ರಾಷ್ಟ್ರೀಯ ಹಾಕಿ : ಕರ್ನಾಟಕ ತಂಡದ ಗೋಲ್ ಕಿಪರ್ ಆಗಿ ಕೊಡಗಿನ ಶ್ರಾವ್ಯ ದೇವಯ್ಯ ಆಯ್ಕೆ
ಮಡಿಕೇರಿ : ರಾಷ್ಟ್ರೀಯ ಮಹಿಳಾ ಜೂನಿಯರ್ ಹಾಕಿ ಕರ್ನಾಟಕ ತಂಡದ ಗೋಲ್ ಕೀಪರ್ ಆಗಿ ಕೊಡಗಿನ ನಾಪೋಕ್ಲು ಬಳಿಯ ಕಕ್ಕಬ್ಬೆ ಕುಂಜಿಲ ಗ್ರಾಮದ ಶ್ರಾವ್ಯ ದೇವಯ್ಯ ಆಯ್ಕೆಯಾಗಿದ್ದಾರೆ.
ಆಗಸ್ಟ್. 1ರಿಂದ 12ರವರೆಗೆ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆಯುವ ರಾಷ್ಟ್ರೀಯ ಮಹಿಳಾ ಜೂನಿಯರ್ ಕರ್ನಾಟಕ ಹಾಕಿ ತಂಡದ ಗೋಲ್ ಕೀಪರ್ ಆಗಿ ಶ್ರಾವ್ಯ ದೇವಯ್ಯ ಆಯ್ಕೆಯಾಗಿದ್ದಾರೆ.
ತಮಿಳುನಾಡಿನ ತಿರುಪುರ್ ಜಿವಿಜಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರಾವ್ಯ ಮುಂಬೈಯ ಎನ್ ಸಿ ಓ.ಇ ತಂಡದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಶ್ರಾವ್ಯ ಕಕ್ಕಬ್ಬೆ ಕುಂಜಿಲ ಗ್ರಾಮದ ಅರಮನೆ ಪಾಲೇರ ದೇವಯ್ಯ ಚಿತ್ರ ದಂಪತಿಗಳ ಪುತ್ರಿಯಾಗಿದ್ದಾರೆ.








