Breaking News :

ಮಡಿಕೇರಿಯಲ್ಲಿ ಕಾಗಿ೯ಲ್ ವಿಜಯ್ ದಿವಸ್ – 125 ಸಂಸ್ಥೆಗಳಿಂದ ಗೌರವ ನಮನ 

    ಜನವಾಹಿನಿ NEWS ಮಡಿಕೇರಿ : ಕಾಗಿ೯ಲ್ ನಲ್ಲಿ 27 ವಷ೯ಗಳ ಹಿಂದೆ ಭಾರತೀಯ ಯೋಧರು ತೋರಿದ ತ್ಯಾಗ, ಬಲಿದಾನ, ಶೌಯ೯ದ ಸ್ಮರಣೆಯಾಗಿ ಇದೇ ಜುಲೈ 26 ರಂದು ಕೊಡಗು ಪತ್ರಕತ೯ರ ಸಂಘ (ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಾಗಿ೯ಲ್ ವಿಜಯ್ ದಿವಸ್ ಕಾಯ೯ಕ್ರಮ ಆಯೋಜಿಸಲಾಗಿದೆ. ಜಿಲ್ಲೆಯಾದ್ಯಂತಲಿನ 125 ಸಂಘಸಂಸ್ಥೆಗಳು ಈ ಕಾಯ೯ಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್ […]

ಯಶಸ್ವಿಯಾದ ಕಾಡಾನೆಗಳನ್ನು ಕಾಡಿಗಟ್ಟಿಸುವ ಕಾರ್ಯಾಚರಣೆ

  ಜನವಾಹಿನಿ NEWS ಮಡಿಕೇರಿ : ಕುಶಾಲನಗರ ಅರಣ್ಯ ವಲಯದ ಆನೆಕಾಡು ಶಾಖೆಯ ಹೊರೂರು, ಮೋದೂರು, ಕೆದಕಲ್ ಮತ್ತು ಮೀನುಕೊಲ್ಲಿ ಶಾಖೆಯ ಚೇರಳ, ಈರಳೆ ವಳಮುಡಿ ಗ್ರಾಮಗಳ ಸುತ್ತಮುತ್ತ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಿತು. ಕಾರ್ಯಾಚರಣೆಯಲ್ಲಿ  ಐದಕ್ಕೂ ಹೆಚ್ಚಿನ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. DRFO ಮಧುಕುಮಾರ್, DRFO ಸಚಿನ್ ನಿಂಬಾಲ್ಕರ್, BFO ಕುಡ್ಲೆಪ್ಪ , BFO ನಾಗರಾಜ್, ಮಡಿಕೇರಿ, ಆನೆಕಾಡು, ಮೀನುಕೊಲ್ಲಿ RRT […]

ಹಾರಂಗಿ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

  ಜನವಾಹಿನಿ NEWS ಕುಶಾಲನಗರ : ಹಾರಂಗಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಹಾರಂಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ಶನಿವಾರ ನದಿಗೆ ಹರಿಯ ಬಿಡಲಾಗಿದೆ. ಹಾರಂಗಿ ಜಲಾಶಯಕ್ಕೆ ಒಳಹರಿವು 4 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಹಾರಂಗಿ ಜಲಾಶಯದ ಕ್ರಸ್ಟ್ ಗೇಟ್ ಮೂಲಕ ನದಿಗೆ ಹರಿಯ ಬಿಡಲಾಗಿದೆ. ಹಾರಂಗಿ ಜಲಾಶಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನೀರನ್ನು ನದಿಗೆ ಹರಿಯ ಬಿಡಲಾಗಿದೆ. ಈ ವೇಳೆ ಹಾರಂಗಿ ಜಲಾಶಯದ ಇಇ ಮಹೇಶ್, ಎಇಇ ಪುಟ್ಟಸ್ವಾಮಿ, […]

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸಿಪಿಐಎಂ ಪ್ರತಿಭಟನೆ

    ಜನವಾಹಿನಿ NEWS ಸಿದ್ದಾಪುರ : ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಮತ್ತು ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯನ್ನು ಬೆಂಬಲಿಸಿ ಸಿಪಿಐಎಂ ವತಿಯಿಂದ ನೆಲ್ಯಹುದಿಕೇರಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ದೇಶದ ಯುವ ಜನತೆಗೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದ್ದು, ಕೂಡಲೇ ಯುವ ಜನತೆಯ ಬೇಡಿಕೆ ಈಡೇರಿಸಬೇಕು ಅಲ್ಲದೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವವಾರ […]

ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮ ಖಂಡಿಸಿ ಪ್ರತಿಭಟನೆ ; ವಿಧ್ಯಾರ್ಥಿಗಳ ಭವಿಷ್ಯಕ್ಕೆ ಬಿಜೆಪಿ ಮಾರಕವಾಗಿದೆ :ಎ.ಎಸ್.ಪೊನ್ನಣ್ಣ ಆತಂಕ

  ಜನವಾಹಿನಿ NEWS ಮಡಿಕೇರಿ : ಪ್ರಸ್ತುತ ಸನ್ನಿವೇಶದಲ್ಲಿ ಮುಂದಿನ‌ ಪ್ರಜೆಗಳಾಗಬೇಕಿರುವ ವಿಧ್ಯಾರ್ಥಿಗಳ ಭವಿಷ್ಯಕ್ಕೆ ಕೇಂದ್ರದ ಬಿಜೆಪಿ ಮಾರಕವಾಗಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮ ಖಂಡಿಸಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಆಯೋಜಿಸಿದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ 25 ಲಕ್ಷ ವಿಧ್ಯಾರ್ಥಿಗಳು ಭಾದಿತರಾಗಿದ್ದಾರೆ, 20 ಕ್ಕೂ ಹೆಚ್ಚು ಹದಿಹರೆಯದ ವಿಧ್ಯಾರ್ಥಿಗಳು ಸಾವನಪ್ಪಿದ್ದಾರೆ. ಆದರೆ ಪ್ರಧಾನ ಮಂತ್ರಿ ಹಾಗೂ […]

ಬಾಲಕರ ಟೇಬಲ್ ಟೆನ್ನಿಸ್ ಪಂದ್ಯಾಟ – ಕೊಡಗು ವಿದ್ಯಾಲಯ ತಂಡಕ್ಕೆ ಕಂಚಿನ ಪದಕ

  ಜನವಾಹಿನಿ News ಮಡಿಕೇರಿ : ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ದಲ್ಲಿ ನಡೆದ ಸಿಬಿಎಸ್‌ಇ ಕ್ಲಸ್ಟರ್ VIII ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಕೊಡಗು ವಿದ್ಯಾಲಯದ 17 ವರ್ಷದೊಳಗಿನ ಬಾಲಕರ ಟೇಬಲ್ ಟೆನ್ನಿಸ್ ತಂಡವು ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ. ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ 200 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು, ಕೊಡಗು ವಿದ್ಯಾಲಯದ ಆಟಗಾರರಾದ ಅವನೀಶ್ ಕೃಷ್ಣ, ದೇವಾರ್ಯ, ಫೆಲಿಕ್ಸ್ ರೊನಾಲ್ಡ್ ಮತ್ತು ಅದಿತ್ ಗೌತಮ್ ಅವರನ್ನು ಒಳಗೊಂಡ […]

ಕೂಡಿಗೆ : ಶಾಸಕ ಡಾ.ಮಂತರ್ ಗೌಡ ಅವರಿಂದ 1 ಕೋಟಿ ರೂ ವೆಚ್ಚದ ಕಾಮಗಾರಿಗಳ ಲೋಕಾರ್ಪಣೆ 

  ಜನವಾಹಿನಿ NEWS ಮಡಿಕೇರಿ : ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಕೂಡಿಗೆ ವ್ಯಾಪ್ತಿಯಲ್ಲಿ 1 ಕೋಟಿ ರೂ ವೆಚ್ಚದ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದರು. ಜೇನುಕಲ್ಲು ಬೆಟ್ಟ ಭುವನ ಗಿರಿ ಗ್ರಾಮದಲ್ಲಿ 44.60 ವೆಚ್ಚದ ಕಾಂಕ್ರೀಟ್ ರಸ್ತೆ,ಸೀಗೆ ಹೊಸೂರು ಕಾಲೋನಿಯಲ್ಲಿ 25.5 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ, ಹಾಗೂ ಹುಣಸೆಪಾರೆ ಪರಿಶಿಷ್ಟ ಪಂಗಡದ ಕಾಲೋನಿಗೆ 30 ಲಕ್ಷ ರೂಗಳ ಕಾಂಕ್ರೀಟ್ ಕಾಮಗಾರಿಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ […]

