ಜನವಾಹಿನಿ NEWS ಸಿದ್ದಾಪುರ : ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯವು ೨೦೨೪-೨೫ನೇ ಸಾಲಿನಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಭಾರತೀಯ ನೃತ್ಯ ಕಲಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಶೇ ೧೦೦ ರಷ್ಟು ಫಲಿತಾಂಶವನ್ನು ನೀಡಿದ್ದಾರೆ. ನೃತ್ಯ ಕಲಾ ಶಾಲೆಯ ಸಿದ್ದಾಪುರದ ವಿದ್ಯಾರ್ಥಿಗಳಾದ ಹೆಚ್.ಆರ್. ರ‍್ಷಿತ, ಕೆ.ಆರ್. ಅದಿತ್ರಿ, ವಿ.ಜೆ. ಸಿಂಚನ, ಹೆಚ್.ಎಲ್. ಧೃತಿಕ ಮತ್ತು ಕೆ.ಎಸ್. ಜೀಶ್ನ ಇವರುಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಭಾರತೀಯ ನೃತ್ಯ ಕಲಾ ಶಾಲೆಯ ನೃತ್ಯ ಗುರು ವಿದುಷಿ ಜಲಜ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಟಿ.ಸಿ. ನಾಗರಾಜ್, ಮೂರ್ನಾಡು.







