Breaking News :

ಸ್ವಾತಂತ್ರ್ಯದ ದಿನ ಪ್ಯಾಲೆಸ್ತೀನ್ ಬಾವುಟ ಪ್ರದರ್ಶನ; ಐವರು ಪೊಲೀಸ್ ವಶಕ್ಕೆ

ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ತುಮಕೂರಿನ ಜಿಕೆಬಿಎಂಎಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಸ್ಥಳಕ್ಕೆ ಬಂದ ಯುವಕರ ಗುಂಪು ಯುದ್ಧ ಪೀಡಿತ ಪ್ಯಾಲೆಸ್ತೀನ್ ಬಾವುಟ ಪ್ರದರ್ಶನಕ್ಕೆ ಯತ್ನ ನಡೆಸಿದ ಹಿನ್ನೆಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುಣಿಗಲ್‌ ಪಟ್ಟಣದ ಷರೀಫ್‌ ಮೊಹಲ್ಲಾ ನಿವಾಸಿಗಳಾದ ಜಾವೀದ್‌ ಪಾಷಾ ಅಲಿಯಾಸ್ ಚೋಟು (23), ನ್ಯಾಮತ್‌ ಉಲ್ಲಾ (28) ಮತ್ತು ಫುರ್ಕಾನ್‌ (18) ಬಂಧಿತರು. ಫುರ್ಕಾನ್‌ ವಿದ್ಯಾರ್ಥಿಯಾಗಿದ್ದು, ಜಾವೀದ್‌ ಪೈಂಟಿಂಗ್‌ ಕೆಲಸ ಮಾಡುತ್ತಿದ್ದ. ಇದಲ್ಲದೆ ಇಬ್ಬರು ಬಾಲಕರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಕುಣಿಗಲ್‌ ಸರ್ಕಾರಿ […]

ಮಂಗಳೂರು; ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಶಾಲಾ ಶಿಕ್ಷಕಿ ಶಾಹಿದಾ ಮೃತ್ಯು

ಮಂಗಳೂರು ಬಂದರ್ ನಲ್ಲಿ  ನಡೆದ ರಸ್ತೆ ಅಪಘಾತದಲ್ಲಿ ಶಿಕ್ಷಕಿಯೋರ್ವರು ಮೃತಪಟ್ಟಿರುವ ಘಟನೆ ನಡೆದಿದೆ. ನಗರದ ಬೆಂಗರೆಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಶಾಹಿದಾ ಮೃತಪಟ್ಟವರು. ಇವರ ಪತಿ ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ಶಾಲೆಗೆ ಹೋಗಿದ್ದ ಶಾಹಿದಾ ಅವರು, ಅನಾರೋಗ್ಯದ ಹಿನ್ನಲೆಯಲ್ಲಿ ಮರಳಿ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಕಾರೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.  

ಮಾಜಿ ಕಾರ್ಪೊರೇಟರ್ ಮೇಲೆ‌ ತಂಡದಿಂದ ಹಲ್ಲೆ

ಮಾಜಿ ಕಾರ್ಪೊರೇಟರ್ ಓರ್ವರ ಮೇಲೆ ಗುರುವಾರ ರಾತ್ರಿ ಹಲ್ಲೆ ನಡೆದಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಮಾಜಿ ಕಾರ್ಪೊರೇಟರ್ ಸತ್ಯನಾರಾಯಣ ರಾಜು ಎಂಬವರ ಮೇಲೆ ಕುಸ್ಕೂರು ಬಳಿ ಜಮೀನು ವಿಚಾರವಾಗಿ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮೀನು ಖರೀದಿ ವಿಚಾರಕ್ಕೆ ಸತೀಶ್ ವ್ಯಾಜ್ಯ ಹೊಂದಿದ್ದರೆನ್ನಲಾಗಿದೆ. ಸತೀಶ್ ಗುರುವಾರ ದಿನ ರಾತ್ರಿ ತಮ್ಮ ಜಮೀನಿನ ಬಳಿ ತೆರಳಿದ್ದಾಗ, ಅವರ ಕಾರಿನ ಮೇಲೆ ದೊಣ್ಣೆಗಳಿಂದ ತಂಡವೊಂದು ದಾಳಿ ನಡೆಸಿದೆ. ಈ ವೇಳೆ ಸತೀಶ್ ಅಲ್ಲಿಂದ ತಪ್ಪಿಸಿಕೊಂಡು ತೆರಳಿದ್ದಾರೆ. […]

