Breaking News :

ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಬಿ.ಯು.ಪೂವಣ್ಣ ಆಯ್ಕೆ

  ಜನವಾಹಿನಿ NEWS ಮಡಿಕೇರಿ : ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಬಿ. ಯು.ಪೂವಣ್ಣ ರವರನ್ನು ಎಲ್ಲಾ ಸದಸ್ಯರು ಒಮ್ಮತದಿಂದ ಆಯ್ಕೆ ಮಾಡಿ ಮೂರು ವರ್ಷದ ಅವದಿಗೆ ಅಧ್ಯಕ್ಷರಾಗಿರುತ್ತಾರೆ. ಸಮಿತಿಯ ಸದಸ್ಯರುಗಳಾದ ಕುಶ ಭಟ್, ಕೆ. ಸಿ. ರಮೇಶ್, ಸಿ ಡಿ.ಉಷಾ, ಕೆ. ಸಿ. ನೈಲ್, ಪಿ. ಎಂ. ನರೇಂದ್ರ, ಎ. ಜಗದೀಶ್, ಭೀಮಯ್ಯ, ಉಲ್ಲಾಸ್ ಆರ್. ರವಿಕುಮಾರ್ ಕಾರ್ಯನಿರ್ವಾಹಕ ಅಧಿಕಾರಿ, ಪಿ. ಟಿ.ತಮ್ಮಯ್ಯ ಹಾಗೂ ಶ್ರೀಕಾಂತ್ ಸಭೆಯಲ್ಲಿ ಹಾಜರಿದ್ದರು.

ಧರ್ಮಸ್ಥಳ ಬಗ್ಗೆ ಅಪಪ್ರಚಾರ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ : ತಪ್ಪು ಮಾಹಿತಿ ಹಂಚುವವರ ವಿರುದ್ಧ ಕ್ರಮಕ್ಕೆ ಆಗ್ರಹ 

  ಜನವಾಹಿನಿ NEWS ಮಡಿಕೇರಿ : ಹಿಂದುಗಳ ಧಾರ್ಮಿಕ ಶ್ರದ್ಧಾಕೇಂದ್ರ ಧರ್ಮಸ್ಥಳದ ಮೇಲೆ ಆಗುತ್ತಿರುವ ಅಪಪ್ರಚಾರದ ವಿರುದ್ಧ ಹಾಗೂ ಇದನ್ನು ತಡೆಯುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪತ್ರಿಭಟನಾ ನಿರತರು ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ, ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸ್ಪೀಕರ್ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ […]

ಮೂರ್ನಾಡುವಿನಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಅಪಪ್ರಚಾರ ಖಂಡಿಸಿ ಪ್ರತಿಭಟನಾ ಮೆರವಣಿಗೆ

  ಮೂರ್ನಾಡುವಿನಲ್ಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಅಪಪ್ರಚಾರ ಖಂಡಿಸಿ ಪ್ರತಿಭಟನಾ ಮೆರವಣಿಗೆ ಜನವಾಹಿನಿ NEWS ಮಡಿಕೇರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧದ ಅಪಪ್ರಚಾರ ಖಂಡಿಸಿ ಮತ್ತು ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹಂಚುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮೂರ್ನಾಡು ಪಟ್ಟಣದಲ್ಲಿ ಧರ್ಮಸ್ಥಳ ಭಕ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಧರ್ಮಸ್ಥಳ ಭಕ್ತ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಯು ಕಾಲೇಜು ಮೈದಾನದಲ್ಲಿ ಪ್ರಾರಂಭಗೊಂಡು ಗಾಂಧಿ ನಗರದ ಮೂಲಕ ಪಟ್ಟಣದ ಮುಖ್ಯ ರಸ್ತೆಯಲ್ಲಿ […]

ಭರತನಾಟ್ಯ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತೀರ್ಥಪ್ರಿಯ 

  ಜನವಾಹಿನಿ NEWS ಸಿದ್ದಾಪುರ : 2024-25ನೇ ಸಾಲಿನ ಡಾಕ್ಟರ್ ಗಂಗೂಬಾಯಿ ಹಾನಗಲ್ ಸಂಗೀತ ಕಲಾ ವಿಶ್ವವಿದ್ಯಾಲಯ ಮೈಸೂರಿನಲ್ಲಿ ನಡೆದ ಜೂನಿಯರ್ ಭರತನಾಟ್ಯ ಪರೀಕ್ಷೆಯಲ್ಲಿ ಪಿ.ಎಂ.ಶ್ರೀ ನವೋದಯ ವಿದ್ಯಾಲಯದ 9 ನೇ ತರಗತಿಯ ವಿದ್ಯಾರ್ಥಿನಿ ತೀರ್ಥಪ್ರಿಯ. ಎಂ ಬಿ, 94.5% ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ತೀಥಪ್ರಿಯಾ ಅವರು ಕಳೆದ ಆರು ವರ್ಷಗಳಿಂದ ಜಗನ್ಮೋಹನ ನಾಟ್ಯಾಲಯ, ಶಿಕ್ಷಕ ರಾಜೇಶ್ ಆಚಾರ್ಯರವರ ಮಾರ್ಗದರ್ಶನದಲ್ಲಿ ನೃತ್ಯ ಕಲಿಯುತ್ತಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ಕಲೆ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿರುವುದು ಅವರ ವೈಶಿಷ್ಟ್ಯ. […]

