿಕೇರಿ : ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಹಾಗೂ ಉತ್ತಮ ಗುಣಮಟ್ಟದ ಔಷಧಗಳನ್ನು ಒದಗಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಹಕ್ಕಿನ ಜಾಥಾ ನಡೆಸಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೇರು ಬೆವರು ಸಾಂಸ್ಕೃತಿಕ ಬಳಗದ ಸಂಚಾಲಕ ಸೋರಪಲ್ಲಿ ಚಂದ್ರಶೇಖರ್, ಕರ್ನಾಟಕದಲ್ಲಿ ಔಷಧಿಗಳು ಉಚಿತವಾಗಿ ಸಿಗುವಂತೆ ಮಾಡಲು ಸರ್ಕಾರವು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ ಅನ್ನು ೨೦೦೩ರಲ್ಲೇ ಸ್ಥಾಪಿಸಿದೆ. ಈ ಕಂಪೆನಿಯು […]

ಫೆ.10 ರಂದು ರಾಷ್ಟ್ರೀಯ ಜಂತುಹುಳು ನಿವಾರಣ ಕಾರ್ಯಕ್ರಮ: 1,31,783 ಮಕ್ಕಳಿಗೆ ಮಾತ್ರೆ ವಿತರ

  ಜನವಾಹಿನಿ News ಮಡಿಕೇರಿ : ಮಕ್ಕಳಿಗೆ ಹುಟ್ಟಿನಿಂದ 16 ವರ್ಷಗಳ ವರೆಗೆ ನೀಡುವ ವಿವಿಧ ಲಸಿಕೆಗಳನ್ನು ನೀಡಿರುವ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕಿನಲ್ಲಿ ನಿಗದಿತ ಗುರಿ ತಲುಪಿರುವುದಿಲ್ಲ, ಇದರ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಲ್ಲಾ ಮಕ್ಕಳಿಗೂ ಎಲ್ಲಾ ನಿಗದಿತ ಲಸಿಕೆಗಳನ್ನು ನೀಡಲು ಮಾನ್ಯ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದರು. ನಂತರ ವಿಪಿಡಿ ಸರ್ವೇಕ್ಷಣಾ ಕಾರ್ಯಕರ್ಮದಲ್ಲಿ ನಿಗದಿತ ಗುರಿ ತಲುಪಿರುವುದಾಗಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಅವರು ಮಾಹಿತಿ ನೀಡಿದರು. […]

ಮರೂರು ತಿತಿಮತಿ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ

  ಜನವಾಹಿನಿ News ಪೊನ್ನಪೇಟೆ : ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಮರೂರು ತಿತಿಮತಿ ಆಶ್ರಮ ಶಾಲೆಯಲ್ಲಿ 170 ವಿದ್ಯಾರ್ಥಿಗಳಿಗೆ ಕಣ್ಣಿನಪೊರೆ ಹಾಗೂ ಆರೋಗ್ಯ ತಪಾಸಣೆ ನಡೆಸಲಾಯಿತು. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಹಾಗೂ ಫಾರೂಕ್ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಷನ್ ಆಸ್ಪತ್ರೆ ವತಿಯಿಂದ ಮಂಗಳವಾರ ನಡೆದ ಆರೋಗ್ಯ ತಪಾಸಣಾ ಶಿಬಿರವನ್ನು ಕೊಡಗು ಜಿಲ್ಲೆಯ ಪರಿಶಿಷ್ಟ ಪಂಗಡಗಳ ಜಿಲ್ಲಾ ಅಧಿಕಾರಿ ಎಸ್. ಹೊನ್ನೇಗೌಡ ಉದ್ಘಾಟಿಸಿ ಮಾತನಾಡಿದ ಅವರು […]

ಚಿಕಿತ್ಸೆಗೆ ಪ್ರಥಮ ಆದ್ಯತೆ ನೀಡಿ ಬಿಲ್ ಬಗ್ಗೆ ನಂತರ ಗಮನ ಹರಿಸಿ : ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳಿಗೆ ಶಾಸಕ ಪೊನ್ನಣ್ಣ ಖಡಕ್ ಸೂಚನೆ

  ಜನವಾಹಿನಿ News ಮಡಿಕೇರಿ : ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ತಕ್ಷಣವೇ ಚಿಕಿತ್ಸೆ ನೀಡಿ. ಬಿ.ಪಿ.ಎಲ್ ಅಥವಾ ಎ.ಪಿ.ಎಲ್ ನವರು ಎಂದು ನಂತರ ಮಾಹಿತಿ ಪಡೆದು ಬಿಲ್ ಬಗ್ಗೆ ನಿರ್ಧರಿಸಿ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ( ಕೊಡಗು ಜಿಲ್ಲಾಸ್ಪತ್ರೆ) ನಿರ್ದೇಶಕರಿಗೆ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಖಡಕ್ ಸೂಚನೆ ನೀಡಿದ್ದಾರೆ. ಆಕಸ್ಮಿಕ ಪಟಾಕಿ ಸಿಡಿತದಿಂದ ಬೆರಳು ಕಳೆದುಕೊಂಡು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಗೋಣಿಕೊಪ್ಪದ ಶಾಲಾ ಬಾಲಕ ಪವನ್ […]

ಜನನ ಮತ್ತು ಮರಣ ನಾಗರಿಕ ನೋಂದಣಿ ನಿಖರವಾಗಿ ದಾಖಲಿಸಿ: ವೆಂಕಟ್ ರಾಜಾ

ಜನವಾಹಿನಿ News ಮಡಿಕೇರಿ : ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿಯನ್ನು ನಿಖರವಾಗಿ ದಾಖಲಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮತ್ತು ಮರಣ ನಾಗರಿಕ ನೋಂದಣಿ ಪದ್ಧತಿಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರದ ನಾಗರಿಕ ನೋಂದಣಿ ಜನನ ಮತ್ತು ಮರಣ ಅಧಿನಿಯಮ 1960 ರನ್ವಯ ಕರ್ನಾಟಕ ಜನನ ಮತ್ತು ಮರಣ ನೋಂದಣಿ 1970 ಮತ್ತು ಪುನರ್ […]

ವಿಶ್ವ ಏಡ್ಸ್ ದಿನ : ಎಚ್‍ಐವಿ ಹರಡುವಿಕೆ ನಿಯಂತ್ರಣಕ್ಕೆ ಮುಂದಾಗಿ : ಪ್ರೊ.ಮೇ. ರಾಘವ 

ಜನವಾಹಿನಿ News ಮಡಿಕೇರಿ : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಲಯನ್ಸ್ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ಮಡಿಕೇರಿ, ಎಫ್‍ಎಂಕೆಎಂಸಿ ಕಾಲೇಜು, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು ಮಡಿಕೇರಿ, ಓಡಿಪಿ-ಸ್ನೇಹಾಶ್ರಯ ಸಮಿತಿ, ಚೈತನ್ಯ ನೆಟ್‍ವರ್ಕ್ ಕೊಡಗು ಹಾಗೂ ಆಶೋದಯ ಸಮಿತಿ ಇವರ […]