Breaking News :

ವಿರಾಜಪೇಟೆ : ರಸ್ತೆ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

  ಜನವಾಹಿನಿ News ವಿರಾಜಪೇಟೆ : ಮಳೆ ನಿಂತ ಮೇಲೆ ಮುಖ್ಯ ರಸ್ತೆಯ ಕಾಮಗಾರಿ ಮಾಡುತ್ತೇವೆ ಎಂದು ಹೇಳಿದ್ದ ಶಾಸಕರು ಮಳೆಗಾಲ ಮುಗಿದು ಬಿಸಿಲು ಆರಂಭಿಸಿದೆ ಆದರೂ ಕೂಡ ರಸ್ತೆಯ ಕಾಮಗಾರಿ ಮಾಡಲು ನಿರ್ಲಕ್ಷ್ಯ ತೋರಿದ್ದಾರೆ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆಯ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿದರು. ವಿರಾಜಪೇಟೆ ಮಂಡಳ ಬಿ ಜೆ.ಪಿ ವತಿಯಿಂದ ನಡೆದ ಪ್ರತಿಭಟನೆ ನಲ್ಲಿ ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಮಾತನಾಡಿ ನನ್ನ ಅಧಿಕಾರದ ಅವಧಿಯಲ್ಲಿ ಮಾಡಿದ್ದ ತಿತಿಮತಿ ಗೋಣಿಕೊಪ್ಪ […]

ಕೊಡಗು – PWD ಎಂಜಿನಿಯರ್ ಗಿರೀಶ್ ಕಚೇರಿ, ಹಾಗೂ ಮನೆಯಮೇಲೆ ಲೊಕಾಯುಕ್ತ ದಾಳಿ

ಜನವಾಹಿನಿ News ಮಡಿಕೇರಿ : ಲೋಕೋಪಯೋಗಿ ಕಚೇರಿ ಸಹಾಯಕ‌ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ರವರ ಮಡಿಕೇರಿ‌ ಕಚೇರಿ, ಕುಶಾಲನಗರ, ಮೈಸೂರಿನ ಮನೆಗಳ‌ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ‌ ಆಸ್ತಿ ಸಂಪಾದನೆ ದೂರಿನ ಹಿನ್ನೆಲೆ ಲೋಕಾಯುಕ್ತ DYSP ದಿನಕರ್ ಶೆಟ್ಟಿ ನೇತೃತ್ವದಲ್ಲಿ ಮೈಸೂರಿನಲ್ಲಿ ದಾಳಿ ನಡೆಸಲಾಗಿದ್ದು, ಮಡಿಕೇರಿಯಲ್ಲಿ ಲೋಕಾಯುಕ್ತ ಸಬ್ ಇನ್ಸ್‌ಪೆಕ್ಟರ್ ವೀಣಾ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಏಕ ಕಾಲದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಅಗತ್ಯ ದಾಖಲೆಗಳು ಹಾಗೂ ಕಡತಗಳನ್ನು ಪರಿಶೀಲಿಸಿದ್ದಾರೆ.  

ಗಾಳಿಬೀಡು; ಕುಷ್ಠರೋಗ ಪತ್ತೆ ಆಂದೋಲನಕ್ಕೆ ಚಾಲನೆ

  ಜನವಾಹಿನಿ News ಮಡಿಕೇರಿ : ಗಾಳಿಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಗಾಳಿಬೀಡು ಗ್ರಾಮದಲ್ಲಿ ಕುಷ್ಟರೋಗ ಪತ್ತೆ ಹಚ್ಚುವ ಆಂದೋಲನದಡಿಯಲ್ಲಿ ನವೆಂಬರ್, 24 ರಿಂದ ಡಿಸೆಂಬರ್, 09 ರವರೆಗಿನ 14 ದಿನಗಳು ಆಶಾ ಕಾರ್ಯಕರ್ತರು ಮತ್ತು ಸ್ವಯಂ ಸೇವಕರು ಮನೆ ಮನೆಗಳಿಗೆ ಭೇಟಿ ನೀಡಿ ರೋಗದ ಚಿಹ್ನೆಗಳನ್ನು ಪರೀಕ್ಷಿಸಿ ಆರೋಗ್ಯ ಶಿಕ್ಷಣ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಶಿ ಕಿರಣ್ ಅವರು ಚಾಲನೆ ನೀಡಿದರು. ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ […]

