ಕರ್ನಾಟಕ ಕಬಡ್ಡಿ ತಂಡವನ್ನು ನಾಯಕನಾಗಿ ಮುನ್ನಡೆಸಲಿರುವ ಕೊಡಗಿನ ಸಚಿನ್
ಮಡಿಕೇರಿ : ಜುಲೈ 25 ರಿಂದ ಪಂಜಾಬಿನ ಚಂಡೀಗಡದ ಪಂಚಕುಲದಲ್ಲಿ ಆಮೇಚೂರ್ ಕಬಡ್ಡಿ ಫೆಡರೇಷನ್ ಆಪ್ ಇಂಡಿಯಾ ಸಂಸ್ಥೆ ವತಿಯಿಂದ ನಡೆಯಲಿರುವ 72ನೇ ಹಿರಿಯರ ರಾಷ್ಟ್ರ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ತಂಡಕ್ಕೆ ಆಯ್ಕೆಗೊಂಡಿರುವ ಕೊಡಗಿನ ಸಚಿನ್ ಪೂವಯ್ಯ, ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.
ಈ ವಿಚಾರವನ್ನು ಕರ್ನಾಟಕ ತಂಡದ ಮ್ಯಾನೇಜ್ಮೆಂಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ತಂಡಕ್ಕೆ ಆಯ್ಕೆಗೊಂಡಿರುವ ಆಟಗಾರರನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಬೆಂಗಳೂರಿನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡು ಸನ್ಮಾನಿಸಿ ಗೌರಸಿದರು, ಈ ಸಂದರ್ಭ ರಾಜ್ಯ ಕಬಡ್ಡಿ ತಂಡದ ಮುಖ್ಯ ತರಬೇತುದಾರ ಶಶಿಧರ ವೈ.ಡಿ, ರಾಜ್ಯ ತಂಡಕ್ಕೆ ಆಯ್ಕೆಗೊಂಡಿರುವ ಆಟಗಾರರು ಸೇರಿದಂತೆ ಮತ್ತಿತರರು ಇದ್ದರು.









