Breaking News :

ಪುತ್ತೂರು: ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣ; ಮೂವರು ಆರೋಪಿಗಳ ಬಂಧನ, ಜಾಮೀನಿನಲ್ಲಿ ಬಿಡುಗಡೆ

ಪುತ್ತೂರು: ಕೋರ್ಟ್‌ ರಸ್ತೆಯಲ್ಲಿನ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಕೋಡಿಂಬಾಡಿಯ ಧನ್‌ರಾಜ್‌, ರಾಮಕುಂಜದ ಬಾರಿಂಜ ನಿವಾಸಿ ಕಿರಣ್‌ ಕುಮಾರ್‌ ಮತ್ತು ಬೆಳ್ತಂಗಡಿ ಊರಮಾಲ್‌ ನಿವಾಸಿ ಸಂಜಯ್‌ ಗೌಡ ಅಲಿಯಾಸ್‌ ಸಂಜೀವ ಗೌಡ ಬಂಧಿತ ಆರೋಪಿಗಳು.

ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.



Share this article

ಟಾಪ್ ನ್ಯೂಸ್

More News