Breaking News :

ಜು.27ರಂದು ಪೌರಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರ

ಮಡಿಕೇರಿ : ನ್ಯಾಷನಲ್ ಮೆಡಿಕೋಸ್ ಸಂಸ್ಥೆ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಸಹಯೋಗದಲ್ಲಿ ಜು.೨೭ರಂದು ಪೌರಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರವನ್ನು ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾಷನಲ್ ಮೆಡಿಕೋಸ್ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಅಪ್ಪಾಜ, ಅಂದು ೩೫ ವರ್ಷ ಮೇಲ್ಪಟ್ಟವರಿಗೆ(ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ತಪಾಸಣೆ) ಮತ್ತು ಕಬ್ಬಿಣಾಂಶದ ಪೋಲಿಕ್ ಆಮ್ಲ ಮಾತ್ರೆ ಹಾಗೂ ಜಂತುಹುಳು ನಿವಾರಣಾ ಮಾತ್ರೆಗಳನ್ನು ಉಚಿತವಾಗಿ ವಿತರಣೆ […]

ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಫೂಟ್ ಥೆರಪಿ ಪೂರಕ : ಶಾಸಕ ಡಾ.ಮಂತರ್ ಗೌಡ

ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಫೂಟ್ ಥೆರಪಿ ಪೂರಕ : ಶಾಸಕ ಡಾ. ಮಂತರ್ ಗೌಡ ಮಡಿಕೇರಿ : ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಫೂಟ್ ಥೆರಪಿ ಚಿಕಿತ್ಸೆ ಹೆಚ್ಚು ಸಹಕಾರಿ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ. ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲ್ಲೂಕು ಘಟಕ, ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ ಹಾಗೂ ಕಂಪಾನಿಯೋ ಅವರ ಸಹಯೋಗದಲ್ಲಿ ವಾಹನ ಚಾಲಕರು ಮತ್ತು ಮೋಟಾರು […]

ಜನಸ್ನೇಹಿ ಡಾಕ್ಟರ್ ರಾಘವೇಂದ್ರ ವರ್ಗಾವಣೆ : ತೆರವಾದ ಸ್ಥಾನಕ್ಕೆ ತಜ್ಞ ವೈದ್ಯರ ನೇಮಕಕ್ಕೆ ಆಗ್ರಹ

ಜನಸ್ನೇಹಿ ಡಾಕ್ಟರ್ ರಾಘವೇಂದ್ರ ವರ್ಗಾವಣೆ : ತೆರವಾದ ಸ್ಥಾನಕ್ಕೆ ತಜ್ಞ ವೈದ್ಯರ ನೇಮಕಕ್ಕೆ ಆಗ್ರಹ ಸಿದ್ದಾಪುರ: ಕಳೆದ ಹದಿನೈದು ವರ್ಷಗಳಿಗೂ ಅಧಿಕ ಕಾಲ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲಿಸುತ್ತಿದ್ದ ಡಾಕ್ಟರ್ ರಾಘವೇಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ. ಚಾಮರಾಜ ನಗರದ ಬೇಗೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾವಣೆಗೊಂಡಿರುವ ಅವರು ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಸಿದ್ದಾಪುರ ಜನರ ಆರೋಗ್ಯದ ದೃಷ್ಟಿಯಿಂದ ಹಗಲು- ರಾತ್ರಿ ಎನ್ನದೆ ಹಲವು ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿರುವ […]

ವಿಶ್ವ ಮೆದುಳು ದಿನಾಚರಣೆ

ವಿಶ್ವ ಮೆದುಳು ದಿನಾಚರಣೆ ಮಡಿಕೇರಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ಸಹಯೋಗದಲ್ಲಿ ಮತ್ತು ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಇವರ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ವಿಶ್ವ ಮೆದುಳು ದಿನಾಚರಣೆ ನಡೆಯಿತು. 2025 ನೇ ಸಾಲಿಗೆ ‘ಎಲ್ಲಾ ವಯಸ್ಸಿನವರಿಗೂ ಮೆದುಳಿನ ಆರೋಗ್ಯ’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಕೊಡಗು ಜಿಲ್ಲೆಯ ಮೆದುಳು ಆರೋಗ್ಯ […]

ಜು.18 ರಂದು ಗೃಹ ಆರೋಗ್ಯ ಯೋಜನೆ ಕುರಿತು ಕಾರ್ಯಾಗಾರ

ಜು.18 ರಂದು ಗೃಹ ಆರೋಗ್ಯ ಯೋಜನೆ ಕುರಿತು ಕಾರ್ಯಾಗಾರ ಮಡಿಕೇರಿ : ಗೃಹ ಆರೋಗ್ಯ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜುಲೈ, 18 ರಂದು ಬೆಳಗ್ಗೆ 9.30 ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ‘ಗೃಹ ಆರೊಗ್ಯ’ ಯೋಜನೆಯ ಒಂದು ದಿನದ ಕಾರ್ಯಾಗಾರ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.

