ಜನವಾಹಿನಿ News ಅಹಮದಾಬಾದ್ : 2026ರ ಟಿ20 ವಿಶ್ವಕಪ್ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ ನ್ಯೂಜಿಲೆಂಡ್ ಅನ್ನು 96 ರನ್ಗಳಿಂದ ಸೋಲಿಸಿ, ಸತತ ಎರಡನೇ ಬಾರಿಗೆ ಮತ್ತು ದಾಖಲೆಯ ಮೂರನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ನಲ್ಲಿ, ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡುವ ಮೂಲಕ ಟೀಂ ಇಂಡಿಯಾವನ್ನು ಬ್ಯಾಟಿಂಗಿಗೆ ಆಹ್ವಾನಿಸಿತು.
ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 255/5 ರನ್ ಗಳಿಸಿ, ನ್ಯೂಜಿಲೆಂಡ್ ತಂಡಕ್ಕೆ ಬೃಹತ್ ಮೊತ್ತದ ಟಾರ್ಗೆಟ್ ಅನ್ನು ನೀಡಿತು. ಈ ಸವಾಲನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 159 ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.
ಟೀಂ ಇಂಡಿಯಾ ಸಾಧನೆ : ದಾಖಲೆಯ ಮೂರನೇ ಪ್ರಶಸ್ತಿ : ಭಾರತ ಸತತ 2ನೇ ಬಾರಿಗೆ (2024 ಮತ್ತು 2026) ಟಿ20 ವಿಶ್ವಕಪ್ ಗೆದ್ದು, ಒಟ್ಟಾರೆಯಾಗಿ 3ನೇ ಬಾರಿ ಟ್ರೋಫಿ ಎತ್ತಿಹಿಡಿದಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಆತಿಥೇಯ ವಹಿಸಿದ ದೇಶವೊಂದು ಟ್ರೋಫಿ ಗೆದ್ದ ಮೊದಲ ದೇಶ ಎಂಬ ಹೆಗ್ಗಳಿಕೆ ಪಡೆಯಿತು.
ಫೈನಲ್ನಲ್ಲಿ ದಾಖಲೆ: ನ್ಯೂಜಿಲೆಂಡ್ ವಿರುದ್ಧದ ಫೈನಲ್ನಲ್ಲಿ ಭಾರತ 255/5 ರನ್ ಗಳಿಸಿ, ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ ಗಳಿಸಿದ ತಂಡವಾಯಿತು.
ಸಂಜು ಸ್ಯಾಮ್ಸನ್ (89 ರನ್) ಮತ್ತು ಅಭಿಷೇಕ್ ಶರ್ಮಾ (52 ರನ್) ಹಾಗೂ ಇಶಾನ್ ಕಿಶನ್54 ರನ್ಗಳ ಅರ್ಧ ಶತಕದ ಜೊತೆ ಭರ್ಜರಿ ಬ್ಯಾಟಿಂಗ್ ನಡೆಸಿದರು.
4 ಓವರ್ ಎಸೆದ ಬುಮ್ರಾ 15ರನ್ ನೀಡಿ (4 ವಿಕೆಟ್) ಪಡೆದರೆ.. ಅಕ್ಷರ್ ಪಟೇಲ್ 3 ಎಸೆದು 27ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ವರುಣ್ ಚಕ್ರವರ್ತಿ, ಹಾರ್ದಿಕ್ ಪಾಂಡ್ಯ ಹಾಗೂ ಅಭಿಷೇಕ್ ಶರ್ಮ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಮಾರಕ ದಾಳಿ ಪ್ರದರ್ಶನ ನೀಡಿದರು.







