Breaking News :

BREAKING ಬಂಟ್ವಾಳ ಪುರಸಭೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್, ಉಪಾಧ್ಯಕ್ಷ ಸ್ಥಾನ ಎಸ್ ಡಿಪಿಐ ತೆಕ್ಕೆಗೆ

ಬಂಟ್ವಾಳ: ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ -ಉಪಾಧ್ಯಕ್ಷ ಚುನಾವಣೆಯು ಇಂದು ನಡೆದಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್‌ ಪಕ್ಷದ ವಾಸು ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ಎಸ್‌ಡಿಪಿಐ ಪಕ್ಷದ ಮೂನಿಶ್ ಅಲಿ ಆಯ್ಕೆಯಾಗಿದ್ದಾರೆ

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಎ.ಗೋವಿಂದ ಪ್ರಭು, ಕಾಂಗ್ರೆಸ್ ನಿಂದ ವಾಸು ಪೂಜಾರಿ ಲೊರೆಟ್ಟೊ ಹಾಗೂ ಎಸ್.ಡಿ.ಪಿ.ಪಕ್ಷದ ಮಹಮ್ಮದ್ ಇದ್ರೀಶ್ ಪಿ.ಜೆ ನಾಮಪತ್ರ ಸಲ್ಲಿಸಿದ್ದರು. ಕೊನೇ ಕ್ಷಣದಲ್ಲಿ ಇದ್ರೀಶ್ ನಾಮಪತ್ರ ವಾಪಾಸ್ ಪಡೆದರು. ಅಧ್ಯಕ್ಷ ಚುನಾವಣೆಯಲ್ಲಿ ಎಸ್‌ಡಿಪಿಐ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಹರಿಪ್ರಸಾದ್ ಹಾಗೂ ಎಸ್‌ಡಿಪಿಐ ಪಕ್ಷದ ಮೂನಿಶ್ ಆಲಿ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಎಸ್‌ಡಿಪಿಐ ಅಭ್ಯರ್ಥಿಗೆ ಬೆಂಬಲಿಸಿದೆ. ಕಾಂಗ್ರೆಸ್ ಹಾಗೂ ಎಸ್ ಡಿಪಿಐ ಮೈತ್ರಿಯಿಂದ ಬಿಜೆಪಿ ಮುಖಭಂಗ ಉಂಟಾಗಿದೆ.

27 ಸದಸ್ಯ ಬಲದ ಬಂಟ್ವಾಳ ಪುರಸಭೆಯಲ್ಲಿ ಕಾಂಗ್ರೆಸ್ 12 ಸ್ಥಾನ ಹೊಂದಿತ್ತು. ಕಾಂಗ್ರೆಸ್ ಸದಸ್ಯ ಗಂಗಾಧರ ಪೂಜಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದು, ಕಾಂಗ್ರೆಸ್ ಬಲ 11ಕ್ಕೆ ಕುಸಿದಿತ್ತು. ಬಿಜೆಪಿಗೆ 11 ಸದಸ್ಯರು ಮತ್ತು ಸ್ಥಳೀಯ ಶಾಸಕರು ಮತ್ತು ಸಂಸದರ ಮತ 13 ಮತಗಳಿದ್ದವು. ಎಸ್ ಡಿಪಿಐ 4 ಸದಸ್ಯರ ಬಲ ಹೊಂದಿದೆ. ಅಧ್ಯಕ್ಷ ಚುನಾವಣೆಯಲ್ಲಿ 4 ಮಂದಿ ಎಸ್ ಡಿಪಿಐ ಸದಸ್ಯರು ಕಾಂಗ್ರೆಸ್ ಗೆ ಬೆಂಬಲಿಸಿದ್ದಾರೆ.

Share this article

ಟಾಪ್ ನ್ಯೂಸ್

More News