ಯುವಕನ ಹೊಟ್ಟೆಯಲ್ಲಿ ಕಾಣಿಸಿಕೊಂಡ ಹಾವಿನ ರೀತಿಯ ಹುಳ; ವೈದ್ಯರು ಶಾಕ್

ಯುವಕನೋರ್ವನ ಹೊಟ್ಟೆಯಿಂದ ಹಾವಿನ ರೀತಿಯ ಅಪಾಯಕಾರಿ ಹುಳವನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ. ರಾಜಸ್ಥಾನದ ಕುಚ್ಮಾನ ನಗರದ ಆಸ್ಪತ್ರೆಯೊಂದರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಯುವಕನ ಹೊಟ್ಟೆಯಿಂದ 30 ಸೆಂಟಿಮೀಟರ್ ಉದ್ದದ ಅಪಾಯಕಾರಿ ಹುಳು ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಯುವಕ ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 30 ವರ್ಷದ ಯುವಕ ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದನು. ಈ ಸಮಸ್ಯೆ ನಿವಾರಣೆಗಾಗಿ ಹಲವು ಔಷಧಿಯನ್ನು ಮಾಡಿದ್ದನು. ಆದರೆ ಗುಣವಾಗಿರಲಿಲ್ಲ. ಇದರಿಂದ ಸ್ಥಳೀಯ ವೈದ್ಯರು ಸೋನೋಗ್ರಾಫಿ […]
ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಗುದನಾಳದಿಂದ 16 ಇಂಚಿನ ಸೋರೆಕಾಯಿ ತೆಗೆದ ವೈದ್ಯರು!

ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವನ ಗುದನಾಳದಿಂದ ಶಸ್ತ್ರಚಿಕಿತ್ಸೆ ನಡೆಸಿ 16 ಇಂಚಿನ ಸೋರೆಕಾಯಿ ವೈದ್ಯರು ಹೊರತೆಗೆದ ವಿಚಿತ್ರ ಘಟನೆ ಮಧ್ಯಪ್ರದೇಶದ ಛತ್ತರ್ ಪುರದಲ್ಲಿ ನಡೆದಿದೆ. 60 ವರ್ಷದ ವ್ಯಕ್ತಿಯೊಬ್ಬರು ಹೊಟ್ಟೆ ನೋವು ಮತ್ತು ಖಾಸಗಿ ಅಂಗಗಳಲ್ಲಿ ನೋವಿನಿಂದ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರು ಎಕ್ಸರೇ ತೆಗೆದು ನೋಡಿದಾಗ ವ್ಯಕ್ತಿಯ ಗುದದ್ವಾರದಲ್ಲಿ 16 ಇಂಚಿನ ಸೋರೆಕಾಯಿ ಇರುವುದು ಕಂಡುಬಂದಿದೆ. ಇದನ್ನು ನೋಡಿದ ವೈದ್ಯರು ಬೆಚ್ಚಿಬಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ (TOI) ಪ್ರಕಾರ, 60 ವರ್ಷದ ರೈತ […]
ಚಾಂದಿಪುರ ವೈರಸ್ ಸೋಂಕಿಗೆ 20 ಮಂದಿ ಬಲಿ: ಏನಿದು ಭಯಾನಕ ವೈರಸ್?

