Breaking News :

ಮಂಗಳೂರು; ಜೋಕಟ್ಟೆಯಲ್ಲಿ ಬಾಲಕಿಯ ಕೊಲೆ ಪ್ರಕರಣ; ಇಬ್ಬರು ವಶಕ್ಕೆ!

ಮಂಗಳೂರು: ಅಪ್ರಾಪ್ತ ಬಾಲಕಿಯನ್ನು  ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಣಂಬೂರು ಠಾಣಾ ವ್ಯಾಪ್ತಿಯ ಜೋಕಟ್ಟೆಯಲ್ಲಿ ನಡೆದಿದೆ.

ಪಣಂಬೂರಿನ ಬಾಡಿಗೆ ಮನೆಯೊಂದರಲ್ಲಿ ಬೆಳಗಾವಿ ಮೂಲದ ಹನುಮಂತ ಎಂಬವರು ವಾಸವಾಗಿದ್ದು ಅವರ ಮನೆಯಲ್ಲಿ ಕಳೆದ 4 ದಿನಗಳ ಹಿಂದೆ ತಮ್ಮನ ಮಗಳಾದ 13 ವರ್ಷದ ಬಾಲಕಿಯು ಕೈ ನೋವಿನ ಚಿಕಿತ್ಸೆ ಪಡೆಯಲು ಬೆಳಗಾವಿಯಿಂದ ಬಂದು ಉಳಿದುಕೊಂಡಿದ್ದಳು .

ಮನೆಯಲ್ಲಿರುವವರೆಲ್ಲಾ ಕೆಲಸಕ್ಕೆ ಹೋದ ನಂತರ ಬೆಳ್ಳಿಗ್ಗೆ ಸರಿ ಸುಮಾರು 10.30 ಗಂಟೆಗೆ ಅಪ್ರಾಪ್ತ ಮೃತ ಬಾಲಕಿಯ ತಾಯಿಯು ಪಕ್ಕದ ಮನೆಯವರಿಗೆ ಕರೆ ಮಾಡಿ ಬಾಲಕಿಗೆ ಪೋನ್ ಕೊಡಲು ಹೇಳಿದ್ದಾರೆ.

ಪಕ್ಕದ ಮನೆಯವರು ಪೋನ್ ಕೊಡಲು ಬಾಲಕಿ ವಾಸವಿದ್ದ ಬಾಡಿಗೆ ಮನೆಗೆ ಬಂದಾಗ ಬಾಲಕಿಯ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಯಾರೋ ಕೊಲೆ ಮಾಡಿದ ರೀತಿ ಪತ್ತೆಯಾಗಿದ್ದಳು. ಪಕ್ಕದ ಮನೆಯವರು ತಾಯಿಗೆ ಪೋನಿನಲ್ಲಿ ವಿಷಯ ತಿಳಿಸಿದ್ದಾರೆ. ಕೂಡಲೇ ಮೃತ ಬಾಲಕಿಯ ತಾಯಿಯು ಹನುಮಂತನಿಗೆ ಪೋನ್ ಮೂಲಕ ಬಾಡಿಗೆ ಮನೆಗೆ ಹೋಗುವಂತೆ ತಿಳಿಸಿದ್ದಾರೆ.

ಹನುಮಂತನು ಬಾಡಿಗೆ ಮನೆಗೆ ಬಂದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಡಿಸಿಪಿ ದಿನೇಶ್ ಕುಮಾರ್ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದು , ಪಣಂಬೂರು ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿ ತನಿಖೆ ಆರಂಭಿಸಿದ್ದಾರೆ.

ಪ್ರಕರಣಕ್ಕೆ ಸಂಬಂದಿಸಿ ಬೆಳಗಾವಿ ಮೂಲದವರೆ ಆದ ಫಕೀರಪ್ಪ ಮತ್ತು ಶಾಂತಪ್ಪ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share this article

ಟಾಪ್ ನ್ಯೂಸ್

More News