Breaking News :

ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟ ಜೈ ಶಾ: ಅಮಿತ್ ಶಾ ಪುತ್ರನಿಗೆ ನೀಡುತ್ತಾ 16 ರಾಷ್ಟ್ರಗಳು ಬೆಂಬಲ?

ಬಿಸಿಸಿಐ ಕಾರ್ಯದರ್ಶಿಯಾಗಿರುವ ಜೈ ಶಾ ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇದಕ್ಕೆ 16 ರಾಷ್ಟ್ರಗಳ ಒಪ್ಪಿಗೆ ಬೇಕಾಗಿದೆ.

ಜೈಶಾಗೆ ಭಾರತ, ಆಫ್ಘಾನಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ , ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ ದೇಶಗಳು ಬೆಂಬಲ ನೀಡಬೇಕಾಗಿದೆ. ಈ 16 ರಾಷ್ಟ್ರಗಳು ಕೂಡ ಮತದಾನದ ಅಧಿಕಾರ ಹೊಂದಿವೆ.

ಮುಂದಿನ ನವೆಂಬರ್ ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಗ್ರೇಗ್ ಬರ್ಕಲಿ ಅವರ ಅಧಿಕಾರವಧಿ ಮುಕ್ತಾಯವಾಗಲಿದೆ.ಅವರ ಜಾಗಕ್ಕೆ ಅಮಿತ್ ಶಾ ಅವರ ಪುತ್ರ ಜೈ ಶಾ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಜೈಶಾಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ದೇಶ ಈಗಾಗಲೇ ಬೆಂಬಲ ಘೋಷಿಸಿವೆ. ಇನ್ನುಳಿದ ರಾಷ್ಟ್ರಗಳು ಜೈ ಶಾ ಅವರಿಗೆ ಮತದಾನ ಮಾಡಿದರೆ ಐಸಿಸಿ ಅಧ್ಯಕ್ಷರಾಗುವುದು ಖಚಿತವಾಗಿದೆ.

Share this article

ಟಾಪ್ ನ್ಯೂಸ್

More News