ದೇಶಭಕ್ತಿ “ಗಾನ ಸುಧೆ’ ಗಾಯನಕ್ಕೆ‌ ವರ್ಣರಂಜಿತ ತೆರೆ :: ವಿದ್ಯಾರ್ಥಿಗಳಲ್ಲಿ ಶಿಸ್ತು, ರಾಷ್ಟ್ರೀಯ ಭಾವೈಕ್ಯತೆ ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿ : ಬಿ ಕೆ ಬಸವರಾಜ್

  ಜನವಾಹಿನಿ News  ಮಡಿಕೇರಿ : ಭಾರತ್ ಸ್ಕೌಟ್ಸ್, ಗೈಡ್ಸ್ ಕರ್ನಾಟಕ, ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಭಾನುವಾರ ಮಡಿಕೇರಿ ನಗರದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮೈಸೂರು ವಿಭಾಗಮಟ್ಟದ “ದೇಶಭಕ್ತಿ ಗೀತ ಗಾಯನ “ಗಾನ ಸುಧೆ’ ಕಾರ್ಯಕ್ರಮಕ್ಕೆ ಭಾನುವಾರ ಸಂಜೆ ವರ್ಣರಂಜಿತ ತೆರೆ ಬಿದ್ದಿತು. ವಿಭಾಗಮಟ್ಟದ ಎಂಟು ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ತಮ್ಮ ಸುಶ್ರಾವ್ಯ ಕಂಠದಿಂದ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ಸಮಾರೋಪ ಸಮಾರಂಭದಲ್ಲಿ ಸಮಾರೋಪ […]

ಚೆನ್ನಂಗಿ ಶಾಲೆಯಲ್ಲಿ ಮಕ್ಕಳೇ ಆಯೋಜಿಸಿದ ಕಾರ್ಯಕ್ರಮ : ವಿದ್ಯಾರ್ಥಿಗಳ ಪ್ರತಿಭೆಗೆ ಗಣ್ಯರ ಮೆಚ್ಚುಗೆ

  ಜನವಾಹಿನಿ News ಮಡಿಕೇರಿ : ಶಾಲೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮಗಳನ್ನು ನೋಡುತ್ತಾ ಕೇಳುತ್ತಾ ಕುಳಿತುಕೊಳ್ಳುವ ವಿದ್ಯಾರ್ಥಿಗಳು ತಾವೆ ಕಾರ್ಯಕ್ರಮ ಆಯೋಜಿಸಿ ವೇದಿಕೆ ಮೇಲೆ ಕುಳಿತು ನಿರೂಪಣೆ, ಸ್ವಾಗತ, ಭಾಷಣ ಮಾಡುವ ಮೂಲಕ ಹಾಡಿನೊಂದಿಗೆ ನೃತ್ಯ ಮಾಡಿ ನಾವು ಯಾರಿಗೂ ಕಮ್ಮಿ ಇಲ್ಲಾ ಎಂಬಂತೆ ಕಾರ್ಯಕ್ರಮಕ್ಕೆ ಬಂದ ಗಣ್ಯರು ಹಾಗೂ ಪೋಷಕರ ಗಮನ ಸೆಳೆದರು. ವಿರಾಜಪೇಟೆ ತಾಲ್ಲೂಕಿನ ಚೆನ್ನಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚನ್ನಯ್ಯ ನಕೊಟೆ ಕ್ಲಸ್ಟರ್ ಮಟ್ಟದ ಪೋಷಕರು -ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ […]

