Breaking News :

ಸಿದ್ದಾಪುರ ಆಸ್ಪತ್ರೆಗೆ ನುರಿತ ವೈದ್ಯರ ನೇಮಕಕ್ಕೆ ಸಿ.ಪಿ.ಐ.ಎಂ ಪಕ್ಷದ ಸಂಚಾಲನ ಸಮಿತಿ ಒತ್ತಾಯ

 

 


ಜನವಾಹಿನಿ NEWS ಸಿದ್ದಾಪುರ : ವೈದ್ಯರ ಕೊರತೆ ಎದುರಿಸುತ್ತಿರುವ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ನುರಿತ ತಜ್ಞ ವೈದ್ಯರುಗಳ ನೇಮಕದ ಜತೆ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಬೇಕೆಂದು ಸಿಪಿಐಎಂ ಪಕ್ಷದ ಸಿದ್ದಾಪುರ ಸಂಚಾಲನ ಸಮಿತಿ ಆಗ್ರಹಿಸಿದೆ.

ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಮಿತಿಯ ಕಾರ್ಯದರ್ಶಿ ಎನ್.ಡಿ.ಕುಟ್ಟಪ್ಪ, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 30,000 ಕಿಂತಲು ಹೆಚ್ಚು ಜನರು ವಾಸವಿದ್ದು, ಅನಾರೋಗ್ಯ, ತುರ್ತು ಸಂದರ್ಭಗಳಲ್ಲಿ ಇದೇ ಆಸ್ಪತ್ರೆಯನ್ನು ಅವಲಂಬಿತರಾಗಿದ್ದಾರೆ. ಹೀಗಿದ್ದರೂ ಈ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನ ಸಂಖ್ಯೆಗೆ ಅನುಗುಣವಾಗಿ ವೈದ್ಯರು ಲಭ್ಯವಿಲ್ಲ ಇದರಿಂದಾಗಿ ಇಲ್ಲಿನ ಜನ ಸಂಕಷ್ಟ ಎದುರಿಸುವಂತಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರ ಕೊರತೆ ಕೊರತೆಯಿಂದಾಗಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ನಿರಾಸೆಯಿಂದ ಹಿಂದಿರುಗುವ ಪ್ರಸಂಗ ಕೂಡ ನಡೆಯುತ್ತಿದೆ.

ಹಲವಾರು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದ ತಜ್ಞ ವೈದ್ಯರಾದ ರಾಘವೇಂದ್ರ ಅವರನ್ನು ಇತ್ತೀಚೆಗಷ್ಟೇ ವರ್ಗಾವಣೆ ಮಾಡಲಾಗಿದೆ. ವೈದ್ಯರುಗಳನ್ನು ಬೇರೆಡೆಗೆ ವರ್ಗಾವಣೆ ಮಾಡುವ ಸಂದರ್ಭ ಅಲ್ಲಿನ ಸ್ಥಿತಿಗತಿಯನ್ನು ಅವಲೋಕನ ಮಾಡಿ ತೆರವಾಗುವ ಸ್ಥಳಕ್ಕೆ ಬದಲಿ ವ್ಯವಸ್ಥೆ ಮಾಡಿಕೊಂಡು ವರ್ಗಾವಣೆ ಮಾಡಬೇಕಿತ್ತು ಆದರೆ ಸರ್ಕಾರ ಏಕಾಏಕಿ ಬೇರೆಡೆ ವೈದ್ಯರನ್ನು ವರ್ಗಾವಣೆ ಮಾಡಿ ತೆರವಾದ ಸ್ಥಾನಕ್ಕೆ ವೈದ್ಯರನ್ನು ನೇಮಕ ಮಾಡದೆ ಕಡೆಗಣಿಸುತ್ತಿರುವುದು ವಿಪರ್ಯಾಸ ಎಂದರು.

ಸಿದ್ದಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾರ್ಮಿಕರೆ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಖಾಸಗೀ ಆಸ್ಪತ್ರೆಗಳಿಗೆ ತೆರಳಿ ಹಣ ನೀಡಿ ಚಿಕಿತ್ಸೆ ಪಡೆಯುವುದಂತು ಕಷ್ಟ ಸಾಧ್ಯದ ವಿಚಾರ. ಈ ಭಾಗದ ಜನ ಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಯಲ್ಲಿ ಕನೀಷ್ಠ 6 ವೈಧ್ಯಾದಿಕಾರಿಗಳ ಅವಶ್ಯಕತೆ ಇದೆ ಜತೆಗೆ ಪರಿಣಿತ ಲ್ಯಾಬ್ ಟ್ಯಾಕ್ನಿಸಿಯನ್ ಗಳನ್ನು ಕೂಡ ನೇಮಿಸಬೇಕು ಹಾಗದರೆ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಸಿಗಲು ಸಾಧ್ಯ ಆದುದ್ದರಿಂದ ಈ ಸಂಬಂಧ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತ ಸಂಬಂಧಪಟ್ಟ ವೈದ್ಯಕೀಯ ಇಲಾಖೆಯ ಗಮನ ಸೆಳೆಯುವ ಮೂಲಕ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ನುರಿತ ವೈದ್ಯರನ್ನು ತಕ್ಷಣವೆ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಸೂತಿ ವೈದ್ಯರ ಕೊರತೆ ::

