ಸಿದ್ದಾಪುರ; ಗಾಂಜಾ ಮಾರಾಟ, ಇಬ್ಬರ ಬಂಧನ

ಜನವಾಹಿನಿ News ಸಿದ್ದಾಪುರ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ನೆಲ್ಲಿಹುದಿಕೇರಿ ನಿವಾಸಿ ಅನ್ಸದ್ ಹಾಗೂ ಸಿದ್ದಾಪುರ ನಿವಾಸಿ ಅಫ್ರಿದ್ ಬಂಧಿ ಆರೋಪಿಗಳು. ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದ ಕಾಡು ದೇವಾಲಯದ ಬಳಿ ಸ್ಕೂಟರ್‌ನಲ್ಲಿ ಗಾಂಜಾವನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಖಚಿತ ಸುಳಿವಿನ ಮೇರೆಗೆ ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ 324 ಗ್ರಾಂ ಗಾಂಜಾವನ್ನು ಕೃತ್ಯಕ್ಕೆ ಬಳಸಿದ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದು […]
ಕಾಡಾನೆ ದಾಳಿ ಬೈಕ್ ಜಖಂ : ಪ್ರಾಣಾಪಾಯದಿಂದ ಪಾರಾದ ಕಾಫಿ ಎಸ್ಟೇಟಿನ ಸಿಬ್ಬಂದಿಗಳು

ಜನವಾಹಿನಿ News ಸಿದ್ದಾಪುರ : ಒಂಟಿ ಸಲಗವೊಂದು ಬೈಕ್ ಮೇಲೆ ದಾಳಿ ನಡೆಸಿದ ಪರಿಣಾಮ ಬೈಕ್ ಜಖಂಗೊಂಡಿದ್ದು, ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಮಾಲ್ದಾರೆ ವ್ಯಾಪ್ತಿಯ ಚೌಡಿಕಾಡುವಿನಲ್ಲಿ ನಡೆದಿದೆ. ಮಾಲ್ದಾರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಇವೊಲ್ವ್ ಬ್ಯಾಕ್” ಸಂಸ್ಥೆಯ ಹಿಲ್ ಕಿಲ್ ಗ್ರೂಪ್ಸ್ ಗೆ ಸೇರಿದ ಚೌಡಿ ಕಾಡ್ ಕಾಫಿ ತೋಟದಿಂದ ಕರ್ತವ್ಯ ಮುಗಿಸಿ ತಮ್ಮ ವಸತಿ ಗೃಹಕ್ಕೆ ತೆರಳುತ್ತಿದ್ದ ಸಿಬ್ಬಂದಿಗಳ ಬೈಕ್ ಮೇಲೆ ದಾಳಿ ನಡೆಸಿದೆ. ಈ ವೇಳೆ ಸಿಬ್ಬಂದಿಗಳು ಬೈಕ್ ಬಿಟ್ಟು ಓಡಿದ್ದಾರೆ. […]
ಸಿದ್ದಾಪುರದಲ್ಲಿ ಹಿಂದೂ ಸಂಗಮ : ವಿಶ್ವದಲ್ಲಿ ಶಾಂತಿ ನೆಲೆಸಲು ಸನಾತನ ಧರ್ಮದ ತತ್ವ ಸಿದ್ಧಾಂತಗಳು ಅಗತ್ಯ : ಮಹೇಶ್ ಕಡೆಗದಾಳು