ಗುಜರಾತ್‌ನಲ್ಲಿ ಚಾಂದಿಪುರ ವೈರಸ್ ಸೋಂಕಿಗೆ ಇಬ್ಬರು ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಶಂಕಿತ ಪ್ರಕರಣದಲ್ಲಿ ಈವರೆಗೆ ಮೃತರ ಸಂಖ್ಯೆ 20ಕ್ಕೆ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಜರಾತ್ ನ ಅಹ್ಮದಾಬಾದ್‌ನಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಚಾಂದಿಪುರ ವೈರಸ್ ಸೋಂಕಿನ ಲಕ್ಷಣವುಳ್ಳ ಕನಿಷ್ಠ 35 ಮಂದಿ ರಾಜ್ಯಾದ್ಯಂತದ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಗುಜರಾತ್ ಸರಕಾರ ಪರೀಕ್ಷೆಗೆ ಕಳುಹಿಸಿದ್ದ 18 ಮಾದರಿಗಳ ಪೈಕಿ 2ರಲ್ಲಿ ಮಾತ್ರ ಚಾಂದಿಪುರ ವೈರಸ್ ಇರುವುದು ದೃಢಪಟ್ಟಿದೆ ಎಂದು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ […]
ಬೆಲ್ಲ ತಿನ್ನುವುದರಿಂದ ಚರ್ಮದ ಕಾಂತಿ ಹೆಚ್ಚಳ?

ಬೆಲ್ಲದಿಂದ ಚರ್ಮದ ಕಾಂತಿ ಹೆಚ್ಚಳವಾಗುತ್ತದೆ, ಬೆಲ್ಲದಿಂದ ಚರ್ಮದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ತಿಳಿದು ಬಂದಿದೆ. ನೈಸರ್ಗಿಕ ಬೆಲ್ಲವನ್ನು ತಯಾರಿ ಮಾಡುವುದರಿಂದ ಅದು ಆರೋಗ್ಯಕ್ಕೆ ಹಲವು ರೀತಿಯಿಂದ ಉಪಯೋಗವಾಗುತ್ತದೆ. ಬೆಲ್ಲದಲ್ಲಿ ಹೇರಳವಾದ ಖನಿಜಗಳಿವೆ. ಕಬ್ಬಿಣ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿವೆ. ಹೀಗಾಗಿ ಬೆಲ್ಲ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಲ್ಲದಲ್ಲಿ ಗ್ಲೈಕೋಲಿಕ್ ಆಮ್ಲ ಹೆಚ್ಚಾಗಿದೆ. ಇದು ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಬೆಲ್ಲದಿಂದ ತ್ವಚೆಯನ್ನು ತೇವಾಂಶದಿಂದ ಕೂಡಿರುವಂತೆ ಕಾಪಾಡಿಕೊಳ್ಳಬಹುದು. ಬೆಲ್ಲ ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ಮುಖದ ಚರ್ಮವನ್ನು ಆದಷ್ಟು […]
ಮೊಸರು ಸೇವನೆಯಿಂದ ಖಿನ್ನತೆ ದೂರ!

ಇತ್ತೀಚಿನ ದಿನಗಳಲ್ಲಿ ಜನರು ಒತ್ತಡದಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಖಿನ್ನತೆಗೆ ಹಲವು ಪರಿಹಾರಗಳಿವೆ. ಆದರೆ ಕೇವಲ ಮೊಸರು ತಿನ್ನುವ ಮೂಲಕವೂ ನೀವು ಖಿನ್ನತೆಯಿಂದ ಪಾರಾಗಬಹುದು. ಸಂಶೋಧನೆಯೊಂದರಲ್ಲಿ ಮೊಸರು ಖಿನ್ನತೆಗೆ ಮದ್ದು ಅನ್ನೋದು ದೃಢಪಟ್ಟಿದೆ. ಮೊಸರಿನಲ್ಲಿರುವ ಪ್ರೋ ಬ್ಯಾಕ್ಟೀರಿಯಾ ಲ್ಯಾಕ್ಟೋಬ್ಯಾಸಿಲ್ಲಸ್, ಖಿನ್ನತೆ ಮತ್ತು ಆತಂಕವನ್ನು ದೂರ ಮಾಡುತ್ತದೆ. ಮೊಸರು ಸೇವನೆಯಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಖಿನ್ನತೆಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯಬೇಕು. ಇಲ್ಲವಾದಲ್ಲಿ ಬಹಳಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಖಿನ್ನತೆಗೆ ಮೊಸರೇ ಮದ್ದು ಅನ್ನೋದು ಇಲಿಗಳ […]
ಉಪವಾಸದಿಂದ ಸಿಗುವ ಆರೋಗ್ಯಕರ ಪ್ರಯೋಜನಗಳು..

