ವಿಶ್ವ ಟೆಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲಿರುವ ಹೊನಲಿ ಕಿಶೋರ್ ಗೆ ಅಭಿನಂದಿಸಿದ ಮಂತರ್
ಮಡಿಕೇರಿ : ಮಲೇಶಿಯಾದ ಕೌಲಾಲಂಪುರದಲ್ಲಿ ಆಗಸ್ಟ್ 7ರಂದು ನಡೆಯಲಿರುವ ಇಂಟರ್ನ್ಯಾಷನಲ್ ಟೆಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿರುವ ಸೋಮವಾರಪೇಟೆ ಮೂಲದ ವಿದ್ಯಾರ್ಥಿನಿ ” ಹೊನಲಿ ಕಿಶೋರ್” ರವರನ್ನು ಶಾಸಕ ಮಂತರ್ ಗೌಡ ಬೆಂಗಳೂರಿನಲ್ಲಿ ಭೇಟಿ ಮಾಡಿ ಅಭಿನಂದಿಸಿ, ಶುಭಹಾರೈಸಿದರು.