ಕೇಸರಿ ಶಲ್ಯ, ಸಾಂಪ್ರದಾಯಿಕ ಉಡುಗೆ ತೊಟ್ಟು ಕಳಸ ಹೊತ್ತು ಮೆರವಣಿಗೆಯಲ್ಲಿ ಸಾಗಿದ ಹಿಂದೂ ಬಾಂಧವರು ಜನವಾಹಿನಿ News ಸಿದ್ದಾಪುರ : ಸಂಘರ್ಷದ ಹಾದಿಯಲ್ಲಿರುವ ಇಂದಿನ ಜಗತ್ತಿನಲ್ಲಿ ಶಾಂತಿ, ಸಹಬಾಳ್ವೆ ನೆಲೆಸಬೇಕೆಂದರೆ ಶಾಂತಿ ಸೌಹಾರ್ದತೆಗೆ ಹೆಚ್ಚಿನ ಮಹತ್ವವನ್ನು ನೀಡುವ ,(ವಸುಧೈವ ಕುಟುಂಬಕಂ) ತತ್ವವನ್ನು ಸಾರುವ ಸನಾತನ ಧರ್ಮ (ಹಿಂದೂ ಧರ್ಮದ) ತತ್ವ ಸಿದ್ಧಾಂತಗಳ ಅಗತ್ಯತೆ ಇಡಿ ವಿಶ್ವಕ್ಕೆಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕ ಮಹೇಶ್ ಕಡಗದಾಳು ಹೇಳಿದರು. ಹಿಂದೂ ಸಂಗಮ ಯೋಜನಾ ಸಮಿತಿ ವಿರಾಜಪೇಟೆ ತಾಲೂಕು […]
ಹೊಸೂರಿನಲ್ಲಿ ಹಿಂದೂ ಸಂಗಮ ಬೃಹತ್ ಸಮಾವೇಶ : ಹಿಂದೂ ಸಮಾಜ ಸಂಘಟಿತವಾದರೆ ಮಾತ್ರ ಸದೃಢ ಮತ್ತು ಸುರಕ್ಷಿತ ರಾಷ್ಟ್ರ ನಿರ್ಮಾಣ ಸಾಧ್ಯ : ಮೋಹನ್ ಗೌಡ

ಶೋಭಾಯಾತ್ರೆಯಲ್ಲಿ ಕೇಸರಿ ಶಲ್ಯ ಧರಿಸಿ ಬಾವುಟ ಹಿಡಿದು ಮೆರವಣಿಗೆ ಸಾಗಿದ ಹಿಂದೂ ಬಾಂಧವರು ಜನವಾಹಿನಿ News ಮಡಿಕೇರಿ : ಹಿಂದೂ ಸಮಾಜ ಸಂಘಟಿತವಾದರೆ ಮಾತ್ರ ಸದೃಢ ಮತ್ತು ಸುರಕ್ಷಿತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಹಿಂದೂ ಜನ ಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದ್ದಾರೆ. ಹಿಂದೂ ಸಂಗಮ ಆಯೋಜನಾ ಸಮಿತಿ ವಿರಾಜಪೇಟೆ ತಾಲ್ಲೂಕು, ಹೊಸೂರು ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತೀಯರು ಜಗತ್ತಿಗೆ […]
ಕಾಡುಕೋಣಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಗೂಡ್ಸ್ ವಾಹನ

ಜನವಾಹಿನಿ News ಸಿದ್ದಾಪುರ : ಕಾಡುಕೋಣ ಡಿಕ್ಕಿ ಹೊಡೆದ ಪರಿಣಾಮ ವಾಹನ ಪಲ್ಟಿಯಾದ ಘಟನೆ ಸಮೀಪದ ಕರಡಿಗೋಡು ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಕಾಫಿ ತೋಟದಿಂದ ಏಕಾಏಕಿ ರಸ್ತೆ ದಾಟಲು ಬಂದ ಕಾಡುಕೋಣ ಕರಡಿಗೋಡು ಸರ್ಕಾರಿ ಶಾಲೆಯ ಕೊಠಡಿ ನಿರ್ಮಾಣ ಕಾಮಗಾರಿಗೆ ತೆರಳುತ್ತಿದ್ದ ವಾಹನಕ್ಕೆ ಅಡ್ಡ ಬಂದಿದೆ. ವಾಹನಕ್ಕೆ ಕಾಡುಕೋಣ ಡಿಕ್ಕಿಯಾದ ಪರಿಣಾಮ ಗೂಡ್ಸ್ ವಾಹನ ಸಂಪೂರ್ಣ ಜಖಂಗೊಂಡಿದೆ. ವಾಹನದ ಚಾಲಕ ಹಾಗೂ ಓರ್ವ ಕಾರ್ಮಿಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ವಿರಾಜಪೇಟೆ ವಲಯ ಅರಣ್ಯ […]
ಮಡಿಕೇರಿಯಲ್ಲಿ ನಿಷೇಧಿತ ಮಾದಕ ವಸ್ತುಗಳ ಮಾರಾಟ- ಸರಬರಾಜು ಮಾಡುತ್ತಿದ್ದ ಐವರ ಬಂಧನ

ಜನವಾಹಿನಿ News ಮಡಿಕೇರಿ: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತುಗಳ ಮಾರಾಟ- ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ಕಚೇರಿ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬಂದಿದ್ದು ನಿಷೇಧಿತ ಮಾದಕ ವಸ್ತುಗಳ ಮಾರಾಟ-ಸರಬರಾಜು ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಗ್ಗಾಲು ಗ್ರಾಮದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಸೇವನೆ ಕುರಿತು […]
ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟ ನಿಷೇಧ

