ಪುತ್ತೂರು : ಬಾರೀ ಮಳೆಯಿಂದಾಗಿ ದ.ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಡೆಮ್ಮಂಗಾರ ಎಂಬಲ್ಲಿ ಗುರುವಾರ ಸಂಜೆ ಮನೆಯ ಪಕ್ಕದ ಗುಡ್ಡ ಜರಿದು ಮನೆಗೆ ಭಾಗಶಃ ಹಾನಿಯಾಗಿದೆ.
ಇಲ್ಲಿನ ನಿವಾಸಿ ವಿಶ್ವನಾಥ ಎಂಬವರ ಪುತ್ರ ಕೃಷ್ಣಪ್ರಸಾದ್ ಎಂಬವರ ವಾಸದ ಮೆನೆಗೆ ಧರೆ ಜರಿದು ಹಾನಿಯಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.