ಪ್ಯಾರಸಿಟಮಲ್ ಮಾತ್ರೆ ಅತಿಯಾಗಿ ತೆಗೆದುಕೊಂಡರೆ ಏನೆಲ್ಲಾ ತೊಂದರೆಯಿದೆ? ಡಿಟೇಲ್ಸ್…

ಜನರು ತಲೆನೋವು, ಜ್ವರ‍‌‍ ಬಂದರೆ ಕ್ಯಾಲ್ಪೋಲ್, ಕ್ರೋಸಿನ್, ಡೋಲೋ ಮುಂತಾದ ಪ್ಯಾರಸಿಟಮಾಲ್ ಸೇವಿಸುತ್ತಾರೆ.ವೈದ್ಯರ ಸಲಹೆ ಇಲ್ಲದೆ ಮನೆಯಲ್ಲಿಯೇ ಪ್ಯಾರಸಿಟಮಾಲ್ ತೆಗೆದುಕೊಳ್ಳುತ್ತಾರೆ. ಪ್ಯಾರಾಸಿಟಮಾಲ್ ಸ್ಟೀರಾಯ್ಡ್ ಗಳನ್ನು ಹೊಂದಿದ್ದು, ಅದರ ಅನುಚಿತ ಡೋಸೇಜ್ ನಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಪ್ಯಾರಾಸಿಟಮಾಲ್ ಅನ್ನು ಸಾಮಾನ್ಯವಾಗಿ ಜ್ವರ, ಮೈಗ್ರೇನ್, ಅವಧಿ ನೋವು, ತಲೆನೋವು, ಮೈಕೈ ನೋವು ಮುಂತಾದ ಪರಿಸ್ಥಿತಿಗಳಲ್ಲಿ ಬಳಸಲಾಗುತ್ತದೆ. ಇದು ಕ್ಯಾಲ್ಪೋಲ್, ಕ್ರೋಸಿನ್, ಡೋಲೋ, ಸುಮೋ ಎಲ್, ಕಬಿಮೋಲ್, ಪ್ಯಾಸಿಮೋಲ್ ಮುಂತಾದ ಹೆಸರುಗಳಲ್ಲಿ ಸಾಮಾನ್ಯ ಔಷಧಿ ಅಂಗಡಿಗಳಲ್ಲೂ ಲಭ್ಯವಿದೆ. ಮಾರ್ಗಸೂಚಿಯ ಪ್ರಕಾರ […]

ಮಕ್ಕಳು ಮೊಬೈಲ್ ಹೆಚ್ಚು ಬಳಸಿದರೆ ಏನಾಗುತ್ತೆ? ಮಕ್ಕಳು ಅಳ್ತಾರೆಂದು ಮೊಬೈಲ್ ಕೊಡುವವರಿಗೆ ಈ ವಿಚಾರ ತಿಳಿದಿರಲಿ..

ಮಕ್ಕಳು ಊಟ, ತಿಂಡಿ, ಕಾಫಿಯಿಂದ ಹಿಡಿದು ಮಲಗುವ ವರೆಗೂ ಮೊಬೈಲ್ ನಲ್ಲಿ ಆಟವಾಡುತ್ತಿರುತ್ತಾರೆ. ಮೊಬೈಲ್ ಕೊಟ್ಟಿಲ್ಲ ಎಂದರೆ ಮಕ್ಕಳು ಹಠ ಹಿಡಿದು ಅಳುತ್ತಿರುತ್ತದೆ‌. ಹೆಚ್ಚು ಸಮಯ ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂಬುದು ನಮಗೆ ತಿಳಿದೇ ಇದೆ. ದೃಷ್ಟಿ ದೋಷ, ಶ್ರವಣ ದೋಷ ಸೇರಿ ಹತ್ತು ಹಲವು ಸಮಸ್ಯೆಗೆ ನಾವು ಒಳಗಾಗುತ್ತೇವೆ. ಆದರೆ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾದರೆ ಮಕ್ಕಳಿಗೆ ಯಾವ ಸಮಸ್ಯೆ ಉಂಟಾಗುತ್ತಿದೆ ಎಂಬುದನ್ನು ನಾವು ತಿಳಿದುಕೊಳ್ಳೋಣ… ಮಕ್ಕಳ ಮಾನಸಿಕ ಆರೋಗ್ಯದ ಮೇಲೆ […]