ಜನವಾಹಿನಿ News ಮಡಿಕೇರಿ : ಕೊಡಗು ಜಿಲ್ಲೆಯ ಮರಗೋಡು, ಚೆಟ್ಟಳ್ಳಿ ಮತ್ತು ಮೂರ್ನಾಡುವಿನಲ್ಲಿ ನಡೆಯುವ ಹಿಂದೂ ಸಂಗಮ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965 ರ ಕಲಂ 21 ರಲ್ಲಿ ದತ್ತವಾಗಿರುವ ಅಧಿಕಾರದಂತೆ ಫೆಬ್ರವರಿ, 21 ರಂದು ಬೆಳಗ್ಗೆ 6 ಗಂಟೆಯಿಂದ ಅದೇ ದಿನ ಮಧ್ಯರಾತ್ರಿ 12 ಗಂಟೆಯವರೆಗೆ ಮರಗೋಡು ಸುತ್ತಮುತ್ತಲಿನ 05 ಕಿ.ಮೀ. ವ್ಯಾಪ್ತಿಯಲ್ಲಿ ಹಾಗೂ ಫೆಬ್ರವರಿ, 22 ರಂದು ಬೆಳಗ್ಗೆ 6 ಗಂಟೆಯಿಂದ ಅದೇ […]
ಸಿದ್ದಾಪುರದಲ್ಲಿ ಫೆ.23ರಂದು ಹಿಂದೂ ಸಂಗಮ ಬೃಹತ್ ಸಮಾವೇಶ

ಜನವಾಹಿನಿ News ಸಿದ್ದಾಪುರ : ಸಿದ್ದಾಪುರದ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಫೆ. 23ರಂದು ಸಿದ್ದಾಪುರದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿ ಪ್ರಮುಖ ರೂಪೇಶ್ ತಿಳಿಸಿದ್ದಾರೆ. ಸನಾತನ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸಿ ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸುವುದು ಹಾಗೂ ಸಾಮಾಜಿಕ ಏಕತೆಗಾಗಿ ಎಲ್ಲ ವರ್ಗದ ಜನರನ್ನು ಒಂದು ವೇದಿಕೆ ಯಡಿ ಸೇರಿಸುವ ಹಾಗೂ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಿಂದೂ ಸಂಗಮ ನಡೆಸಲಾಗುತ್ತಿದ್ದು, ಕಾರ್ಯಕ್ರಮದ ಭಾಗವಾಗಿ 23ರಂದು ಮಧ್ಯಾಹ್ನ 2.30ಕ್ಕೆ […]
‘ನಾಯಕಂಡ ಬೇಬಿ ಚಿಣ್ಣಪ್ಪ ಅವರಿಗೆ ಸಂತಾಪ’

ಜನವಾಹಿನಿ News ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಇತ್ತೀಚೆಗೆ ನಿಧನರಾದ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯೆ, ಕವಯತ್ರಿ ನಾಯಕಂಡ ಬೇಬಿ ಚಿಣ್ಣಪ್ಪರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸರ್ವ ಸಮಿತಿ ಸಭೆಯಲ್ಲಿ ಬೇಬಿ ಚಿಣ್ಣಪ್ಪರ ಅನಿರೀಕ್ಷಿತವಾದ ನಿಧನಕ್ಕೆ ಕಂಬನಿ ಮಿಡಿಯಲಾಯಿತು. ಈ ವೇಳೆ ಮಾತನಾಡಿದ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಕೊಡವ ಕವನ, ಕತೆಗಳನ್ನು ಓದುಗರ ಮನ ಮಿಡಿಯುವ ರೀತಿಯಲ್ಲಿ […]
ಜಿಲ್ಲಾಡಳಿತದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

ಜನವಾಹಿನಿ News ಮಡಿಕೇರಿ : ಛತ್ರಪತಿ ಶಿವಾಜಿ ಮಹಾರಾಜರು ಭರತಖಂಡದಲ್ಲಿ ಜನಿಸದಿದ್ದರೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆ ನಿಟ್ಟಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿಯವರಿಂದ ಮಕ್ಕಳನ್ನು ಹೇಗೆ ಬೆಳೆಸಬೇಕು […]