ಸಿದ್ದಾಪುರ ಆಸ್ಪತ್ರೆಗೆ ನುರಿತ ವೈದ್ಯರ ನೇಮಕಕ್ಕೆ ಸಿ.ಪಿ.ಐ.ಎಂ ಪಕ್ಷದ ಸಂಚಾಲನ ಸಮಿತಿ ಒತ್ತಾಯ

    ಜನವಾಹಿನಿ NEWS ಸಿದ್ದಾಪುರ : ವೈದ್ಯರ ಕೊರತೆ ಎದುರಿಸುತ್ತಿರುವ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ನುರಿತ ತಜ್ಞ ವೈದ್ಯರುಗಳ ನೇಮಕದ ಜತೆ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಬೇಕೆಂದು ಸಿಪಿಐಎಂ ಪಕ್ಷದ ಸಿದ್ದಾಪುರ ಸಂಚಾಲನ ಸಮಿತಿ ಆಗ್ರಹಿಸಿದೆ. ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಸಮಿತಿಯ ಕಾರ್ಯದರ್ಶಿ ಎನ್.ಡಿ.ಕುಟ್ಟಪ್ಪ, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 30,000 ಕಿಂತಲು ಹೆಚ್ಚು ಜನರು ವಾಸವಿದ್ದು, ಅನಾರೋಗ್ಯ, ತುರ್ತು ಸಂದರ್ಭಗಳಲ್ಲಿ ಇದೇ ಆಸ್ಪತ್ರೆಯನ್ನು ಅವಲಂಬಿತರಾಗಿದ್ದಾರೆ. […]

ಕುಶಾಲನಗರ : ಪ್ರತಿಭಟನಾ ಸಮಾವೇಶಕ್ಕೆ ಆಗಮಿಸಿದ್ದ ಪುನೀತ್ ಕೆರೆಹಳ್ಳಿ ಪೊಲೀಸ್ ವಶಕ್ಕೆ

  ಜನವಾಹಿನಿ NEWS ಕುಶಾಲನಗರ : ಧರ್ಮಸ್ಥಳದ ಅಪಪ್ರಚಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನಿತ್ ಕೆರೆಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುನೀತ್ ಕೆರೆಹಳ್ಳಿ ಆಗಮನದ ಹಿನ್ನೆಲೆ ಕುಶಾಲನಗರಕ್ಕೆ ಹೆಚ್ಚಿನ ಸಂಖ್ಯೆಯ ಹಿಂದುಪರ ಕಾರ್ಯಕರ್ತರು ಆಗಮಿಸಿದ್ದು, ಭಾಷಣಕ್ಕೆ ಅವಕಾಶ ಕಲ್ಪಿಸುವಂತೆ ಕಾರ್ಯಕರ್ತರ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಕಾರ್ಯಕರ್ತರು ಪುನಿತ್ ರನ್ನು ವಶಕ್ಕೆ ಪಡೆಯಲು ಬಿಡದೆ ರಕ್ಷಣಾ ಕವಚ ರಚಿಸಿದ್ದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ಥ ಗೊಂಡ […]

ಸುಳ್ಯದ ಪಿಜಿಯಲ್ಲಿ ಕೊಡಗಿನ ವಿದ್ಯಾರ್ಥಿ ಆತ್ಮಹತ್ಯೆ

  ಸುಳ್ಯದ ಪಿಜಿಯಲ್ಲಿ ಕೊಡಗಿನ ವಿದ್ಯಾರ್ಥಿ ಆತ್ಮಹತ್ಯ ಮಡಿಕೇರಿ : ವಿದ್ಯಾರ್ಥಿಯೋರ್ವ ತಾನು ತಂಗಿದ್ದ ಪಿಜಿಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಲ್ಲುಬಾಣೆ ನಿವಾಸಿ ವಿಜು ಹಾಗೂ ಸುಮತಿ ದಂಪತಿಗಳ ಪುತ್ರ ಅಭಿ (20) ಯುವಕನೇ  ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಪುತ್ರ ಸುಳ್ಯದಲ್ಲಿ ಶಿಕ್ಷಣ ಪಡೆಯುತ್ತಿದ್ದ ಈತ ತಂಗಿದ್ದ PG ಯಲ್ಲಿ ಇಂದು ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ಇನ್ನೂ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸರ ತನಿಖೆಯ […]

