Breaking News :

ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರಿಂದ ಅಜಿ೯ ಅಹ್ವಾನ

ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರಿಂದ ಅಜಿ೯ ಅಹ್ವಾನ

ಮಡಿಕೇರಿ : ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿಯಿಂದ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 2ರ ವರೆಗೆ ನಗರದಲ್ಲಿ ಆಯೋಜಿತ ಮಡಿಕೇರಿ ದಸರಾ ಜನೋತ್ಸವ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರು, ಕಲಾತಂಡಗಳಿಂದ ಅಜಿ೯ ಆಹ್ವಾನಿಸಲಾಗಿದ ಎಂದು ಸಮಿತಿಯ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.

ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸೆ.23 ರಿಂದ ಅ2 ರವರೆಗೆ ದಸರಾ ಸಾಂಸ್ಕೖತಿಕ ಸಮಿತಿಯಿಂದ ವೈವಿಧ್ಯಮಯ ಕಾಯ೯ಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಸಾಂಸ್ಕೖತಿಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವ ಕಲಾವಿದರು, ಕಲಾತಂಡಗಳು ತಾವು ಪ್ರದಶಿ೯ಸುವ ಕಲಾ ಪ್ರಕಾರ, ಪಾಲ್ಗೊಳ್ಳುವ ಕಲಾವಿದರ ಸಂಖ್ಯೆ, ಅಪೇಕ್ಷಿತ ದಿನಾಂಕ, ಮೊಬೈಲ್ ಸಂಖ್ಯೆಯೊಂದಿಗಿನ ವಿಳಾಸವನ್ನು ಆಗಸ್ಟ್ 25 ರೊಳಗಾಗಿ ಅಧ್ಯಕ್ಷರು ಮಡಿಕೇರಿ ನಗರ ದಸರಾ ಸಾಂಸ್ಕೖತಿಕ ಸಮಿತಿ, ಮಡಿಕೇರಿ ನಗರ ದಸರಾ ಸಮಿತಿ ಕಛೇರಿ, ನಗರಸಭಾ ಸಂಕೀಣ೯, ಮುಖ್ಯರಸ್ತೆ, ಮಡಿಕೇರಿ – ೫೭೧೨೦೧ ಈ ವಿಳಾಸಕ್ಕೆ ತಲುಪಿಸಬೇಕು. ಅಥವಾ madikeridasara @ gmail.com ಇಮೇಲ್ ಮೂಲಕ ಕಳುಹಿಸಬಹುದು. ಅಜಿ೯ ಸಲ್ಲಿಸುವ ಕೊನೇ ದಿನಾಂಕದ ಬಳಿಕ ಬಂದ ಅಜಿ೯ಗಳನ್ನು ಪರಿಗಣಿಸಲಾಗುವುದಿಲ್ಲ.

ಕಲಾಪ್ರದಶ೯ನದ ಆಯ್ಕೆಯಲ್ಲಿ ದಸರಾ ಸಾಂಸ್ಕೖತಿಕ ಸಮಿತಿಯ ತೀಮಾ೯ನವೇ ಅಂತಿಮವಾಗಿರುತ್ತದೆ.

ಒಂದು ಕಲಾತಂಡಕ್ಕೆ , ಕಲಾವಿದರಿಗೆ ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ 11 ದಿನಗಳ ಪೈಕಿ ಒಂದು ಬಾರಿ ಮಾತ್ರ ಪ್ರದಶ೯ನ ನೀಡಲು ಅವಕಾಶ ಇದೆ ಎಂದು ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.9972538584, 8762110948 ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್

More News