ಮಡಿಕೇರಿಯಲ್ಲಿ ನಡೆದ 4 ಲೈನ್ ಕ್ರಿಕೆಟ್ ಪಂದ್ಯಾವಳಿ ಟೀಮ್ ಫ್ಲ್ಯಾಶ್ ಚಾಂಪಿಯನ್ಸ್
ಮಡಿಕೇರಿ : ನಗರದ ರಾಣಿಪೇಟೆಯ ಮುನೇಶ್ವರ ಯುವಕ ಸಂಘದ ವತಿಯಿಂದ ಗಾಂಧಿ ಮೈದಾನದಲ್ಲಿ ನಡೆದ 2ನೇ ವರ್ಷದ 4 ಲೈನ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಟೀಮ್ ಫ್ಲ್ಯಾಶ್ ತಂಡ ಚಾಂಪಿಯನ್ಸ್ ಪಟ್ಟವನ್ನು ತನ್ನದಾಗಿಸಿಕೊಂಡರೆ. ಟೀಂ ಡಿ.ಕೆ.ಬಾಯ್ಸ್ ಬಿ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಸಂತು ಮ್ಯಾಕ್ಸ್ ವೆಲ್ ಬೆಸ್ಟ್ ಬ್ಯಾಟ್ಸ್‌ಮನ್, ಮ್ಯಾನ್ ಆಫ್ ದಿ ಮ್ಯಾಚ್, ರಕ್ಷಿತ್ ಬೆಸ್ಟ್ ಬೌಲರ್ ಹಾಗೂ ಪುನೀತ್ ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿ ಪಡೆದರು.
ಮುನೇಶ್ವರ ಯುವಕ ಸಂಘದ ಅಧ್ಯಕ್ಷ ಹೆಚ್.ಹೆಚ್.ಅಜಿತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಪ್ರೋತ್ಸಾಹದ ಮಾತುಗಳನ್ನಾಡಿದರು.
ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ 15 ಸಾವಿರ ರೂ. ಮತ್ತು ದ್ವಿತೀಯ ಬಹುಮಾನವಾಗಿ 10 ಸಾವಿರ ರೂ. ನೀಡಲಾಯಿತು.
ನಗರಸಭಾ ಅಧ್ಯಕ್ಷೆ ಪಿ.ಕಲಾವತಿ, ಸದಸ್ಯ ಮುದ್ದುರಾಜು ಬಿ.ಎನ್. ಮುನೇಶ್ವರ ಯುವಕ ಸಂಘದ ಕಾರ್ಯದರ್ಶಿ ಹೆಚ್.ಎಲ್. ಶ್ರೇಯಸ್ ಮತ್ತಿತರ ಪ್ರಮುಖರು ಇದ್ದರು.