ಸಂಚಾರಿ ನಿಯಮ ಪಾಲಿಸದ ಚಾಲಕರಿಗೆ ದಂಡ ವಿಧಿಸಿ ಜಾಗೃತಿ ಮೂಡಿಸಿದ ಪಿಎಸ್ಐ

      ಜನವಾಹಿನಿ NEWS ಸಿದ್ದಾಪುರ : ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಹೆಲ್ಮೆಟ್ ರಹಿತ ಚಾಲನೆಗೆ ದಂಡ ವಿಧಿಸುವ ಮೂಲಕ ಸಿದ್ದಾಪುರ ಪಿಎಸ್ಐ ಮಂಜುನಾಥ್ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದ್ದಾರೆ. ರಸ್ತೆ ಅಪಘಾತಗಳಲ್ಲಿ ಆಗುವ ಪ್ರಾಣಹಾನಿಯನ್ನು ತಡೆಯಲು ಮತ್ತು ಸುರಕ್ಷಿತ ಚಾಲನೆಯನ್ನು ಪ್ರೋತ್ಸಾಹಿಸಲು ಈ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಸವಾರರನ್ನು ತಡೆದು ಮೋಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಲಾಯಿತು. ದಾಖಲೆಗಳ ಪರಿಶೀಲನೆ : ಆರ್‌ಸಿ ಬುಕ್, ಚಾಲನಾ ಪರವಾನಗಿ […]

ನಾಳೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಎಸ್ ವೈಎಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

      ಜನವಾಹಿನಿ NEWS ಮಡಿಕೇರಿ : ಸಮಸ್ತ ಸೆಂಟಿನರಿಯ ಅಂಗವಾಗಿ ಸುನ್ನಿ ಯುವಜನ ಸಂಘ (ಎಸ್ ವೈಎಸ್) ಜಿಲ್ಲಾ ಸಮಿತಿಯ ವತಿಯಿಂದ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ತಾ.21ರ (ನಾಳೆ ) ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಎಸ್ ವೈ ಎಸ್ ಸಾಂತ್ವನ ಕಾರ್ಯದರ್ಶಿ ಬಷೀರ್ ಕೊಟ್ಟಮುಡಿ ತಿಳಿಸಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಬೆಳಿಗ್ಗೆ 10ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.ಎಸ್ ವೈಎಸ್ ನ 50ಕ್ಕೂ ಅಧಿಕ ಕಾರ್ಯಕರ್ತರು ರಕ್ತದಾನ ಮಾಡಿ ರಕ್ತದಾನ […]

ಸೆಫ್ಟಿಕ್ ಟ್ಯಾಂಕಿಗೆ ಬಿದ್ದ ಮರಿ ಆನೆ : ತಾಯಾನೆಯಿಂದ ರಕ್ಷಣೆ

  ಜನವಾಹಿನಿ NEWS ಸಿದ್ದಾಪುರ : ಗುಂಪಿನೊಂದಿಗೆ ಬಂದ ಮರಿಯಾನೆಯೊಂದು ದಾರಿ ತಪ್ಪಿ ಸೆಫ್ಟಿಕ್ ಟ್ಯಾಂಕ್ ಗೆ ಬಿದ್ದ ಘಟನೆ ನೆಲ್ಯಹುದಿಕೇರಿ ವ್ಯಾಪ್ತಿಯ ನಾಲ್ವತೆಕ್ರೆಯಲ್ಲಿ ನಡೆದಿದೆ. ನಾಲ್ವತೆಕ್ರೆ ನಿವಾಸಿ ಮಣಿ ಎಂಬುವವರ ಮನೆ ಬಳಿ ಬಂದ ಆನೆ ಗುಂಪಿನಲ್ಲಿದ್ದ ಮರಿಯೊಂದು ನಿರ್ಮಾಣ ಹಂತದಲ್ಲಿರೋ ಹಿಂಗು ಗುಂಡಿಗೆ ಬಿದ್ದಿದೆ. ರಾತ್ರಿ 7.30 ಸುಮಾರಿಗೆ ಘಟನೆ ನಡೆದಿದ್ದು, ಗುಂಡಿಯಿಂದ ಮೇಲಕ್ಕೆ ಮರಿಯಾನೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟಿದೆ. ಕೂಡಲೇ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. […]