ಹೆಚ್ಚು ಸಿಹಿತಿಂಡಿಗಳನ್ನು ತಿಂದರೆ ಶುಗರ್ ಬರುತ್ತಾ? ನಿಮ್ಮ ಅನುಮಾನಗಳಿಗೆ ಇಲ್ಲಿದೆ ಉತ್ತರ…

ಜನರು ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದರೆ ಮಧುಮೇಹದ ಅಪಾಯ ಹೆಚ್ಚು ಎಂಬುದು ನಿಜವೇ? ಈ ಪ್ರಶ್ನೆಗೆ ದೆಹಲಿಯ ಅಪೋಲೋ ಆಸ್ಪತ್ರೆ, ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಅಂತಃಸ್ರಾವಶಾಸ್ತ್ರದ ಹಿರಿಯ ಸಲಹೆಗಾರರಾದ ಡಾ. ರಿಚಾ ಚತುರ್ವೇದಿ ಉತ್ತರಿಸಿದ್ದಾರೆ. ಹೆಚ್ಚುವರಿ ಸಿಹಿತಿಂಡಿಗಳು ಮತ್ತು ಮಧುಮೇಹಕ್ಕೆ ನೇರ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಅತಿಯಾಗಿ ಸಿಹಿತಿಂಡಿಗಳನ್ನು ಸೇವಿಸುವ ಎಲ್ಲರಿಗೂ ಮಧುಮೇಹ ಇರುವುದು ಕಂಡುಬರುವುದಿಲ್ಲ. ಹೌದು, ಇದು ಕೆಲವು ಸಂದರ್ಭಗಳಲ್ಲಿ ಸಂಭವಿಸಬಹುದು. ವಾಸ್ತವವಾಗಿ, ಅದರ ಹಿಂದಿನ ವಿಜ್ಞಾನವೆಂದರೆ ಹೆಚ್ಚು ಸಿಹಿತಿಂಡಿಗಳು ಎಂದರೆ ಹೆಚ್ಚು ಕಾರ್ಬೋಹೈಡ್ರೇಟ್ಗಳು. ಈ […]

ಹಗಲಿನಲ್ಲಿ ಮಲಗುವುದು ಒಳ್ಳೆಯದಾ? ಇಲ್ಲಿದೆ ನಿಮ್ಮ ಅನುಮಾನಗಳಿಗೆ ಉತ್ತರ..

ಆರೋಗ್ಯವಾಗಿರಲು ನಿದ್ರೆ ಅತ್ಯಗತ್ಯ. ರಾತ್ರಿ ನಿದ್ರೆ ಆರೋಗ್ಯಕ್ಕೆ ಅತ್ಯಗತ್ಯ. ಆದರೆ ಕೆಲವರು ಹಗಲಿನಲ್ಲಿ ಸಾಂದರ್ಭಿಕವಾಗಿ ಮಲಗುತ್ತಾರೆ.ಕೆಲವರು ವಿಶ್ರಾಂತಿ ಪಡೆಯಲು ಅರ್ಧ ಗಂಟೆ ಮಲಗಿದರೆ, ಇನ್ನು ಕೆಲವರು ಗಂಟೆಗಳ ಕಾಲ ಮಲಗುತ್ತಾರೆ. ಹಗಲಿನಲ್ಲಿ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅನೇಕ ಜನರು ಹೇಳುತ್ತಾರೆ. ಆಗಾದರೆ ಹಗಲಿನಲ್ಲಿ ಮಲಗುವುದು ಒಳ್ಳೆಯದಾ ಎಂಬುವುದನ್ನು ಈ ಸುದ್ದಿ ಮೂಲಕ ತಿಳಿದುಕೊಳ್ಳಿ ನೀವು ಹಗಲಿನಲ್ಲಿ ಮಲಗಿದರೆ, ಆಲಸ್ಯಕ್ಕಾಗಿ ನೀವು ಮಲಗುತ್ತಿದ್ದೀರಿ ಎಂದು ಅನೇಕ ಜನರು ಹೇಳುತ್ತಾರೆ. ಆದರೆ ಹಗಲಿನಲ್ಲಿ ಸ್ವಲ್ಪ ಸಮಯ ಮಲಗುವುದು ಆರೋಗ್ಯಕ್ಕೆ […]

ಕೇಂದ್ರ ಸಚಿವರ ಪತ್ನಿ ಡೆಂಗ್ಯೂ ಜ್ವರಕ್ಕೆ ಬಲಿ

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುಯಲ್ ಓರಮ್ ಅವರ ಪತ್ನಿ ಜಿಂಗಿಯಾ ಓರಮ್ ಅವರು ಡೆಂಗ್ಯೂ ಜ್ವರದಿಂದ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಜಿಂಗಿಯಾ ಓರಮ್ (58) ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶನಿವಾರ ರಾತ್ರಿ 10:50 ರ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಜಿಂಗಿಯಾ ಓರಮ್ ಅವರು ಪತಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಓರಮ್ ಅಂತ್ಯಕ್ರಿಯೆಯು ಸುಂದರ್‌ಗಢ್ ಜಿಲ್ಲೆಯ ಅವರ ಗ್ರಾಮದಲ್ಲಿ ನಡೆಯಲಿದೆ […]