ಜನಸ್ನೇಹಿ ಡಾಕ್ಟರ್ ರಾಘವೇಂದ್ರ ವರ್ಗಾವಣೆ : ತೆರವಾದ ಸ್ಥಾನಕ್ಕೆ ತಜ್ಞ ವೈದ್ಯರ ನೇಮಕಕ್ಕೆ ಆಗ್ರಹ
ಸಿದ್ದಾಪುರ: ಕಳೆದ ಹದಿನೈದು ವರ್ಷಗಳಿಗೂ ಅಧಿಕ ಕಾಲ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲಿಸುತ್ತಿದ್ದ ಡಾಕ್ಟರ್ ರಾಘವೇಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ.
ಚಾಮರಾಜ ನಗರದ ಬೇಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿರುವ ಅವರು ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಸಿದ್ದಾಪುರ ಜನರ ಆರೋಗ್ಯದ ದೃಷ್ಟಿಯಿಂದ ಹಗಲು- ರಾತ್ರಿ ಎನ್ನದೆ ಹಲವು ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿರುವ ಡಾಕ್ಟರ್ ರಾಘವೇಂದ್ರ ಎಂದರೆ ಸಿದ್ದಾಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶದ ಜನತೆ ಅಚ್ಚುಮೆಚ್ಚು. ಸಾರ್ವಜನಿಕರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದರು.
ಅವರ ತೆರವಾದ ಸ್ಥಾನಕ್ಕೆ ವೈದ್ಯರು ಇನ್ನೂ ಯಾರು ನೇಮಕವಾಗಿಲ್ಲ ಸದ್ಯಕ್ಕೆ ಡಾಕ್ಟರ್ ರೋಹನ್ ರಾಜ್ ಆಸ್ಪತ್ರೆಗೆ ಬರುವ ರೋಗಿಗಳನ್ನು ಪರಿಶೀಲನೆ ಮಾಡಿ ಔಷಧೋಪಚಾರ ಮಾಡುತ್ತಿದ್ದಾರೆ. ಆದರೂ ಶೀಘ್ರವಾಗಿ ತೆರವಾಗಿರುವ ವೈದ್ಯರ ಸ್ಥಾನಕ್ಕೆ ನುರಿತ ತಜ್ಞ ವೈದ್ಯರನ್ನು ನೇಮಕ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುವುದೇ ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.








