Breaking News :

ಮಾಜಿ SAI ಹಾಕಿ ತರಬೇತುದಾರ ಚೇಂದಂಡ ಅಶ್ವತ್ ನಿಧನ


ಮಾಜಿ SAI ಹಾಕಿ ತರಬೇತುದಾರ ಚೇಂದಂಡ ಅಶ್ವತ್ ನಿಧನ


ಮಡಿಕೇರಿ : ಮಾಜಿ SAI ಹಾಕಿ ತರಬೇತುದಾರ ಚೇಂದಂಡ ಅಶ್ವತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಪಾರ ಕ್ರೀಡಾ ಪ್ರೇಮಿಗಳನ್ನು ಹಾಗೂ ಸ್ನೇಹಿತರ ಬಳಗವನ್ನು ಅಗಲಿದ್ದಾರೆ.

ಗ್ವಾಲಿಯರ್ ನಲ್ಲಿ B.P.Ed ಹಾಗೂ M.P.Ed ಪಡೆದು NIS ಪದವಿ ಪಡೆದಿರುವ ಇವರು ಬೆಂಗಳೂರಿನ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ತರಬೇತುದಾರ, ದಶಕಗಳಿಂದ ಬೆಂಗಳೂರಿನ SAI ತರಬೇತಿದಾರನಾಗಿ ಸೇವೆಸಲ್ಲಿಸಿದ್ದಾರೆ.

ಕೊಡಗು ಹಾಗೂ ಕರ್ನಾಟಕದಿಂದ ಹಲವು ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಆಟಗಾರರನ್ನು ತಯಾರು ಮಾಡಿರುವ ಹೆಗ್ಗಳಿಕೆ ಹೊಂದಿದ್ದಾರೆ. ಇವರ ಅಗಲಿಕೆಗೆ ಜಿಲ್ಲೆಯ ಕ್ರೀಡಾಪಟುಗಳು ಹಾಗೂ ಹಾಕಿ ಸ್ನೇಹಿತರ ಬಳಗ ಕೊಡಗು ಕಂಬನಿ ಮಿಡಿದಿದೆ.

Share this article

ಟಾಪ್ ನ್ಯೂಸ್

More News