ಹಿಟ್ ಅಂಡ್ ರನ್ : ಗೋಣಿಕೊಪ್ಪ – ಕೈಕೇರಿ ಬಳಿ ಅಪರಿಚಿತ ವ್ಯಕ್ತಿ ಸಾವು

ಜನವಾಹಿನಿ News ಗೋಣಿಕೊಪ್ಪ : ಗೋಣಿಕೊಪ್ಪಲು ವಿರಾಜಪೇಟೆಯ ಮುಖ್ಯ ರಸ್ತೆ ಕೈಕೇರಿ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ಪಾದಚಾರಿಗೆ ವಾಹನ ಡಿಕ್ಕಿಪಡಿಸಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ತಲೆ ಹಾಗೂ ಎದೆ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳು ಉಂಟಾಗಿ ಮೃತಪಟ್ಟಿದ್ದಾರೆ ಎಂದು ಗೋಣಿಕೊಪ್ಪಲು ಆಸ್ಪತ್ರೆಯ ವೈದ್ಯಧಿಕಾರಿಗಳು ದೃಢಪಡಿಸಿದ್ದಾರೆ. ಅಂದಾಜು 55 ವರ್ಷಪ್ರಾಯದ ಕೂಲಿ ಕಾರ್ಮಿಕ ಎಂದು ಗುರುತಿಸಲಾಗಿದ್ದು ಇವರ ಪರಿಚಯ ಇರುವವರು, ಹಾಗೂ ಕುಟುಂಬಸ್ಥರು ಗೋಣಿಕೊಪ್ಪಲು ಪೊಲೀಸ್ ಠಾಣೆ ಅಥವಾ […]

ಏ.2 ರಿಂದ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆ

  ಜನವಾಹಿನಿ News ಮಡಿಕೇರಿ : ಮುಲ್ಲೇಂಗಡ ಒಕ್ಕದ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಕೊಡವ ಕೌಟುಂಬಿಕ ಕಬಡ್ಡಿ ನಮ್ಮೆಯನ್ನು ೨೦೨೬ರ ಏ.೨,೩,೪ ರಂದು ಕಂಡಂಗಾಲ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾಕೂಟದ ಸಂಚಾಲಕ ಮುಲ್ಲೇಂಗಡ ಮದೋಷ್ ಪೂವಯ್ಯ ತಿಳಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆ ತಾಲೂಕು ಕಂಡಂಗಾಲ ಗ್ರಾಮದಲ್ಲಿ ಮುಲ್ಲೇಂಗಡ ಒಕ್ಕ ಐನ್ ಮನೆ ಹೊಂದಿದೆ. ಕೊಡವ ಸಮುದಾಯಬಾಂಧವರಿಗೆ ಹಾಕಿ, ಕ್ರಿಕೆಟ್, ಹಗ್ಗಜಗ್ಗಾಟ ಇತ್ಯಾದಿ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಉತ್ತೇಜಿಸು ನಿಟ್ಟಿನಲ್ಲಿ […]

ಮಹಿಳೆಯ ಮೊಬೈಲ್ ಕದ್ದು ಪರಾರಿಯಾಗಿದ್ದ ಆರೋಪಿಗಳು ಅಂದರ್

  ಜನವಾಹಿನಿ News ಸಿದ್ದಾಪುರ : ಬಸ್ ತಂಗುದಾಣದಲ್ಲಿ ನಿಂತಿದ್ದ ಮಹಿಳೆಯ ಕೈಯಲ್ಲಿದ್ದ ಮೊಬೈಲ್ ಅನ್ನು ಕಸಿದು ಪರಾರಿ ಆಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟ್ಟದಹಳ್ಳ ಪಂಜರಿ ಎರವರ ಸಿದ್ದಯ್ಯ (20) ಮತ್ತು ಪಂಜರಿ ಎರವರ ಮಾದಪ್ಪ (26) ಬಂಧಿತ ಆರೋಪಿಗಳಾಗಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪುಲಿಯೇರಿ ಗ್ರಾಮದ ಶೈನಿ ಡಿ. ಎಂಬುವವರು ನ. 15 ರಂದು ಸಂಜೆ ಅಂದಾಜು 5 ಗಂಟೆ ಸಮಯದಲ್ಲಿ ಬಾಡಗ ಬಾಣಂಗಾಲ ಗ್ರಾಮದ ಮಾರ್ಗೋಲ್ಲಿ ಟಾಟಾ ಕಾಫಿ ಎಸ್ಟೇಟ್ ಸಮೀಪದ […]

