Breaking News :

ಮೂಡಬಿದ್ರೆ; ಪೊಲೀಸ್ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ; ಮೂವರು ಪೊಲೀಸ್ ವಶಕ್ಕೆ

ಮೂಡಬಿದಿರೆ: ಪೊಲೀಸ್‌ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಜಾತಿ ನಿಂದನೆಗೈದ ಆರೋಪದಲ್ಲಿ ಮೂವರನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತರನ್ನು ಮೂಡುಬಿದಿರೆ ಒಂಟಿಕಟ್ಟೆ ನಿವಾಸಿಗಳಾದ ಮುಡಾ ಸದಸ್ಯ ಪ್ರಕಾಶ್‌, ಅಬ್ದುಲ್‌ ಸತ್ತಾರ್‌ ಮತ್ತು ವಿಜೇತ್‌ ಎಂದು ತಿಳಿದು ಬಂದಿದೆ.

ಮೂಡಬಿದಿರೆ ಪೊಲೀಸ್‌ ಠಾಣೆಯ ಪಿಎಸ್‌ ಐ ಕೃಷ್ಣಪ್ಪ ಎಂಬವರು ಬಸ್‌ ನಿಲ್ದಾಣದ ಬಳಿಯ ರಸ್ತೆಯಲ್ಲಿ ವಾಹನಗಳ ಹೈಮಾಸ್ಟ್‌ ದೀಪಗಳ ಪರಿಶೀಲನೆ ನಡೆಸುತ್ತಿದ್ದ ವೇಳೆ ಹೆಲ್ಮೆಟ್‌ ಧರಿಸದೆ ತ್ರಿಪಲ್‌ ರೈಡ್‌ನಲ್ಲಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರಿಗೆ ಪಿಎಸ್‌ಐ ಬೈದಿದ್ದಾರೆ ಎಂದು ಆರೋಪಿಸಿ ಮೂಡುಬಿದಿರೆ ಮುಡಾ ಸದಸ್ಯ ಪ್ರಕಾಶ್‌, ಅಬ್ದುಲ್‌ ಸತ್ತಾರ್‌ ಮತ್ತು ವಿಜೇತ್‌ ಎಂಬವರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ಮೂವರೂ ಪಿಎಸ್‌ಐ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ, ಅವರ ಜಾತಿ ನಿಂದನೆ ನಡೆಸಿ ಅವಾಚ್ಯವಾಗಿ ಬೈದು ನಿಂದಿಸಿದ್ದಾರೆ ಎಂದು ಪಿಎಸ್‌ಐ ಕೃಷ್ಣಪ್ಪ ಅವರು ಮೂಡಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Share this article

ಟಾಪ್ ನ್ಯೂಸ್

More News