ಸ್ವಾತಂತ್ರ್ಯ ದಿನಾಚರಣೆ ಮುಗಿಸಿ ಆಟವಾಡುತ್ತಿದ್ದ ಬಾಲಕ ವಿದ್ಯುತ್ ಶಾಕ್ ಹೊಡೆದು ಮೃತ್ಯು

ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮುಗಿಸಿ ಆಟವಾಡುತ್ತಿದ್ದಾಗ ಕಂಬದಿಂದ ವಿದ್ಯುತ್ ಶಾಕ್ ಹೊಡೆದು ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಹೆಚ್.ಕಾವಲ್ ಗ್ರಾಮದಲ್ಲಿ ನಡೆದಿದೆ. ಹೇಮಂತ್ (8) ಮೃತ ವಿದ್ಯಾರ್ಥಿ.ಹೆಚ್. ಕಾವಲ್ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ಹೇಮಂತ್ ಇಂದು ಸ್ವಾತಂತ್ರ್ಯ ದಿನಾಚರಣೆ ಮುಗಿಸಿ ಆಟವಾಡುವಾಗ ವಿದ್ಯುತ್ ಕಂಬದಿಂದ ಗಯಾ ವೈರ್​ಗೆ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ. ಹಲವು ಬಾರಿ ವಿದ್ಯುತ್ ಕಂಬ ಸರಿಪಡಿಸುವಂತೆ ಕೆಇಬಿ ಅಧಿಕಾರಿಗಳಿಗೆ ಗ್ರಾಮಸ್ಥರ […]

ಚನ್ನಪಟ್ಟಣ ಉಪಚುನಾವಣೆ; ಡಿಸಿಎಂ ಡಿಕೆ ಶಿವಕುಮಾರ್ ಸ್ಪರ್ಧೆ

ಚನ್ನಪಟ್ಟಣದ ಉಪಚುನಾವಣೆ ಕುರಿತಂತೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಚನ್ನಪಟ್ಟಣ ಉಪಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ವೀರಭದ್ರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಡಿಕೆ ಶಿವಕುಮಾರ್, ಮುಂಬರುವ ಚನ್ನಪಟ್ಟಣದ ಉಪಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಎನ್ ಡಿಎ ಮೈತ್ರಿಯಲ್ಲಿ ಈಗಾಗಲೇ ಮಾಜಿ ಸಚಿವ ಸಿಪಿ ಯೋಗೇಶ್ವರ್ ಕೂಡ ಬಂಡಾಯ ಸ್ಪರ್ಧೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ಬಿಜೆಪಿಯಲ್ಲಿ ಸಹಜವಾಗಿ ಅಸಮಾಧಾನ ಕಂಡುಬರುತ್ತಿದೆ. […]

ಒಂದೇ ಕುಟುಂಬದ ಮೂವರು ಹೇಮಾವತಿ ನದಿ ಕಾಲುವೆಗೆ ಹಾರಿ ಆತ್ಮಹತ್ಯೆ

ಸಾಲ ವಾಪಸ್ಸು ತೀರಿಸಲಾಗದೆ, ಒಂದೇ ಕುಟುಂಬದ ಮೂವರು ಹೇಮಾವತಿ ನದಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕೆರೆಬೀದಿಯಲ್ಲಿ ನಡೆದಿದೆ. ಸಾಲಬಾಧೆ ತಾಳಲಾರದೆ ಪತಿ, ಪತ್ನಿ ಹಾಗೂ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೇಮಾವತಿ ನದಿ ಕಾಲುವೆಗೆ ಹಾರಿ ಪತಿ ಶ್ರೀನಿವಾಸ್, ಪತ್ನಿ ಶ್ವೇತಾ ಹಾಗೂ ಪುತ್ರಿ ನಾಗಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಮಂಗಳವಾರ ಮೂವರು ಮನೆಯಿಂದ ಕಾಣೆಯಾಗಿದ್ದರು. ಶ್ರೀನಿವಾಸ್ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಕಾಣೆಯಾದ ಬಳಿಕ ಕುಟುಂಬಸ್ಥರು ಎಲ್ಲೆಡೆ […]

ಬಯಲು ಶೌಚಕ್ಕೆ ತೆರಳಿದ್ದ ಮಹಿಳೆ ಮೇಲೆ ಮಣ್ಣು ಸುರಿದ ಜೆಸಿಬಿ ಚಾಲಕ; ಮಹಿಳೆ ಉಸಿರುಗಟ್ಟಿ ಸಾವು

ಬಯಲು ಶೌಚಕ್ಕೆ ಹೋದ ಮಹಿಳೆ ಮೇಲೆ ಜೆಸಿಬಿ ಚಾಲಕ ತಿಳಿಯದೆ ಮಣ್ಣಿನ ರಾಶಿ ಹಾಕಿದ್ದು, ಉಸಿರಾಡಲು ಆಗದೆ ಮಹಿಳೆ ಮೃತಪಟ್ಟ ಘಟನೆ ರಾಯಚೂರು ನಗರದ ಆಶಾಪುರ ರಸ್ತೆಯ ಜನತಾ ಕಾಲೋನಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ತಾಯಮ್ಮ (32) ಎಂದು ಗುರುತಿಸಲಾಗಿದೆ. ನಿವೇಶನ ಸ್ವಚ್ಚ ಮಾಡುತ್ತಿದ್ದ ಜೆಸಿಬಿ ಚಾಲಕ ಆಕಸ್ಮಾತ್ ಆಗಿ ಮಣ್ಣು ಹಾಕಿದ್ದಾನೆ. ಆ ಸ್ಥಳದಲ್ಲಿದ್ದ ಮಹಿಳೆ ತಾಯಮ್ಮ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಚಾಲಕನನ್ನು ವಶಕ್ಕೆ […]