ಉಪವಾಸ ಮಾಡುವುದು ಕಷ್ಟವಾದರೂ, ಉಪವಾಸದಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಅಧಿಕ ರಕ್ತದೊತ್ತಡ, ಚಯಾಪಚಯ ಸಮಸ್ಯೆಗಳು, ಉರಿಯೂತದ ಕಾಯಿಲೆಗಳು, ಮಾನಸಿಕ ಅಸ್ವಸ್ಥತೆಗಳು ಮತ್ತು ಅಟೊಪಿಕ್ ಸಮಸ್ಯೆಗಳಿಗೆ ಉಪವಾಸ ಉತ್ತಮ ಎನ್ನುವುದು ತಿಳಿದು ಬಂದಿದೆ. ಭಾರತದಲ್ಲಿ ಶೇ.61 ರಷ್ಟು ಸಾವುಗಳು ಸಾಂಕ್ರಾಮಿಕವಲ್ಲದ ಆರೋಗ್ಯ ಸಮಸ್ಯೆಗಳಿಂದ ಸಂಭವಿಸುತ್ತಿದ್ದು, ಈ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಉಪವಾಸವೇ ದಿವ್ಯೌಷಧ. ನಿರ್ದಿಷ್ಟ ಅವಧಿಯವರೆಗೆ ಆಹಾರ, ನಿಕೋಟಿನ್ ಮತ್ತು ಕೆಫೀನ್ ನಂತಹ ಅಂಶಗಳನ್ನು ಸೇವಿಸದೆ ಇರುವುದರಿಂದ ದೇಹ ರಿಫ್ರೆಶ್ ಆಗುತ್ತದೆ. ಉಪವಾಸದ ಅವಧಿಯಲ್ಲಿ ತಾಜಾ ಹಣ್ಣಿನ ಜ್ಯೂಸ್, […]
ಕಾಫಿ ಕುಡಿಯುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ?

ಕಾಫಿ ಉತ್ತಮ ಪರಿಮಳ ಮತ್ತು ರುಚಿಯೊಂದಿಗೆ ಕಾಫಿ ಜನರನ್ನು ಸೆಳೆಯುತ್ತದೆ. ಕಾಫಿ ನಮ್ಮ ಆಯಾಸವನ್ನು ನಿವಾರಿಸಬಲ್ಲದು, ಮನಸ್ಥಿತಿಯನ್ನೂ ಸುಧಾರಿಸಬಲ್ಲದು. ಎಲ್ಲಾ ರುತುವಿನಲ್ಲೂ ಇಷ್ಟಪಟ್ಟು ಕುಡಿಯುವಂತಹ ಕಾಫಿ ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಹೆಚ್ಚು ಕಾಫಿ ಕುಡಿಯುವುದರಿಂದ ಆತಂಕ, ನಿದ್ರಾಹೀನತೆ, ಅಧಿಕ ರಕ್ತದೊತ್ತಡ ಹೀಗೆ ಅನೇಕ ಸಮಸ್ಯೆಗಳಾಗುತ್ತವೆ. ಕಾಫಿಯಲ್ಲಿ ಕೆಫೀನ್ ಎಂಬ ಉತ್ತೇಜಕವಿದೆ, ಇದು ಮೆದುಳನ್ನು ಸಕ್ರಿಯಗೊಳಿಸುತ್ತದೆ. ಏಕಾಗ್ರತೆ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಒಂದು ದಿನದಲ್ಲಿ ಎಷ್ಟು ಕಾಫಿ ಕುಡಿಯುವುದು ಸುರಕ್ಷಿತ ಎಂಬುದನ್ನು ತಿಳಿದುಕೊಳ್ಳಬೇಕು. ಮೆದುಳಿನ […]