Breaking News :

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ತನಿಖೆ : ಎಸ್ಐಟಿಗೆ ವಹಿಸಿದ ಸರ್ಕಾರ 

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ತನಿಖೆ ಎಸ್ಐಟಿಗೆ ವಹಿಸಿದ ಸರ್ಕಾರ 

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿರುವುದಾಗಿ ಆರೋಪಿಸಲಾದ ಸರಣಿ ಹತ್ಯೆಗಳು ಮತ್ತು ಶವಗಳನ್ನು ಹೂತಿಡುವ ಪ್ರಕರಣದ ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರವು 4 ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ SIT ತಂಡವನ್ನು ರಚಿಸಿದೆ.

ಈ ತಂಡವನ್ನು ಆಂತರಿಕ ಭದ್ರತಾ ವಿಭಾಗದ ಪೊಲೀಸ್‌ ಮಹಾನಿರ್ದೇಶಕ ಡಾ. ಪ್ರಣವ್ ಮೊಹಾಂತಿ ಅವರ ನೇತೃತ್ವದಲ್ಲಿ ರಚಿಸಲಾಗಿದ್ದು, ಅನುಚೇತ್, ಸೌಮ್ಯಲತಾ, ಜಿತೇಂದ್ರಕುಮಾರ್ ಅವರನ್ನು ಎಸ್ಐಟಿ ಸದಸ್ಯರಾಗಿ ನಿಯೋಜಿಸಲಾಗಿದೆ.

ಮಹಿಳಾ ಆಯೋಗದ ಪಾತ್ರ ಮತ್ತು ಸಿಎಂಗೆ ಪತ್ರ ::

ಈ ಪ್ರಕರಣದ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ನಾಪತ್ತೆ ಕೊಲೆ ಮತ್ತು ಅತ್ಯಾಚಾರದ ಪ್ರಕರಣಗಳನ್ನು ಸಹ ತನಿಖೆ ಮಾಡುವಂತೆ ಕೋರಿದ್ದರು.

ಧರ್ಮಸ್ಥಳದ ಸುತ್ತಮುತ್ತಲು ಹಲವಾರು ವರ್ಷಗಳಿಂದ ನಡೆದಿರುವುದಾಗಿ ಆರೋಪಿಸಲಾದ ಅಸಹಜ ಸಾವುಗಳು, ಮಹಿಳೆಯರ ಮೇಲಿನ ಅಪರಾಧಗಳು ಮತ್ತು ವಿದ್ಯಾರ್ಥಿನಿಯರ ನಾಪತ್ತೆಗಳ ಬಗ್ಗೆ ವಿವರಗಳನ್ನು ಪೊಲೀಸರು ಒಂದು ವಾರದೊಳಗೆ ವರದಿ ಮಾಡುವಂತೆ ಮಹಿಳಾ ಆಯೋಗವು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ದೂರುದಾರರ ಆರೋಪಗಳು : ಇತ್ತೀಚೆಗೆ, ಮಾಜಿ ಪೌರಕಾರ್ಮಿಕ ಎಂದು ಹೇಳಿಕೊಂಡ ಒಬ್ಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಹೇಳಿಕೆಯ ಪ್ರಕಾರ, “ದಶಕಗಳ ಹಿಂದೆ ಅನೇಕ ಕೊಲೆಗಳನ್ನು ಮಾಡಿದವರು ನನ್ನನ್ನು ಬಲಿಪಶುವಾಗಿ ಮಾಡಿದ್ದಾರೆ. ಧರ್ಮಸ್ಥಳದ ದೇವಸ್ಥಾನ ಆಡಳಿತ ಮಂಡಳಿಯವರು ನನ್ನನ್ನು ಒತ್ತಾಯಿಸಿ ಮೃತದೇಹಗಳ.. ಹೂತು ಹಾಕುವಂತೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

SIT ತಂಡವು ತನಿಖೆಯನ್ನು ವೇಗವಾಗಿ ಮು೦ದುವರೆಸುತ್ತಿದೆ. ಶವಗಳನ್ನು ಹೂತಿಡುವ ಪ್ರಕರಣ, ಸಾಕ್ಷಿಗಳ ಹೇಳಿಕೆಗಳು, ದಾಖಲೆಗಳ ಪರಿಶೀಲನೆ ಮತ್ತು ಹಿಂದಿನ ಪ್ರಕರಣಗಳೊಂದಿಗಿನ ಸಂಬಂಧ ಇದ್ದರೆ ಅದನ್ನು ಗಮನದಲ್ಲಿಡಲಾಗುವುದು.

ಈ ಪ್ರಕರಣವು ರಾಜ್ಯದ ಭದ್ರತೆ, ನ್ಯಾಯ ಮತ್ತು ಸಾಮಾಜಿಕ ನೆಮ್ಮದಿಗೆ ಸ೦ಬ೦ಧಿಸಿದ್ದರಿಂದ, ಸರ್ಕಾರವು ಪಾರದರ್ಶಕತೆ ಮತ್ತು ನ್ಯಾಯಬದ್ಧ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ.

Share this article

ಟಾಪ್ ನ್ಯೂಸ್

More News