ಸಿದ್ದಾಪುರ ಆಸ್ಪತ್ರೆಯಲ್ಲಿ ಸ್ತ್ರೀ ತಜ್ಞ ವೈದ್ಯರ ಕೊರತೆ ಇದ್ದು ಹೆಣ್ಣುಮಕ್ಕಳು ಹೆರಿಗೆ ಸಂದರ್ಭ ದೂರದ ಊರಿನ ಆಸ್ಪತ್ರೆಗೆ ಹೋಗ ಬೇಕಾದ ಪರಿಸ್ಥಿತಿ ಬಂದೊದಗಿದೆ ಆದುದ್ದರಿಂದ ಇಲ್ಲಿಗೆ ಸ್ತ್ರೀ ಹಾಗೂ ಪ್ರಸೂತಿ ತಜ್ಞ ವೈದ್ಯೆಯ ನೇಮಕಾತಿ ಕೂಡ ಆಗಬೇಕಾಗಿದೆ ಇದರ ಬಗ್ಗೆಯೂ ಶಾಸಕದ್ವಯರು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದರು

ರಕ್ಷಸಮಿತಿ ಪುರ್ನ ರಚನೆಗೆ ಒತ್ತಾಯ:: 

ಈ ಹಿಂದೆ ಬಿಜೆಪಿ ಸರಕಾರ ಇದ್ದ ಸಂರ್ಧಭದಲ್ಲಿ ಆಸ್ಪತ್ರೆಯಲ್ಲಿ ರಕ್ಷಸಮಿತಿ ರಚಿಸಲಾಗಿತ್ತು. ಆದರೆ ಈಗ ಈ ಸಮೀತಿ ನಿಷ್ಕ್ರಿಯಗೊಂಡಿದೆ ಈ ಸಮಿತಿಯಿಂದ ಸಾರ್ವ ಜನಿಕರಿಗೆ ಯಾವುದೇ ಪ್ರಯೋಜನ ಇಲ್ಲ ಎಂದ ದೂರಿದ ಕುಟ್ಟಪ್ಪ ನಮ್ಮ ಕ್ಷೇತ್ರದ ಶಾಸಕರು ಈ ಸಮಿತಿಯನ್ನು ಪುರ್ನ ರಚಿಸಲು ಆಸಕ್ತಿ ವಹಿಸಬೇಕು, ಆಸ್ಪತ್ರೆಯ ಅಭಿವೃದ್ಧಿ ದೃಷ್ಟಿಯಿಂದ ಜನಪರ ಕಾಳಜಿಯುಳ್ಳವರನನ್ನು ಸೇರಿಸಿ ನೂತನ ಸಮಿತಿಯನ್ನು ತಕ್ಷಣ ಅಸ್ತಿತ್ವಕ್ಕೆ ತರಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಅವರು, ಆಸ್ಪತ್ರೆಗೆ ದಾಖಲಾಗುವ ಬಡ ರೋಗಿಗಳಿಗೆ ಬೆಳಗ್ಗೆ ಹಾಲು ಬ್ರೆಡ್ ಹಾಗೂ ಮಧ್ಯಾಹ್ನ – ರಾತ್ರಿ ಹೊತ್ತಿಗೆ ಊಟ ಕೊಡುವ ಕೆಲಸವಾಗಬೇಕು ಎಂದು ಇದೇ ಸಂದರ್ಭ ಒತ್ತಾಯಿಸಿದರು

ಸುದ್ದಿಗೋಷ್ಟಿಯಲ್ಲಿ ಸಮಿತಿಯ ಪ್ರಮುಖರಾದ ಸಿ.ಎಮ್.ಮುಸ್ತಾಫ, ಇ.ಎಂ.ಉಮ್ಮರ್ ಇದ್ದರು.

Share this article

ಟಾಪ್ ನ್ಯೂಸ್

More News