ಬಂಟ್ವಾಳ; ಡ್ರಾಪ್ ಕೊಡುವ ನೆಪದಲ್ಲಿ ನಗ, ನಗದು ದೋಚಿ ಪರಾರಿಯಾದ ಗ್ಯಾಂಗ್

ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಕುಳ್ಳಿರಿಸಿ ತಂಡವೊಂದು ನಗದು ದೋಚಿ ಕಾರಿನಿಂದ ತಳ್ಳಿ ಹಾಕಿ ಪರಾರಿಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಕೊಡಗಿನ ವಿರಾಜಪೇಟೆ ನಿವಾಸಿಯಾಗಿರುವ ಎಂ. ಗಂಗಾಧರ ಅವರು ನಗ ನಗದು ಕಳೆದು ಕೊಂಡ ವ್ಯಕ್ತಿಯಾಗಿದ್ದು, ಇವರು ಕಳೆದ ಶುಕ್ರವಾರ ವಿರಾಜಪೇಟೆಯಿಂದ ಬಿಸಿ ರೋಡ್‌ ಗೆ ರಾತ್ರಿ ಸುಮಾರು ಒಂಬತ್ತು ಗಂಟೆಯ ವೇಳೆಗೆ ಬಂದಿದ್ದರು. ಬಂಟ್ವಾಳದ ನರಿಕೊಂಬಿನಲ್ಲಿರುವ ಅಣ್ಣನ ಮನೆಗೆ ತೆರಳಲು ಬಿ.ಸಿ.ರೋಡ್ ನಲ್ಲಿ ವಾಹನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಅಪರಿಚಿತ ಕಾರೊಂದು […]

ಮದುವೆಗೆ ನಿರಾಕರಿಸಿದ್ದಕ್ಕೆ ಪ್ರಿಯಕರ ಆತ್ಮಹತ್ಯೆ; ಸುದ್ದಿ ತಿಳಿದು ಚಾಕುವಿನಿಂದ ಇರಿದುಕೊಂಡ ಪ್ರಿಯತಮೆ, ಸ್ಥಿತಿ ಗಂಭೀರ

ಪ್ರೀತಿಸಿದ ಯುವತಿಯನ್ನು ಮದುವೆಗೆ ಕುಟುಂಬದವರು ಒಪ್ಪಿಲ್ಲ ಎಂದು  ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು,  ಈ ವಿಷಯ ತಿಳಿದು ಪ್ರಿಯತಮೆ ಕೂಡಾ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕಾಯಿಸೊಪ್ಪಿನ ಬೀದಿಯಲ್ಲಿ ನಡೆದಿದೆ. 24 ವರ್ಷದ ಯಶ್ವಂತ್‌ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾರೆ. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಇವರ ಮದುವೆಗೆ ಯಶ್ವಂತ್‌ ಮನೆಯವರು ಒಪ್ಪಿಲ್ಲ. ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆತನ ಪ್ರಿಯತಮೆ ಕೂಡಾ ಚುಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ […]

ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೌಮ್ಯಾ ರೆಡ್ಡಿ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕಿ!

ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಸಚಿವ ರಾಮಲಿಂಗ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಯವರನ್ನು  ನೇಮಕ ಮಾಡಿರುವುದಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕವಿತಾ ರೆಡ್ಡಿ, ಪಕ್ಷಕ್ಕಾಗಿ ದುಡಿಯುತ್ತಿರುವ, ಅಧ್ಯಕ್ಷರಾಗಲು ಅರ್ಹತೆಯಿರುವ ಮತ್ತು ಕಳೆದ 2 ವರ್ಷಗಳಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಅನೇಕ ಮಹಿಳಾ ನಾಯಕರಿಗೆ ಇದರಿಂದ ತೀವ್ರ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ. ಅಂಬೇಡ್ಕರ್ ವಾದಿಯಾಗಿ ನಾನು ಕಂಡಂತೆ ಸ್ವತಂತ್ರ ಮಹಿಳಾ ನಾಯಕರನ್ನು ಪಕ್ಷದಲ್ಲಿ ತಮ್ಮ ಸ್ವಂತ […]