Breaking News :

ಕಾನೂನು ಸಂಸ್ಥೆಗಳ ನಡುವಿನ ಫುಟ್ಬಾಲ್ ಲೀಗ್ ಗೆ ಶಾಸಕ ಪೊನ್ನಣ್ಣರಿಂದ ಚಾಲನೆ 

 


ಜನವಾಹಿನಿ News ಮಡಿಕೇರಿ : ಬೆಂಗಳೂರಿನ ಪ್ರತಿಷ್ಠಿತ ಕಾನೂನು ಸಂಸ್ಥೆಯಾದ ಎ.ಕೆ.ಎಸ್ ಲೀಗಲ್ ಹಾಗೂ ರೇ ಸಂಸ್ಥೆಯು ಜಂಟಿಯಾಗಿ ಆಯೋಜಿಸಿದ, “ಕಾನೂನು ಸಂಸ್ಥೆಗಳ ನಡುವಿನ ಫುಟ್ಬಾಲ್ ಪಂದ್ಯಾಟ” ಬೆಂಗಳೂರಿನಲ್ಲಿ ಜರಗಿತು.

ಈ ಪಂದ್ಯಾಟವನ್ನು ಉದ್ಘಾಟಿಸಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಸ್ಟಿಸ್ ಅರವಿಂದ್ ಕುಮಾರ್ ರವರು ಆಗಮಿಸಿದ್ದು ನಮಗೆಲ್ಲ ಹೆಮ್ಮೆಯ ಸಂಗತಿ. ಸುಮಾರು 40ಕ್ಕೂ ಅಧಿಕ ಕಾನೂನು ಸಂಸ್ಥೆಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಸರ್ವೋತ್ತಮ ತಂಡವು ಜಯಗಳಿಸಲಿ ಎಂಬ ಶುಭಾಶಯಗಳು ಕೋರುತ್ತೇನೆ. ಈ ಪಂದ್ಯಾಟವು ವಕೀಲರಿಗೆ ಹಬ್ಬದ ವಾತಾವರಣ ನಿರ್ಮಿಸಿದ್ದು, ಹಳೆ ಸ್ನೇಹಿತರ ಸಮ್ಮಿಲನ ಹಾಗೂ ಹೊಸಬರ ಪರಿಚಯಕ್ಕೆ ವೇದಿಕೆಯಾಗಿದೆ ಎಂದರು

ಈ ಸಂದರ್ಭದಲ್ಲಿ, ವಿರಾಜಪೇಟೆ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಎ.ಕೆ.ಎಸ್ ಲೀಗಲ್ ಸಂಸ್ಥೆಯ ಸ್ಥಾಪಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News