ರಾಜ್ಯ ಕಬಡ್ಡಿ ತಂಡಕ್ಕೆ ಕೊಡಗಿನ ಸಚಿನ್ ಆಯ್ಕೆ
ಕೊಡಗು : ಆಮೇಚೂರ್ ಕಬಡ್ಡಿ ಫೆಡರೇಷನ್ ಆಪ್ ಇಂಡಿಯಾ ಸಂಸ್ಥೆಯು ಪಂಜಾಬ್ ರಾಜ್ಯದ ಚಂಡೀಗಡದ ಪಂಚಕುಲದಲ್ಲಿ ಜುಲೈ 25 ರಿಂದ 28 ರವರೆಗೆ ನಡೆಸಲಿರುವ 72ನೇ ಹಿರಿಯರ ರಾಷ್ಟ್ರ ಮಟ್ಟದ ಕಬಡ್ಡಿ ಟೂರ್ನಿಯಲ್ಲಿ ಕೊಡಗು ಜಿಲ್ಲೆಯ ಸಚಿನ್ಸೋ ಪೂವಯ್ಯ ಹೊಟ್ಟೆಯಂಡ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಸಚಿನ್ ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಉಂಜಿಗನಹಳ್ಳಿ ನಿವಾಸಿ ಪೂವಯ್ಯ.ಹೆಚ್.ಎಸ್ ಹಾಗೂ ಸರಸು.ಹೆಚ್.ಪಿ. ದಂಪತಿಗಳ ಪುತ್ರ.
ಸಚಿನ್ ಈಗಾಗಲೇ ಜಿಲ್ಲೆ ಹಾಗೂ ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಇದೀಗ ರಾಷ್ಟ್ರ ಮಟ್ಟದ ಟೂರ್ನಿಗಾಗಿ ಕರ್ನಾಟಕ ತಂಡಕ್ಕೆ ಆಯ್ಕೆ ಆಗುವ ಮೂಲಕ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.








