Breaking News :

ಮಹಿಳಾ ವಿಶ್ವ ಚೆಸ್ : ಫೈನಲ್ ನಲ್ಲಿ ಕೊನೆರು ಹಂಪಿ-ದಿವ್ಯಾ ದೇಶಮುಖ್ ಮುಖಾಮುಖಿ ; ಯಾರೇ ಗೆದ್ದರೂ ಭಾರತಕ್ಕೇ ಪ್ರಶಸ್ತಿ..!

ಮಹಿಳಾ ವಿಶ್ವ ಚೆಸ್ ಚಾಂಪಿಯನ್ ಶಿಪ್ : ಫೈನಲ್ ನಲ್ಲಿ ಕೊನೆರು ಹಂಪಿ-ದಿವ್ಯಾ ದೇಶಮುಖ್ ಮುಖಾಮುಖಿ ; ಯಾರೇ ಗೆದ್ದರೂ ಭಾರತಕ್ಕೇ ಪ್ರಶಸ್ತಿ..!

ನವದೆಹಲಿ : ಭಾರತದ ಇಬ್ಬರು ಮಹಿಳಾ ಚೆಸ್ ಪಟುಗಳು ಇತಿಹಾಸ ನಿರ್ಮಿಸಲು ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿ ಫಿಡೆ ಮಹಿಳಾ ವಿಶ್ವಕಪ್‌ ಪ್ರಶಸ್ತಿ ಸುತ್ತಿನಲ್ಲಿ ಇಬ್ಬರು ಭಾರತೀಯರು ಸೆಣಸುತ್ತಿದ್ದು ಅನುಭವಿ ಆಟಗಾರ್ತಿ ಹಂಪಿ ಕೊನೇರು ಮತ್ತು ಯುವ ಆಟಗಾರ್ತಿ ದಿವ್ಯಾ ದೇಶ್‌ಮುಖ್ ಮುಖಾಮುಖಿಯಾಗಲಿದ್ದಾರೆ . ಈ ಮೂಲಕ ಭಾರತಕ್ಕೆ ಮತ್ತೊಂದು ಐತಿಹಾಸಿಕ ದಿನವಾಗಲಿದೆ.

ಭಾರತದ ಚೆಸ್ ಇತಿಹಾಸದಲ್ಲಿ ಇಬ್ಬರು ಮಹಿಳಾ ಚೆಸ್ ಪಟುಗಳು ವಿಶ್ವಕಪ್ ಫೈನಲ್ ತಲುಪಿರುವುದು ಇದೇ ಮೊದಲು ಬೆಸ್ಟ್ ಆಫ್ ತ್ರೀ ಮಾದರಿಯಲ್ಲಿ ಫೈನಲ್ ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯ ಜುಲೈ 26 ರಿಂದ ಪ್ರಾರಂಭವಾಗಲಿದೆ.

ನಿಜಕ್ಕೂ ಇದು ಭಾರತೀಯ ಚೆಸ್ ನ ಸುವರ್ಣಯುಗ! ಇದೇ ಮೊದಲ ಬಾರಿಗೆ ಫಿಡೆ ಮಹಿಳಾ ವಿಶ್ವಕಪ್ ಪ್ರಶಸ್ತಿ ಗಾಗಿ ಇಬ್ಬರು ಭಾರತೀಯ ಚೆಸ್ ಪಟುಗಳು ಸೆಣಸಲಿದ್ದಾರೆ. ಹೌದು ಅನುಭವಿ ಆಟಗಾರ್ತಿ ಹಂಪಿ ಕೊನೇರು ಮತ್ತು ಯುವ ಆಟಗಾರ್ತಿ ದಿವ್ಯಾ ದೇಶಮುಖ್ ಇದೀಗ 2025ರ FIDE ಮಹಿಳಾ ವಿಶ್ವಕಪ್‌ ನ ಫೈನಲ್ ನಲ್ಲಿ ಆಡುತ್ತಿದ್ದಾರೆ, ಹಾಗಾಗಿ ಯಾರು ಗೆದ್ದರೂ ಭಾರತಕ್ಕೇ ಪ್ರಶಸ್ತಿ ಎಂಬುದು ಚೆಸ್ ವಲಯದಲ್ಲಿ ತೀವ್ರ ಸಂಚಲನವನ್ನು ಉಂಟು ಮಾಡಿದೆ. ಕಳೆದ ವರ್ಷವಷ್ಟೇ ಭಾರತದ ಡಿ ಗುಕೇಶ್ ಅವರು ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು.

Share this article

ಟಾಪ್ ನ್ಯೂಸ್

More News