Breaking News :

ಸೆ.19ರಂದು ರಾಜ್ಯ ಮಟ್ಟದ ಕಿವುಡರ ಸಂಘದ ಕ್ರೀಡಾಕೂಟ

 

 


ಜನವಾಹಿನಿ NEWS ವಿರಾಜಪೇಟೆ : ಗೋಣಿಕೊಪ್ಪಲುವಿನ ಕಾಲ್ಸ್ ಶಾಲಾ ಮೈದಾನದಲ್ಲಿ  ಸೆಪ್ಟೆಂಬರ್ 19 ರಂದು ಕಿವುಡ ಸಮುದಾಯದ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕಿವುಡರ ಸಂಘದ ಗೌರವ ಅಧ್ಯಕ್ಷ ಜೋಸೆಫ್ ಸ್ಯಾಮ್ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಿವುಡ ಸಮುದಾಯದ ಸಬಲಿಕರಣಕ್ಕಾಗಿ ನಮ್ಮ ಸಂಘವು ಎಂಟು ವರ್ಷಗಳ ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಸಂದರ್ಭದಲ್ಲಿ ಕಿವುಡ ರ ವಯುಕ್ತಿಕ ಬೆಳವಣಿಗೆ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುವ ನಿಟ್ಟಿನಲ್ಲಿ 2025ರ ಸೆಪ್ಟೆಂಬರ್ 19 ರಂದು ಗೋಣಿಕೊಪ್ಪಲುವಿನ ಕಾಲ್ಸ್ ವಿದ್ಯಾ ಸಂಸ್ಥೆಯ ಮೈದಾನದಲ್ಲಿ ರಾಜ್ಯ ಮಟ್ಟದ ಕಿವುಡರ ಕ್ರೀಡಾಕೂಟವನ್ನು ಆಯೋಜನೆ ಮಾಡಲು ತೀರ್ಮಾನಿಸಿರುತ್ತೇವೆ.

ಕರ್ನಾಟಕದಾದ್ಯಂತ 15 ಜಿಲ್ಲೆಗಳಿಂದ ಸುಮಾರು 200 ಕ್ಕೂ ಹೆಚ್ಚು ಕಿವುಡ ಶಾಲಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ವಸತಿ ಮತ್ತು ಊಟ, ಚಿಕಿತ್ಸಾ ವ್ಯವಸ್ಥೆ, ಕ್ರೀಡಾ ಕಿಟ್ ಗಳು, ಉಪಕರಣಗಳು, ಮತ್ತು ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಟ್ರೋಫಿ, ಪದಕಗಳು, ಪ್ರಮಾಣ ಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಲಾಗುತ್ತದೆ ಎಂದು ಹೇಳಿದರು.

ಕ್ರೀಡಾಕೂಟಕ್ಕೆ ಕ್ರೀಡಾಂಗಣ ಖರ್ಚು ಮತ್ತು ಊಟದ ವ್ಯವಸ್ಥೆಗೆ ಸುಮಾರು 2 ಲಕ್ಷ, 200 ಮಕ್ಕಳಿಗೆ ವಸತಿ ಮತ್ತು ಊಟ ಕ್ಕೆ 1,50ಲಕ್ಷ, ಅತಿಥಿಗಳು, ಶಾಲಾ ಮಕ್ಕಳು ಉಟೋಪಚಾರಕ್ಕೆ ಒಂದು ಲಕ್ಷ, ಟ್ರೋಫಿ, ಸ್ಮರಣಿಕೆ, ಪ್ರಮಾಣ ಪತ್ರ ಲೋಗೋ, 50 ಸಾವಿರ,ಮತ್ತು ಬ್ಯಾನರ್, ಶೋ ಬೋರ್ಡ್ ಗಳು ಇನ್ನಿತರ ಖರ್ಚು 20 ಸಾವಿರ, ಒಟ್ಟು 5ಲಕ್ಷದ 20ಸಾವಿರ ವೆಚ್ಚ ತಗಲುವುದರಿಂದ ದಾನಿಗಳು ಉದಾರವಾಗಿ ದೇಣಿಗೆ ನೀಡುವ ಮೂಲಕ ರಾಜ್ಯ ಮಟ್ಟದ ಕಿವುಡರ ಕ್ರೀಡಾಕೂಟಕ್ಕೆ ಬೆಂಬಲಿಸಬೇಕೆಂದು ಕೇಳಿಕೊಂಡರು.ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಆಯೇಷಾ ಮಾತನಾಡಿ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕಿವುಡರ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿದ್ದೇವೆ.

ಕೊಡಗಿನಲ್ಲಿರುವ 13 ರಿಂದ 18 ವಯಸ್ಸಿನ ಮತ್ತು 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳು ಹೆಸರನ್ನು ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೆಸರನ್ನು ನೋಂದಾಯಿಸಿಕೊಳ್ಳಹುದು. ಮುಖ್ಯವಾಗಿ ಸರಕಾರದಿಂದ ಯಾವುದೇ ಅನುದಾನ ಈ ಕ್ರೀಡಾಕೂಟಕ್ಕೆ ಇಲ್ಲದಿರುವುದರಿಂದ ಕೊಡಗಿನ ದಾನಿಗಳು ಸಹಾಯ ಮಾಡುವ ಮೂಲಕ ಕ್ರೀಡಾಕೂಟ ದ ಯಶಸ್ವಿಗೆ ಸಹಕರಿಸಬೇಕೆಂದು ವಿನಂತಿಸಿದರು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಿವುಡರ ಸಂಘದ ಗೌರವ ಅಧ್ಯಕ್ಷರಾದ ಜೋಸೆಫ್ ಸ್ಯಾಮ್ ರವರನ್ನು 9611251210 ಸಂಪರ್ಕಿಸಬಹುದು. ಜಿಲ್ಲಾಧ್ಯಕ್ಷರನ್ನು ವಾಟ್ಸಾಪ್ ಸಂದೇಶ ಮುಖಾಂತರ ಸಂಪರ್ಕಿಸಲು 9342402527 ಗೆ ಸಂಪರ್ಕ ಮಾಡಬಹುದು. ಕಿವುಡರ ಸಂಘದ ಬ್ಯಾಂಕ್ ಖಾತೆಗೆ ಹಣ ದೇಣಿಗೆ ನೀಡಲು ಯೂನಿಯನ್ ಬ್ಯಾಂಕ್ a/c no 520101254608758. Ifsc ಕೋಡ್ UBINO900087 ಬಳಸಿ ಸಂದಾಯ ಮಾಡಬಹುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಗೌರು ಸೋಮಣ್ಣ, ಉಪಾಧ್ಯಕ್ಷರಾದ ಶಂಕರನಾರಾಯಣ, ಖಜಾಂಚಿ ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News