ಆಧುನಿಕ ಭಾರತದ ಶಿಲ್ಪಿ ರಾಜೀವ್ ಗಾಂಧಿ : ತೆನ್ನಿರ ಮೈನಾ ಬಣ್ಣನೆ 

    ಜನವಾಹಿನಿ NEWS ಮಡಿಕೇರಿ : ಮಾಜಿ ಪ್ರಧಾನಿ ಭಾರತ ರತ್ನ ರಾಜೀವ್ ಗಾಂಧಿಯವರು ಆಧುನಿಕ ಭವ್ಯ ಭಾರತದ ಶಿಲ್ಪಿ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಬಣ್ಣಿಸಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗದ ಘಟಕಗಳ ಆಶ್ರಯದಲ್ಲಿ ನಡೆದ ದಿವಗಂತ ರಾಜೀವ್ ಗಾಂಧಿಯವರ 81 ನೇ ಹಾಗೂ ದಿವಂಗತ ದೇವರಾಜ್ ಅರಸು ರವರ 110 ನೇ ಜನ್ಮ ದಿನಾಚರಣೆ […]

ಅವೈಜ್ಞಾನಿಕವಾಗಿ ರಸಗೊಬ್ಬರ ಮತ್ತು ಕೀಟನಾಶಕದ ಬಳಕೆ ಮಾಡುತ್ತಿರುವುದರಿಂದ ಆಹಾರ ರಾಸಾಯನಿಕ ಯುಕ್ತವಾಗುತ್ತಿದೆ : ಡಾ. ಇ. ತಿಪ್ಪೇಸ್ವಾಮಿ

  ಜನವಾಹಿನಿ NEWS ವಿರಾಜಪೇಟೆ : ಕೃಷಿಯಲ್ಲಿ ತ್ವರಿತ ಪ್ರಗತಿ ಸಾಧಿಸಬೇಕು. ಹೆಚ್ಚು ಆದಾಯವನ್ನು ಗಳಿಸುವುದರೊಂದಿಗೆ ಕಡಿಮೆ ಶ್ರಮದ ಬಳಕೆ ಆಗಬೇಕೆಂಬ ಉದ್ದೇಶದಿಂದ ಇತ್ತೀಚಿಗೆ ಕೀಟನಾಶಕ , ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚುತ್ತಿದ್ದು ಇದು ನಮ್ಮ ಆರೋಗ್ಯ , ಸುತ್ತಮುತ್ತಲಿನ ಪರಿಸರ ಹಾಗೂ ಪ್ರಾಣಿ ಸಂಕುಲಗಳು ಕ್ಷೀಣಿಸಿ ಹೋಗಲು ಪ್ರಮುಖ ಕಾರಣವೆಂದು ಎಫ್.ಎಂ. ಕೆ .ಎಂ .ಸಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಇ. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು . ವಿರಾಜಪೇಟೆ ಕಾವೇರಿ ಪದವಿ ಕಾಲೇಜಿನ ಐಕ್ಯೂಎಸಿ […]

ಪೊನ್ನಂಪೇಟೆ : ಕಾಫಿ ತೋಟದಲ್ಲಿ ಹುಲಿ ಮೃತದೇಹ ಪತ್ತೆ : ಅರಣ್ಯಾಧಿಕಾರಿಗಳಿಂದ ಪರಿಶೀಲನೆ 

  ಪೊನ್ನಂಪೇಟೆ ಕಾಫಿ : ತೋಟದಲ್ಲಿ ಹುಲಿ ಮೃತದೇಹ ಪತ್ತೆ : ಅರಣ್ಯಾಧಿಕಾರಿಗಳಿಂದ ಪರಿಶೀಲನೆ  ಮಡಿಕೇರಿ : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ವೆಸ್ಟ್ ನೆಮ್ಮಲೆ ಗ್ರಾಮದ ಕಾಫಿ ತೋಟವೊಂದರಲ್ಲಿ ಹುಲಿ ಮೃತ ದೇಹ ಪತ್ತೆಯಾಗಿದೆ. ಮೃತ ಹುಲಿಯು ವಯಸ್ಸಾಗಿದ್ದು ಸಾವನ್ನುಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಮತ್ತು ಅರಣ್ಯ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.