ಕಾಫಿ ತೋಟಗಳ ನಡುವೆ ಶರ ವೇಗದಲ್ಲಿ ಪೈಪೋಟಿ ನೀಡಿದ ರ್‍ಯಾಲಿ ಪಟುಗಳು – ಕಾರುಗಳ  ಪೈಪೋಟಿಗೆ ಪ್ರೇಕ್ಷಕರು ಫುಲ್ ಫಿದಾ 

ಚಾಲನೆ ಸಂದರ್ಭ ಪಲ್ಟಿಯಾದ ಎರಡು ಕಾರು – 2ನೇ ದಿನ ತಾಂತ್ರಿಕ ದೋಷದಿಂದ ಹೊರಗುಳಿದ 10ಕ್ಕೆೊ ಹೆಚ್ಚು ಕಾರುಗಳು ಜನವಾಹಿನಿ News ಮಡಿಕೇರಿ :  ಬ್ಲೂ ಬ್ಯಾಂಡ್  ಎಫ್ಎಂ ಎಸ್‌ಸಿಐ ಇಂಡಿಯನ್ ನ್ಯಾಷನಲ್ ರ್‍ಯಾಲಿ ಚಾಂಪಿಯನ್ಶಿಪ್ ನೇತೃತ್ವದಲ್ಲಿ  ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ಸಾಹಕಾರದೊಂದಿಗೆ ರೋಬಸ್ಟಾ 2025 ರ್‍ಯಾಲಿಯು ಪಾಲಿಬೆಟ್ಟ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಕಡಿದಾದ ರಸ್ತೆಯಲ್ಲಿ  ಸಂಚರಿಸಿ  ಗುರಿ ಮುಟ್ಟಲು ಅರಸಹಾಸ ಪಟ್ಟಲು.  ನಿಗದಿತ ಸಮಯ ಮುಟ್ಟಲು ತಾ ಮುಂದು ನಾ ಮುಂದು ಎಂಬಂತೆ   ಕಾರುಗಳು ಸರವೇಗದಲ್ಲಿ […]

ಇಯರ್ ಎಂಡ್ ಕ್ರಿಕೆಟ್ ಕಪ್ : ಪ್ರತಿಭೆಗಳನ್ನು ಗುರುತಿಸಲು, ಉತ್ತಮ ಬಾಂಧವ್ಯ ಬೆಳೆಯಲು ಕ್ರೀಡೆ ಸಹಕಾರಿ : ವಕೀಲ ಪ್ರಶಾಂತ್

  ಜನವಾಹಿನಿ News ಮಡಿಕೇರಿ : ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಬಾಂಧವ್ಯ ಬೆಳೆಯುತ್ತೆ, ಜತೆಗೆ ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಹಕಾರಿ ಆಗುದರ ಜತೆಗೆ ಪ್ರತಿಭೆಗಳನ್ನು ಗುರುತಿಸಲು ಕೂಡ ಅನುಕೂಲವಾಗುತ್ತೆ ಎಂದು ಅಮ್ಮತ್ತಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ವಕೀಲ ಪ್ರಶಾಂತ್ ಅಭಿಪ್ರಾಯಪಟ್ಟರು. ಟೀಂ ರೆಟ್ರೋ ವತಿಯಿಂದ ಇಂಜಿಲಗೆರೆ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ, ಇಯರ್ ಎಂಡ್ ಕ್ರಿಕೆಟ್ ಕಪ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಿಬ್ಬನ್ ಕಟ್ ಮಾಡಿದ ಬಳಿಕ ಬ್ಯಾಟಿಂಗ್ ಮಾಡುವ […]